ತಲೆಶ್ಮೀಯಾ ಹಾಗೂ ಮೂಳೆ ಮಜ್ಜೆ ಕಸಿಯ ಕುರಿತು ವಿಶೇಷ ಶಿಬಿರ

ತಲೆಶ್ಮೀಯಾ ಹಾಗೂ ಮೂಳೆ ಮಜ್ಜೆ ಕಸಿಯ ಕುರಿತು ವಿಶೇಷ ಶಿಬಿರ

ತಲೆಶ್ಮೀಯಾ ಹಾಗೂ ಮೂಳೆ ಮಜ್ಜೆ ಕಸಿಯ ಕುರಿತು ವಿಶೇಷ ಶಿಬಿರ

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯ, ಇಂಡಿಯನ್ ಅಕ್ಯಾಡೆಮಿ ಆಫ್ ಫಿಡಿಯಾಟ್ರಿಕ್ಸ ಹಾಗೂ ಎಚ್ ಸಿ ಜಿ ಆಸ್ಪತ್ರಯ ಹೆಮೆಟೋಲಾಜಿ ವಿಭಾಗದ ಡಾ ಇಂತಿಜಾರ್ ಮೆಹದಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ತಲೆಸ್ಮೀಯಾ ಮತ್ತು ಮೂಳೆ ಮಜ್ಜೆಯ ಕಸಿಯ ಬಗ್ಗೆ ವಿಶೇಷ ಶಿಬಿರ ಏರ್ಪಡಿಸಲಾಗಿತ್ತು.

ಮೂಳೆ ಮಜ್ಜೆಯ ಕಸಿಯ ರೋಗವು ಅತ್ಯಂತ ವೆಚ್ಚದಾಯಕವಾಗಿದೆ.ಮೂಳೆ ಮಜ್ಜೆಯ ಕಸಿಯು ವಿಧಾನದ ಬಗ್ಗೆ ಡಾ ಮೆಹದಿಯವರು ಶಿಬಿರದಲ್ಲಿ ಭಾಗವಹಿಸಿದ ವೈಧ್ಯರಿಗೆ ತಿಳಿಸಿದರು. 

ಡ್ರಾಟಿ ಸ್ಟೆಮ್ ಸೆಲ್ ಡೋನರ್ ವರ್ಲ್ಡ್ ವೈಡ್ ಆರ್ಗನೈಜೇಷನ್ ಪ್ರತಿನಿಧಿಯಾದ ಕೌಶಲ್ಯ 31 ಬಗೆಯ ಹ್ಯೂಮನ್ ಲುಕ್ಯೂಸೈಟ್ ಎಂಟಿಜನ್ ಮಾದರಿಗಳನ್ನು ಪ್ರದರ್ಶಿಸಿದರು

ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ ರೂಪಾ ಮಂಗಶೆಟ್ಟಿ ಮಾತನಾಡಿ ನಮ್ಮ ಭಾಗದಲ್ಲಿ ತಲೆಸ್ಮೀಯಾ ಕಾಯಿಲೆ ಹಾಗೂ ಮೂಳೆ ಮಜ್ಜೆಯ ಕಸಿಯ ಬಗ್ಗೆ ಜಾಗೃತಿ ಮೂಡಿಸುವದು ಅಗತ್ಯ ವಾಗಿದೆ ಎಂದು ಹೇಳಿದರು 

ಈ ಸಂದರ್ಭದಲ್ಲಿ ಡಾ ಅಪೂರ್ವ ಎ ಬಿ, ಡಾ ಶರಣ ಕೆ,ಡಾ ಐಶ್ವರ್ಯ ಬಿಜಾಪುರ, ಡಾ ರೋಹಿಣಿ ದೇಸಾಯಿ ಶಿಬಿರದಲ್ಲಿ ಭಾಗವಹಿಸಿದ್ದರು.

ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ ಶರಣಗೌಡ ಪಾಟೀಲ್ ,ವೈಸ್ ಡೀನ್ ಡಾ ಕಪ್ಪೀಕೆರಿ, ವೈದ್ಯಾಧಿಕಾರಿ ಡಾ ಆನಂದ ಗಾರಂಪಳ್ಳಿ ಮಾತನಾಡಿ ಈಗೀನ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಶೀಲ್ ಜಿ ನಮೋಶಿ ಹಾಗೂ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಇಂತಹ ಜನೋಪಯೋಗಿ ವೈದ್ಯಕೀಯ ಶಿಬಿರಗಳನ್ನು ಹೆಚ್ಚು ಹೆಚ್ಚು ಏರ್ಪಡಿಸುತ್ತಿರುವದಕ್ಕೆ ಅಭಿನಂದನೆಗಳನ್ನು ತಿಳಿಸಿದರು.