ರಕ್ತದಾನ ಶಿಬಿರ ವ್ಯವಸ್ಥೆಗಾಗಿ ಆರೋಗ್ಯ ಅಧಿಕಾರಿಗಳಿಗೆ ಮನವಿ

ರಕ್ತದಾನ  ಶಿಬಿರ ವ್ಯವಸ್ಥೆಗಾಗಿ ಆರೋಗ್ಯ ಅಧಿಕಾರಿಗಳಿಗೆ ಮನವಿ

ರಕ್ತದಾನ ಶಿಬಿರಕ್ಕೆ ವ್ಯವಸ್ಥೆಗಾಗಿ ಆರೋಗ್ಯ ಅಧಿಕಾರಿಗಳಿಗೆ ಮನವಿ 

     ಕಮಲನಗರ:ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿನಾಂಕ 04-01-2026 ರಂದು ಜಗದ್ಗುರು ಶ್ರೀಮದ ರಾಮಾನಂದಚಾರ್ಯ ನರೇಂದ್ರಚಾರ್ಯಜಿ ರಾಮಾನಂದಚಾರ್ಯ ದಕ್ಷಿಣಪೀಠ ,ನಾಣಿಜಧಾಮ ವತಿಯಿಂದ ಜನೇವರಿ 04ರಿಂದ 18 ಜನೆವರಿವರೆಗೆ ಜೀವನದಾನ ಮಹಾಕುಂಭ 2026 ಎಂಬ ಧ್ಯೇಯವಾಕ್ಯದಡಿಯಲ್ಲಿ ಪೂಜ್ಯರ ಮಾರ್ಗದರ್ಶದಂತೆ ದೇಶದ ಎಲ್ಲಾ ಭಾಗಗಳಲ್ಲಿ ರಕ್ತಾದಾನ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದೆ.

ರೋಗಿಗಳಿಗೆ ಮತ್ತು ಆಕಸ್ಮಿಕ ಅಪಘಾತಗಳಿಗೆ ಒಳಗಾದವರಿಗೆ ರಕ್ತವು ಬಹಳ‌ ಅವಶ್ಯಕವಾಗಿರುತ್ತದೆ.ಇಂತಹ ರಕ್ತವು ನಾವು ದಾನ ಮಾಡುವುದರಿಂದ ರೋಗಿಗಳಿಗೆ ಜೀವ ಉಳಿಸಲು ಸಹಾಯಕವಾಗುತ್ತದೆ ಅದಲ್ಲದೆ ರಕ್ತ ದಾನಿಗಳ ಆರೋಗ್ಯವು ಚೆನ್ನಾಗಿರುತ್ತದೆ ಎಂದು ವೈಧ್ಯ ವಿಜ್ಞಾನವು ಸಹ ತಿಳಿಸುತ್ತದೆ.

 ಆದಕಾರಣ ಕಮಲನಗರ ಮತ್ತು ಸುತ್ತಮುತ್ತಲಿನ ಜನರು ದಿನಾಂಕ 04-01-2026 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 7 ಗಂಟೆಯೊಳಗೆ ಆಗಮಿಸಿ ರಕ್ತದಾನ ಮಾಡುವಂತೆ ಜಿಲ್ಲಾ ಮೇಲ್ವಿಚಾರಕರಾದ ವಿಠಲ ಮೂಳೆ,ಜಿಲ್ಲಾ ಸಮಿತಿ ಅಧ್ಯಕ್ಷರಾದ ಶ್ರೀಪಾದ ಕಪ್ಪಿಕೇರಿ,ಔರಾದ ತಾಲೂಕಿನ ಅಧ್ಯಕ್ಷರಾದ ಧನರಾಜ ಬೊರಕರ,ಮಹಿಳಾ ಘಟಕದ ಅಧ್ಯಕ್ಷರಾದ ಕೋಮಲಾ ಹಾವಗೊಂಡ,ಚಾಂಡೇಶ್ವರ ಸೇವಾ ಕೇಂದ್ರ ಅಧ್ಯಕ್ಷರಾದ ಮಲ್ಲಮ್ಮಾ ಜಿಲ್ಲಾ ಸಚಿವರಾದ ಸಂಜೀವಕುಮಾರ ಟೆಕೊಳೆ,ವ್ಯವಸ್ಥಾಪಕರಾದ ರವಿಶಂಕರ ಪಟ್ನೆ ,ಯುವ ನಾಯಕರಾದ ಬಾಲಾಜಿ ತೇಲಂಗ,ಮಹಾದೇವ ಮಡಿವಾಳ ಮೊದಲಾದವರು ವಿನಂತಿಸಿಕೊಂಡಿದ್ದಾರೆ.

   ಕಳೆದ ವರ್ಷವು ಸಹ ಪೂಜ್ಯರ ಮಾರ್ಗದರ್ಶನದಲ್ಲಿ ಕೇವಲ 15 ದಿನಗಳಲ್ಲಿ ದಾಖಲೆಯ ಪ್ರಮಾಣದಲ್ಲಿ 136372 ಯುನಿಟ್ ಗಳ ರಕ್ತವು ದಾನಿಗಳಿಂದ ಸಂಗ್ರಹವಾಗಿದ್ದು ,ಅದು ಬಡವರಿಗೆ ಉಪಯೋಗಕ್ಕೆ ಬರಲಿ ಎನ್ನುವ ಕಾರಣದಿಂದ ಸರಕಾರಿ ಆಸ್ಪತ್ರೆಗಳಿಗೆ ನೀಡಲಾಗಿರುತ್ತದೆ.