ಮಣ್ಣೂರ ಯಲ್ಲಮ್ಮ ದೇವಿಯ ಗುಡಿ ಸುತ್ತಲೂ ನೀರು

ಮಣ್ಣೂರ ಯಲ್ಲಮ್ಮ ದೇವಿಯ ಗುಡಿ ಸುತ್ತಲೂ ನೀರು

ಅಫಜಲಪುರ: ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಭೀಮಾ ನದಿಯಲ್ಲಿರುವ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನವು ಸಂಪೂರ್ಣ ನೀರು ತುಂಬಿಕೊಂಡಿದೆ. ಯಲ್ಲಮ್ಮ ದೇವಿ ದರ್ಶನಕ್ಕೆ ಹೋಗುವ ಸಂಪರ್ಕ ಸೇತುವೆ ಸಂಪೂರ್ಣಜಲಾವೃತವಾಗಿದೆ.

ಮಹಾರಾಷ್ಟ್ರದ ಉಜನಿ ಹಾಗೂ ವೀರ ಭಟ್ಕರ್ ಜಲಾಶಯದಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಬಿಟ್ಟಿರುವುದರಿಂದ ದೇವಿ ದೇವಸ್ಥಾನದ ಸುತ್ತಲೂ ನೀರು ಆವರಿಸಿಕೊಂಡಿದೆ.