ಶಿಕ್ಷಕಿ ಓಂಕಾರಿ ಹೆಗಡೆ ಅವರಿಗೆ ‘ಸಾವಿತ್ರಿಬಾಯಿ ಪುಲೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ – 2025’

ಶಿಕ್ಷಕಿ ಓಂಕಾರಿ ಹೆಗಡೆ ಅವರಿಗೆ ‘ಸಾವಿತ್ರಿಬಾಯಿ ಪುಲೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ – 2025’
ಶಿಕ್ಷಕಿ ಓಂಕಾರಿ ಹೆಗಡೆ ಅವರಿಗೆ ‘ಸಾವಿತ್ರಿಬಾಯಿ ಪುಲೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ – 2025’

ಶಿಕ್ಷಕಿ ಓಂಕಾರಿ ಹೆಗಡೆ ಅವರಿಗೆ ‘ಸಾವಿತ್ರಿಬಾಯಿ ಪುಲೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ – 2025

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕಿ ಶ್ರೀಮತಿ ಓಂಕಾರಿ ಹೆಗಡೆ ಅವರನ್ನು “ಮಾತೆ ಸಾವಿತ್ರಿಬಾಯಿ ಪುಲೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ – 2025”ಕ್ಕೆ ಭಾಜನರನ್ನಾಗಿ ಮಾಡಲಾಗಿದೆ.

ನವದೆಹಲಿಯ ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ)ಯ ಧಾರವಾಡ ಕೇಂದ್ರದಿಂದ ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಆಶ್ರಯದಲ್ಲಿ, **ಶಿಕ್ಷಕರ ದಿನಾಚರಣೆ** ಪ್ರಯುಕ್ತ ಸೆಪ್ಟೆಂಬರ್ 6, 2025ರಂದು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು **ಸೌಭಾಗ್ಯ ಎ.ಎಂ.**, ಪ್ರಧಾನ ಕಾರ್ಯದರ್ಶಿ **ಇಂದಿರಾ ಎನೋ.**, ಹಾಗೂ ಕೋಶಾಧ್ಯಕ್ಷೆ **ನೂರ್ ಜಹಾನ್ ಜಿ.** ಉಪಸ್ಥಿತರಿದ್ದು, ಶಿಕ್ಷಕಿ ಓಂಕಾರಿ ಹೆಗಡೆ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದರು.

ಈ ಪ್ರಶಸ್ತಿ, ಶಿಕ್ಷಣ ಕ್ಷೇತ್ರದಲ್ಲಿ ಮಹಿಳಾ ಶಿಕ್ಷಕಿಯರ ತ್ಯಾಗ, ಪರಿಶ್ರಮ ಮತ್ತು ವಿದ್ಯಾರ್ಥಿಗಳ ಜೀವನ ರೂಪಿಕೆಯಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶ ಹೊಂದಿದೆ.