ರಾಷ್ಟ್ರಕ್ಕೆ ನಿತಿನ್ ನಬಿನ್ ನೇತೃತ್ವ:ವಾಡಿ ಯಲ್ಲಿ ಬಿಜೆಪಿ ಸಂಭ್ರಮ
ರಾಷ್ಟ್ರಕ್ಕೆ ನಿತಿನ್ ನಬಿನ್ ನೇತೃತ್ವ:ವಾಡಿ ಯಲ್ಲಿ ಬಿಜೆಪಿ ಸಂಭ್ರಮ
ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನೂತನವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರು
ನವದೆಹಲಿಯಲ್ಲಿ ಮಂಗಳವಾರ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ, ಮುಖಂಡರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿ,ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ನಿತಿನ್ ನಬಿನ್ ಪರ ಘೋಷಣೆಗಳನ್ನು ಕೂಗಿ ಸಂತೋಷ ವ್ಯಕ್ತಪಡಿಸಿದರು.
ಈ ವೇಳೆ ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ ದೇಶ ಸೇವೆಯ ಧ್ಯೇಯದೊಂದಿಗೆ
ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು,
ಐದು ಬಾರಿ ಶಾಸಕರಾಗಿ, ಬಿಹಾರದ ಸಚಿವರಾಗಿ ಸೇವೆ ಸಲ್ಲಿಸಿರುವ ನಬಿನ್ ಅವರು ಪಕ್ಷದ ಇತಿಹಾಸದಲ್ಲೇ ಅತ್ಯಂತ ಕಿರಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.ಅವರ ಸಾರ್ವಜನಿಕ,ರಾಜಕೀಯ ಜೀವನ ಮತ್ತು ಕ್ರಿಯಾಶೀಲ ಸಂಘಟನಾತ್ಮಕ ಗುಣ ನಮ್ಮಂತ ಕಾರ್ಯಕರ್ತರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ,
ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ,ಇಂಗಳಗಿ ಶಕ್ತಿ ಕೇಂದ್ರದ ಅಧ್ಯಕ್ಷ ಸೋಮು ಚವ್ಹಾಣ,ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್,ಮುಖಂಡರಾದ ಶರಣಗೌಡ ಚಾಮನೂರ, ಗಿರಿಮಲ್ಲಪ್ಪ ಕಟ್ಟಿಮನಿ, ಭೀಮರಾವ ದೊರೆ,ಅರ್ಜುನ ಕಾಳೆಕರ,ಹರಿ ಗಲಾಂಡೆ, ಬಸವರಾಜ ಕೊಲಿ,
ಕಿಶನ ಜಾಧವ,ಅಂಬದಾಸ ಜಾಧವ,ಪ್ರಕಾಶ ಪುಜಾರಿ, ರಿಚರ್ಡ್ ಮಾರೆಡ್ಡಿ,ಯಂಕಮ್ಮ ಗೌಡಗಾಂವ,ಉಮಾಭಾಯಿ ಗೌಳಿ,ವಿಶಾಲ ನಿಂಬರ್ಗಾ,
ರಾಜು ಕೊಲಿ,ವಿಶ್ವರಾಧ್ಯ ತಳವಾರ,ವಿಶ್ವನಾಥ ಬಳವಡಗಿ,ವಿಕ್ರಮ ಜಾಧವ, ರಾಜು ಗುತ್ತೇದಾರ, ನಿಂಗಪ್ಪ ತಳವಾರ ಸೇರಿದಂತೆ ಇತರರು ಇದ್ದರು.
