ಶಹಾಬಾದ್ : ಶಾಮನೂರು ಶಿವಶಂಕರಪ್ಪರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಶಹಾಬಾದ್ : ಶಾಮನೂರು ಶಿವಶಂಕರಪ್ಪರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಶಹಾಬಾದ್ : ಶಾಮನೂರು ಶಿವಶಂಕರಪ್ಪರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಶಹಾಬಾದ್ : ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾದ ಹಾಗೂ ಕರ್ನಾಟಕದ ಮಾಜಿ ಸಚಿವರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಗರದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಹಳೇ ಶಹಾಬಾದ್ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಚಂದನಕೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುರಾಜ್ ಮಾಲಿ ಪಾಟೀಲ, ಶಿವರಾಜ್ ಪಾರ, ಬಸವರಾಜ ಪಾಟೀಲ, ಬಸಣ ಹಡಪದ, ಮಹಾಂತೇಶ ಪಾಟೀಲ, ಶಿವಪುತ್ರಪ್ಪ ನೇಲೂಗಿ, ಶರಣಪ್ಪ ಸೂರಾ, ಶಾಂತಪ್ಪ ಗೌಡ, ದ್ಯಾಮಗೊಂಡ, ಕುಪೇಂದ್ರ ತುಪ್ಪದ, ಶರಣಪ್ಪ ಕೊಡದೂರ, ಚಂದ್ರಕಾಂತ ರಾವೂರ, ಸಿದ್ದಾರೂಢ ಬೆಳಮಗಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಶ್ರೀ ಶಾಮನೂರು ಶಿವಶಂಕರಪ್ಪ ಅವರ ಸೇವಾ ಜೀವನವನ್ನು ಸ್ಮರಿಸಿದರು.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥನೆ ಸಲ್ಲಿಸಲಾಯಿತು.