ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಕ್ರಾಂತಿಕಾರಿ ಶರಣ ಅಂಬಿಗರ ಚೌಡಯ್ಯ. ಕಮಲಾಪುರದಲ್ಲಿ ಸುರೇಶ್ ಲೇಂಗಟಿ ಹೇಳಿಕೆ.

ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಕ್ರಾಂತಿಕಾರಿ ಶರಣ ಅಂಬಿಗರ ಚೌಡಯ್ಯ.   ಕಮಲಾಪುರದಲ್ಲಿ  ಸುರೇಶ್ ಲೇಂಗಟಿ ಹೇಳಿಕೆ.

.ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಕ್ರಾಂತಿಕಾರಿ ಶರಣ ಅಂಬಿಗರ ಚೌಡಯ್ಯ.

ಕಮಲಾಪುರದಲ್ಲಿ ಸುರೇಶ್ ಲೇಂಗಟಿ ಹೇಳಿಕೆ.

ಕಮಲಾಪುರ ; ಮಾನವ ಕುಲ ಒಂದೇ, ಇಲ್ಲಿ ಯಾರೂ ಮೇಲೂ ಕೀಳಲ್ಲ, ಎಲ್ಲರಿಗೂ ಸಮಾನವಾದ ಸ್ಥಾನ ಮಾನ ಅವಕಾಶ ಸಿಗಬೇಕು ಎಂದು ಕಡ್ಡಿ ಮುರಿದಂಗೆ ಹೇಳುವ ಎದೆಗಾರಿಕೆ ಹೊಂದಿದ್ದ ಏಕೈಕ ಶರಣರೆಂದರೆ ಅವರೇ ನಿಜ ಶರಣ ಅಂಬಿಗರ ಚೌಡಯ್ಯನವರು ಎಂದು ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಹೇಳಿದರು.

 ಕಮಲಾಪುರ ತಹಸಿಲ್ದಾರ್ ಕಛೇರಿಯಲ್ಲಿ ಬುಧವಾರ ಹಮ್ಮಿಕೊಂಡ ಶೀ ನಿಜ ಶರಣ ಅಂಬಿಗರ ಚೌಡಯ್ಯನವರ 906 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೋಲಿ ಕಬ್ಬಲಿಗ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಕಂಡು ಬರುತ್ತಿದ್ದು ಒಳ್ಳೇಯ ಬೆಳವಣಿಗೆ ಅಲ್ಲ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು, , ಒಗ್ಗಟ್ಟಾದರೆ ಮಾತ್ರ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.

ಕೋಲಿ ಸಮಾಜದ ಹಿರಿಯ ಮುಖಂಡ ಬಸವರಾಜ ನಾಟೀಕಾರ ಮಾತನಾಡಿ ಸಮಾಜ ಬಾಂಧವರು ಸತ್ಯ, ನ್ಯಾಯ, ಅಹಿಂಸೆ ಮಾಗ೯ದಲ್ಲಿ ಸಾಗಬೇಕು, ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಸಂಸ್ಕಾರಗಳನ್ನು ಬೇಳೆಸಿಕೊಳ್ಳಬೇಕು, 

ಮಹಾತ್ಮ ಬಸವೇಶ್ವರರ ನೈತೃತ್ವದಲ್ಲಿ ಹಲವಾರು ವಚನಕಾರರಿದ್ದರು, ಇದದ್ದನ್ನು ಇದ್ದಂಗೆ ವಚನಗಳಲ್ಲಿ ಸಾರಿ ಹೇಳಿದ್ದಾರೆ, ಈ ಕಾರಣದಿಂದಲೇ ಅವರನ್ನು ನಿಜ ಶರಣ ಎಂಬ ಬಿರುದು ದೊರಕಿದೆ, ಎಂದರು.

ತಹಶೀಲ್ದಾರ್ ಮಹಮ್ಮದ್ ಮೊಹಸಿನ್ ಮಾತನಾಡಿ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ, ಜಾತಿ, ಲಿಂಗ ರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶರಣರಲ್ಲಿ ಒಬ್ಬರು, ಇಂದಿನ ಯುವ ಜನತೆ ಚೌಡಯ್ಯನವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

 ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಲೇಂಗಟಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರೇಡ್ ೨ ತಹಶೀಲ್ದಾರ್ ಶಿವಕುಮಾರ ಶಾಬಾ, ಸಂತೋಷ್ ಸೋಲಾಪುರ, ಕಂದಾಯ ನಿರೀಕ್ಷಕ ಸುನಿಲಕುಮಾರ, ಮಂಜುನಾಥ ಬಿರಾದಾರ, ಕಮಲಾಕರ, ಕಾಶಿನಾಥ್ ನಾಟೀಕಾರ, ಅಂದಪ್ಪ, ಸಿದ್ದಲಿಂಗ, ಶಿವಶರಣಪ್ಪ ಹರಕಂಚಿ, ಜಗದೇವಪ್ಪ ಅಂಕಲಗಿ, ವಿಜಯಲಕ್ಷ್ಮಿ, ಮಂಜುನಾಥ ಜಮಾದಾರ, ಚಂದ್ರಕಾಂತ ಜಮಾದಾರ, ಗುರು ನಾಟೀಕಾರ, ಆನಂದ ನಾಟಿಕಾರ, ಹಣಮಂತ ಗೊಬ್ಬುರವಾಡಿ, ಅಜು೯ನ ನಾಟೀಕಾರ, ರಾಮು ನಾಟೀಕಾರ, ಲಕ್ಷ್ಮಣ ನೀರ್, ಖೇಮಲಿಂಗ ತಳವಾರ, ಇತರರು ಇದ್ದರು