ವಚನ ಸಾಹಿತ್ಯ ಜನಸಮುದಾಯ ಸಾಹಿತ್ಯ : ಸಚಿವ ಶರಣಪ್ರಕಾಶ

ವಚನ ಸಾಹಿತ್ಯ ಜನಸಮುದಾಯ ಸಾಹಿತ್ಯ : ಸಚಿವ ಶರಣಪ್ರಕಾಶ

ವಚನ ಸಾಹಿತ್ಯ ಜನಸಮುದಾಯ ಸಾಹಿತ್ಯ : ಸಚಿವ ಶರಣಪ್ರಕಾಶ

ಜನ ಸಮುದಾಯಗಳ ಒಕ್ಕೊರಲಿನಿಂದ ಸಮಾನತೆಯ ಬೆಳಕನ್ನು ಉಜ್ವಲಿಸಿದ ಅಣ್ಣ ಬಸವಣ್ಣನವರ ವಚನ ಸಾಹಿತ್ಯ ಇಂದಿಗೂ ಪ್ರಸ್ತುತವಾದ ಮಾಧ್ಯಮವಾಗಿದೆ‌ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಸೇಡಂ ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ಆಯೋಜಿಸಿದ ಬಸವೇಶ್ವರರ 892ನೇ ಜಯಂತ್ಯೋತ್ಸವ ಧರ್ಮ ಸಭೆಯಲ್ಲಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲರು ಭಾಗಿಯಾಗಿ, ಮಾತನಾಡಿದರು.

ತಳ ಸಮುದಾಯದ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು, ಸರ್ವ ಶರಣರನ್ನು ಒಳಗೊಂಡು ವಚನ ಕ್ರಾಂತಿಯನ್ನು ಮೊಳಗಿಸಿದ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ ಆದರ್ಶಮಾನವಾಗಿದೆ‌ ಎಂದು ಸಚಿವರ ತಿಳಿಸಿದರು.

ವೀರಶೈವ ಲಿಂಗಾಯತ ಧರ್ಮದಲ್ಲಿ ಎಲ್ಲರನ್ನೂ ಕರೆದುಕೊಂಡು ಹೋಗುವ ದೊಡ್ಡ ಗುಣವಿದೆ. ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ರಂಗದಲ್ಲಿ ಸಿಂಹಪಾಲು ಪಡೆದಿದ್ದಾರೆ.

ಮುಂದೆಯೂ ಸಹ ವೀರಶೈವ ಲಿಂಗಾಯತ ಧರ್ಮದ ಜೊತೆ ನಾನು ಸದಾ ಪರವಾಗಿರುವೆ, ಸಮಾಜದ ಅಭಿವೃದ್ಧಿ ಕಾರ್ಯದಲ್ಲಿ ಕೈ ಜೋಡಿಸುವೆ ಎಂದು ತಿಳಿಸಿದರು.

ವೇದಿಕೆಯ ಕಾರ್ಯಕ್ರಮಕ್ಕೂ ಮೊದಲು ಶ್ರೀ ಕೊತ್ತಲ ಬಸವೇಶ್ವರರ ದರ್ಶನವನ್ನು ಸಚಿವರು ಪಡೆದುಕೊಂಡರು.

ವೇದಿಕೆಯ ಮೇಲೆ ಹಲವು ಮಠಗಳ ಸ್ವಾಮೀಜಿಯವರು, ಗಣ್ಯರು, ರಾಜಕೀಯ ಮುಖಂಡರು, ಸಮಾಜದ ಹಿರಿಯರು ಉಪಸ್ಥಿತರಿದ್ದರು.