ಮೊರಾರ್ಜಿ ವಸತಿ ಶಾಲೆ ಕಲಮೊಡ ರಾಜ್ಯಮಟ್ಟಕ್ಕೆ ಆಯ್ಕೆ. ಹರ್ಷ
ಮೊರಾರ್ಜಿ ವಸತಿ ಶಾಲೆ ಕಲಮೊಡ ರಾಜ್ಯಮಟ್ಟಕ್ಕೆ ಆಯ್ಕೆ. ಹರ್ಷ
ಇಂದು ಕಲಬುರಗಿ ಜಿಲ್ಲೆಯ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಕಲಬುರಗಿ 2025/26 ಸಾಲಿನ ವಿಶೇಷ ಚೇತನ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು ಕ್ರೀಡೆ ಮಾನವನ ಶಾರೀರಿಕ ಹಾಗೂ ಮಾನಸಿಕ ಅಭಿವೃದ್ಧಿಗೆ ಅತ್ಯಂತ ಅಗತ್ಯವಾಗಿದೆ. ನಿಯಮಿತವಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೇಹದ ಆರೋಗ್ಯ ಸುಧಾರಿಸುತ್ತದೆ ಮತ್ತು ಶಕ್ತಿ, ಸಹನಶೀಲತೆ ಹೆಚ್ಚುತ್ತದೆ. ಕ್ರೀಡೆ ಮನಸ್ಸಿಗೆ ಉಲ್ಲಾಸ ನೀಡುತ್ತದೆ ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತದೆ.
ಇದರಿಂದ ಶಿಸ್ತು, ಸಮಯಪಾಲನೆ, ತಂಡಭಾವನೆ, ನಾಯಕತ್ವ ಮುಂತಾದ ಗುಣಗಳು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಸೋಲು–ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವನೆಯನ್ನು ಕ್ರೀಡೆ ಕಲಿಸುತ್ತದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಹಾಯ ಮಾಡುತ್ತದೆ.
ಆದ್ದರಿಂದ ಕ್ರೀಡೆ ಮಾನವ ಜೀವನದ ಅವಿಭಾಜ್ಯ ಅಂಗವಾಗಿದ್ದು, ಪ್ರತಿಯೊಬ್ಬರೂ ದಿನನಿತ್ಯದ ಜೀವನದಲ್ಲಿ ಕ್ರೀಡೆಗೆ ಆದ್ಯತೆ ನೀಡಬೇಕು ಎಂದು ಇಲಾಖೆ ತಿಳಿಸಿದೆ ಮತ್ತು , ಹಲವಾರು ವಿದ್ಯಾರ್ಥಿಗಳು ಪೂರ್ಣ ಅಂಧರು , ಭಾಗಶಃ ಅಂದರು ಒಂದು ಕೈ ನ್ಯೂನತೆ ಒಂದು ಕಾಲು ನ್ಯೂನತೆ, ವಾಕ್ ಮತ್ತು , ಶ್ರವಣದೋಷ ಹೊಂದಿರುವ ಮಕ್ಕಳು ಭಾಗವಹಿಸಿದ್ದರು ಮತ್ತು ಕ್ರೀಡೆಯಲ್ಲಿ 14/17 ವರ್ಷ ವಯಸ್ಸಿನ ಒಳಗಿನ ಮಕ್ಕಳಿಗೆ ಶಿಕ್ಷಣ ಇಲಾಖೆ ಕಲಬುರಗಿಯ ಇಂದು 29-01-2026 ಬೆಳಗಿಂದ ಪ್ರಾರಂಭವಾಗಿತ್ತು. ವಿಶೇಷ ಚೇತನ ಮಕ್ಕಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಲಮೊಡ ಶಾಲೆಯ 9ನೇ ವಿದ್ಯಾರ್ಥಿ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟದಲ್ಲಿ ಗುಂಡು ಎಸೆತ ಮತ್ತು ಬಲ್ಲೆ ಎಸೆತ ಸ್ಪರ್ಧೆಯಲ್ಲಿ ಜಿಲ್ಲೆಕ್ಕೆ ಪ್ರಥಮ ಸ್ಥಾನವನ್ನು ಪಡೆದಿರುವ ಅಮನ ತಂದೆ ಸಂಜೀವ್ ಕುಮಾರ್ ಮತ್ತು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಶಿವರಾಜ್ ಮತ್ತು ಶಾಲೆಯ ಮುಖ್ಯ ಗುರುಗಳು ಮಲ್ಲಿಕಾರ್ಜುನ್ ಬಿರಾದರ್ ಮತ್ತು ಶಾಲೆಯ ಸಿಬ್ಬಂದಿ ವರ್ಗದವರು ವತಿಯಿಂದ ಹರ್ಷ ವ್ಯಕ್ತಪಡಿಸಿದರು
ವರದಿ: ಮಛಂದ್ರನಾಥ ಕಾಂಬಳೆ
