ಪದ್ಮಸಾಲಿ ಸಮಾಜದ ಆದ್ಯ ದೈವ ಭಕ್ತ ಶ್ರೀ ಮಾರ್ಖಂಡೇಶ್ವರ ಜಯಂತಿ ಭಕ್ತಿಭಾವದಿಂದ ಆಚರಣೆ

ಪದ್ಮಸಾಲಿ ಸಮಾಜದ ಆದ್ಯ ದೈವ ಭಕ್ತ ಶ್ರೀ ಮಾರ್ಖಂಡೇಶ್ವರ ಜಯಂತಿ ಭಕ್ತಿಭಾವದಿಂದ ಆಚರಣೆ

ಪದ್ಮಸಾಲಿ ಸಮಾಜದ ಆದ್ಯ ದೈವ ಭಕ್ತ ಶ್ರೀ ಮಾರ್ಖಂಡೇಶ್ವರ ಜಯಂತಿ ಭಕ್ತಿಭಾವದಿಂದ ಆಚರಣೆ

ಕಲಬುರಗಿ: ಪದ್ಮಸಾಲಿ ಸಮಾಜದ ಆದ್ಯ ದೈವ ಭಕ್ತರಾದ ಶ್ರೀ ಮಾರ್ಖಂಡೇಶ್ವರ ಜಯಂತಿಯನ್ನು ಓಂ ನಗರ ದೇವಸ್ಥಾನದಲ್ಲಿ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ–ಅಭಿಷೇಕ ಜರುಗಿದ್ದು, ನಂತರ ಬೆಳಿಗ್ಗೆ 11 ಗಂಟೆಗೆ ತೊಟ್ಟಿಲೋತ್ಸವ ನೆರವೇರಿಸಲಾಯಿತು.

ದೇವಸ್ಥಾನ ಸಮಿತಿಯವರು ಹಮ್ಮಿಕೊಂಡ ಕಾರ್ಯದಲ್ಲಿ ಸಪ್ತ ನೇಕಾರ ಸೇವಾ ಸಂಘದ ಪದಾಧಿಕಾರಿಗಳ ಭಾಗವಹಿಸಿದರು.

 ಕಾರ್ಯಕ್ರಮದ ಉಪಾಧ್ಯಕ್ಷರಾದ ನ್ಯಾಯವಾದಿ ತ್ರಿವೇದಿ ವಿಜಯಕುಮಾರರು ಆಳ ಭಕ್ತ ಸಮೂಹ ಹಾಗೂ ಗಣ್ಯ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ ಕಾಶೀನಾಥ್ ಶೇರ್ಲಾ ಪ್ರಾಸ್ತಾವಿಕವಾಗಿ ಮಾತನಾಡಿ, ಆದ್ಯ ಕುಲಗುರು ಶ್ರೀ ಮಾರ್ಖಂಡೇಶ್ವರ ಜಯಂತಿಯ ಮಹತ್ವವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಪರವಾಗಿ ಸಮಾಜದ ಅಧ್ಯಕ್ಷರಾದ ಶ್ರೀ ನಾಗರಾಜ ಕುಸಮಾರವರು ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಪದ್ಮಸಾಲಿ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಆಯ್ಕೆಗೊಂಡ ಕಲಬುರಗಿಯ ಖ್ಯಾತ ಉದ್ಯಮಿ ಹಾಗೂ ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ ಶ್ರೀ ಪ್ರದೀಪ ಸಂಗಾ ರವರನ್ನು ಹಾಗೂ ಸಂವಿಧಾನದ ಅನುಚ್ಛೇದ 171 ತಿದ್ದುಪಡಿ ಹೋರಾಟ ಸಮಿತಿ (ಕೇಂದ್ರ ಸಮಿತಿ), ಬೆಂಗಳೂರು ನಿರ್ಣಯದ ಮೇರೆಗೆ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷರಾಗಿ ಆಯ್ಕೆಗೊಂಡ ನೇಕಾರ ಹೋರಾಟಗಾರ, ನ್ಯಾಯವಾದಿ ಜೆ. ಎಸ್. ವಿನೋದಕುಮಾರ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲರು ಹಾಗೂ ಸಪ್ತ ನೇಕಾರ ಸಂಘದ ಅಧ್ಯಕ್ಷರಾದ ಶಿವಲಿಂಗಪ್ಪ ಅಷ್ಟಗಿ, ಕಾರ್ಯದರ್ಶಿ ಚಂದ್ರಶೇಖರ ಮ್ಯಾಳಗಿ, ವಕೀಲ ಸತೀಶ ಜಮಖಂಡಿ, ಡಾ. ಬಸವರಾಜ ಚನ್ನಾ, ಹಿತ್ತಲಶಿರೂರ ಗ್ರಾಮದ ಶ್ರೀ ರಾಮಲಿಂಗ ಚೌಡೇಶ್ವರಿ ದೇವಸ್ಥಾನದ ಅಧ್ಯಕ್ಷ ವೀರಭಸವಂತಪ್ಪ ಬುಳ್ಳಾ, ಜಿಲ್ಲಾ ನೇಕಾರ ಒಕ್ಕೂಟದ ಕಾರ್ಯದರ್ಶಿ ಶಾಂತಕುಮಾರ ಯಳಸಂಗಿ, ದೇವಸ್ಥಾನ ಸಮಿತಿಯ ರಾಮಚಂದ್ರ ಬಡಗೂ, ಸೇವಕರಾದ ವಿಷ್ಣು ಬಡಗೂ, ಶಿವಕುಮಾರ ಶೇರ್ಲಾ, ಪ್ರಕಾಶ್ ಶೇರ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮಹಿಳಾ ಸಮಿತಿಯ ಸದಸ್ಯರು ಹಾಗೂ ಮುದ್ದು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅಂತ್ಯದಲ್ಲಿ ಎಲ್ಲಾ ಭಕ್ತರಿಗೆ ಪ್ರಸಾದ ವಿತರಿಸಲಾಯಿತು ಎಂದು ಆರ್. ಕೋಷ್ಠಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.