ವಿವಿಧ ಬೇಡಿಕೆಗಳ ಈಡೇರಿಗಾಗಿ ಒತ್ತಾಯಿಸಿ ದಸಂಸ ದಿಂದ ಸಾಂಕೇತಿಕ ಧರಣಿ ಸತ್ಯಾಗ್ರಹ :..

ವಿವಿಧ ಬೇಡಿಕೆಗಳ ಈಡೇರಿಗಾಗಿ ಒತ್ತಾಯಿಸಿ ದಸಂಸ ದಿಂದ ಸಾಂಕೇತಿಕ ಧರಣಿ ಸತ್ಯಾಗ್ರಹ :..

ವಿವಿಧ ಬೇಡಿಕೆಗಳ ಈಡೇರಿಗಾಗಿ ಒತ್ತಾಯಿಸಿ ದಸಂಸ ದಿಂದ ಸಾಂಕೇತಿಕ ಧರಣಿ ಸತ್ಯಾಗ್ರಹ 

ನಾಗರಾಜ್ ದಂಡಾವತಿ ವರದಿ ಶಹಾಬಾದ : - ತಾಲ್ಲೂಕಿನ ಸಾರ್ವಜನಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ನಗರದ ಡಾ. ಬಿಆರ ಅಂಬೇಡ್ಕರ್ ರವರ ಪ್ರತಿಮೆ ಹತ್ತಿರ ಸಾಂಕೇತಿಕ ಧರಣಿಕ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಶಹಾಬಾದ ಮರಗೋಳ ಕಾಲೇಜ್ ಪಕ್ಕದಲ್ಲೆ ತಾಲೂಕ ಪ್ರಜಾಸೌಧ ಕಟ್ಟಡದ ಕಾಮಗಾರಿ ಕೂಡಲೆ ಪ್ರಾರಂಭಿಸಬೇಕು,ಗ್ರಾಮಗಳು ಸೇರಿದಂತೆ ನಗರದಲ್ಲಿ ಡಾ.ಬಿಆರ. ಅಂಬೇಡ್ಕರ ಭವನ ನಿರ್ಮಿಸಬೇಕು.

ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ಸಂಗಮ್ಮ ಪಾಟೀಲ್ ರವರು ಅಸ್ಪರ್ಶತೆ ಆಚರಣೆ ಮಾಡುತ್ತಿದ್ದು ಕೂಡಲೆ ಅಮಾನತ್ತು ಗೊಳಿಸಿ, ಅವರ ಮೇಲೆ ಜಾತಿ ನಿಂದನೆ ಕೇಸ್ ದಾಖಲಿಸಬೇಕು.

ಮುಗಾಳನಗಾಂವ ದಲಿತರಿಗೆ ನೀಡಲಾದ ನಿವೇಶಗಳನ್ನು ಪಹಣೆಯಲ್ಲಿ ಸೇರಿಸಿ ದಲಿತರಿಗೆ ಹಂಚಬೇಕು, ಹೊನಗುಂಟಾ ಗ್ರಾಮದ ದಲಿತರಿಗೆ ಪ್ರತ್ಯೇಕ ಪಹಣಿ ಹಾಗೂ ಶವ ಸಂಸ್ಕಾರ ಮಾಡಲು ಪ್ರತ್ಯೇಕ ರುದ್ರಭೂಮಿಯನ್ನು ಮಂಜೂರು ಮಾಡಬೇಕು.

ತಾಲ್ಲೂಕಿನ ರಸ್ತೆ ಮತ್ತು ದುರಸ್ತಿ ಕಾಮಗಾರಿಗಳು ಜೊತೆ ಎಲ್ಲಾ ಕಛೇರಿಗಳನ್ನು ಭಾಡಿಗೆ ಕಟ್ಟಡಗಳಲ್ಲಿ ಪ್ರಾರಂಭಿಸಬೇಕು, ಶಹಾಬಾದ ನಗರಕ್ಕೆ ಹೋಗಿಬರುವ ಬಸ್ಸು ತರನಳ್ಳಿ ಊರಿನ ಒಳಗೆ ಹಾಯ್ದು ಹೋಗುವಂತೆ ಮಾಡಬೇಕು, ಗೋಳಾ (ಕೆ) ಮಠದ ಕ್ರಾಸ್ ದಿಂದ ಅಂಬೇಡ್ಕರ ನಗರದ ರಸ್ತೆ ಮತ್ತು ನಿಜಾಮ್ ಬಜಾರ ರೈಲ್ವೆ ಕೆಳ ಸೇತುವೆಯಿಂದ ಗೋಳಾ (ಕೆ) ಗ್ರಾಮಕ್ಕೆ ಹೊಸ ಡಾಂಬರಿಕರಣ ನಗರದಲ್ಲಿ ಮಹಿಳಾ ಶೌಚಲಯ ಮತ್ತು ಸಿ.ಸಿ. ರಸ್ತೆ ನೀರ್ಮಿಸಬೇಕು ಎಂದು ಒತ್ತಾಯಿಸಿದರು.

ಕೃಷ್ಣಪ್ಪ ಕರಣಿಕ ಮತ್ತು ಶಂಕರ ಜಾನಾ ಘೋಷಣೆ ಕೂಗಿ, ಕ್ರಾಂತಿ ಗೀತೆಗಳನ್ನ ಹಾಡಿದರು.

ಸಂಚಾಲಕ ತಿಪ್ಪಣ್ಣ ಧನೇಕರ ಮನವಿ ಪತ್ರ ಓದಿ ತಾಲ್ಲೂಕ ತಹಶೀಲ್ದಾರ ನೀಲಪ್ರಭಾ ಬಬಲಾದ ರವರ ಮುಖಾಂತರ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಸಲ್ಲಿಸಲಾಯಿತು.

ಧರಣಿ ಸತ್ಯಾಗ್ರಹದಲ್ಲಿ ಕದಸಂಸ ರಾಜ್ಯ ಸಂ ಸಂಚಾಲಕ ಸುರೇಶ ಮೆಂಗನ, ಮುಖಂಡ ಕೃಷ್ಣಪ್ಪ ಕರಣಿಕ, ನಗರ ಸಭೆ ಮಾಜಿ ಸದಸ್ಯರಾದ ರಾಮಕುಮಾರ ಸಿಂಗೆ, ಮಲ್ಲಿಕರ್ಜುನ ಜಲಂದರ, ಸೇಡಂ ಉಪ ವಿಭಾಗದ ಸಂಚಾಲಕ ಮಹಾದೇವ ತರನಳ್ಳಿ, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ರಾಜೇಶ ಯನಗುಂಟಿ, ಸ್ನೇಹಿಲ ಜಾಯಿ, ಭರತ ಧನ್ನಾ, ಶಂಕರ ಜಾನಾ, ಪುನೀತ ಹಳ್ಳಿ, ಜೈಭೀಮ ರಸ್ತಾಪೂರ, ಭೀಮಾಶಂಕರ ಕಾಂಬಳೆ, ಮಹಾದೇವ ಮೇತ್ರಿ, ಶರಣು ಧನ್ನೇಕರ, ರಾಕೇಶ ಜಾಯಿ, ಹಾಗೂ ಜೆಡಿಎಸ ಪಕ್ಷದ ಅಧ್ಯಕ್ಷ ಅ.ಘನಿ ಸಾಬೀರ, ಕಾರ್ಯದರ್ಶಿ ಶ್ರೀಧರ ಕೊಲ್ಲೂರ ಮತ್ತು ಚಂದ್ರಕಾಂತ ಪಾಟೀಲ, ನಾಗಪ್ಪ ರಾಯಚೂರಕರ, ದೇವರಾಜ ರಾಠೋಡ ಹಾಗೂ ಮಹಿಳೆಯರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.