ಮಹಾದೇವಪ್ಪ ರಾಂಪೂರೆ ಶೈಕ್ಷಣಿಕ ಕೊಡುಗೆ ಸ್ಮರಣೀಯ – ಡಾ. ಎಚ್.ಎಸ್. ಹೊಸಮನಿ

ಮಹಾದೇವಪ್ಪ ರಾಂಪೂರೆ ಶೈಕ್ಷಣಿಕ ಕೊಡುಗೆ ಸ್ಮರಣೀಯ – ಡಾ. ಎಚ್.ಎಸ್. ಹೊಸಮನಿ

ಮಹಾದೇವಪ್ಪ ರಾಂಪೂರೆ ಶೈಕ್ಷಣಿಕ ಕೊಡುಗೆ ಸ್ಮರಣೀಯ – ಡಾ. ಎಚ್.ಎಸ್. ಹೊಸಮನಿ

ಆಳಂದ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಹರಿಕಾರ ಹಾಗೂ ಪ್ರಾಮಾಣಿಕ ರಾಜಕಾರಣಿ ಡಾ. ಎಚ್.ಎಸ್. ಹೊಸಮನಿ ಅವರು, ಶಿಕ್ಷಣದ ಮೂಲಕ ಸಮಾಜವನ್ನು ಬೆಳಗಿಸಿದ ಮಹಾನ್ ವ್ಯಕ್ತಿಯಾಗಿ ದಿ. ಶ್ರೀ ಮಹಾದೇವಪ್ಪ ರಾಂಪೂರೆ ಅವರು ಸದಾ ಸ್ಮರಣೀಯರಾಗಿದ್ದಾರೆ ಎಂದು ಹೇಳಿದರು.

ಅವರು ದಿ. ಮಹಾದೇವಪ್ಪ ಹೈ.ಕ. ಶಿಕ್ಷಣ ಸಂಸ್ಥೆಯ ಎ. ವ್ಹಿ. ಪಾಟೀಲ ಪದವಿ ಮಹಾವಿದ್ಯಾಲಯ, ಆಳಂದದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ದಿ. ಶ್ರೀ ಮಹಾದೇವಪ್ಪ ರಾಂಪೂರೆ ಅವರ 53ನೇ ಪುಣ್ಯಸ್ಮರಣೆಯ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೈದರಾಬಾದ್ ಕರ್ನಾಟಕ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಶೈಕ್ಷಣಿಕ ಕ್ರಾಂತಿ ಮೂಡಿಸಿ, ಶಿಕ್ಷಣದ ಮೇಲೆ ಬೆಳಕು ಚೆಲ್ಲಿದ ಶಿಕ್ಷಣ ಶಿಲ್ಪಿ ಹಾಗೂ ಉದ್ಯೋಗದಾತರಾಗಿದ್ದವರು ಮಹಾದೇವಪ್ಪ ರಾಂಪೂರೆ ಎಂದು ಅವರು ಶ್ಲಾಘಿಸಿದರು.

ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ ಡಾ. ಎಸ್. ಎಸ್. ಕಮ್ಮಾರ ಅವರು, ಮಹಾದೇವಪ್ಪ ರಾಂಪೂರೆ ಅವರ ಜೀವನ, ಸಾಧನೆ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳ ಬಗ್ಗೆ ವಿವರವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಾ. ರಾಜಶೇಖರ ಬಾಬನೂರು, ಡಾ. ರಮೇಶ ಮೊಸರುಬು ಉಪಸ್ಥಿತರಿದ್ದರು. ಇದೇ ವೇಳೆ ಡಾ. ವೆಂಕಟೇಶ್ ಪೂಜಾರಿ, ಡಾ. ಟೀಕಪ್ಪ ಎಂ., ಶ್ರೀ ಸಿದ್ದರಾಮ ಬಿಜಾಪುರ, ಡಾ. ಜೈಪ್ರಕಾಶ ಬಾವಿಮನಿ, ಡಾ. ಶ್ರೀಮಂತ್, ಬಸವರಾಜ ಶೃಂಗೇರಿ, ಅಂಬರೀಶ ಕುಂಬಾರ, ಸಂಗೀತ ಅಷ್ಟಗಿ, ರಾಜಶ್ರೀ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಾದ ಬಸವರಾಜ ಪಾಟೀಲ್, ಸತೀಶ್ ಪಾಟೀಲ್, ದಿನೇಶ್ ಪಾಟೀಲ್, ಮಲ್ಲಿಕಾರ್ಜುನ ಚಿಚಕೋಟಿ, ಸುನಿಲ್ ಹತ್ತಿ, ರತ್ನಪ್ರಭಾ ಪಾಟೀಲ್, ಬಸಮ್ಮ ಪಾಟೀಲ್, ಶ್ರೇಯಾ ಪಾಟೀಲ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಡಾ. ಬಬ್ರುವಾಹನ ಅವರು ನಿರೂಪಿಸಿದರು. ಮಲ್ಲಿಕಾರ್ಜುನ್ ಜುಬ್ರೆ ಅವರು ಸ್ವಾಗತಿಸಿದರು. ಸವಿತಾ ಅವರು ವಂದಿಸಿದರು.