ಆರೋಗ್ಯ ಸಂಪತ್ತೇ ನಿಜವಾದ ಶ್ರೇಷ್ಠ ಸಂಪತ್ತು : ಸಿದ್ದಲಿಂಗ ಬಾಳಿ.

ಆರೋಗ್ಯ ಸಂಪತ್ತೇ ನಿಜವಾದ ಶ್ರೇಷ್ಠ ಸಂಪತ್ತು : ಸಿದ್ದಲಿಂಗ ಬಾಳಿ.

ಆರೋಗ್ಯ ಸಂಪತ್ತೇ ನಿಜವಾದ ಶ್ರೇಷ್ಠ ಸಂಪತ್ತು : ಸಿದ್ದಲಿಂಗ ಬಾಳಿ.

ಜಗತ್ತಿನಲ್ಲಿ ಎಲ್ಲಾ ಸಂಪತ್ತುಗಳಿಗಿಂತ ಆರೋಗ್ಯವೇ ನಿಜವಾದ ಶ್ರೇಷ್ಠ ಸಂಪತ್ತು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಂಪನ್ಮೂಲ ಶಿಕ್ಷಕ ಸಿದ್ದಲಿಂಗ ಬಾಳಿ ಹೇಳಿದರು. 

ಅವರು ರಾವೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾವು ಜೀವನದಲ್ಲಿ ಏನೆಲ್ಲಾ ಸಂಪಾದನೆ ಮಾಡಿದರೂ ಆರೋಗ್ಯ ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ಇಂದು ವ್ಯಸನಗಳು ಹೆಚ್ಚಾಗಿ ಜನಸಾನ್ಯರ ಬದುಕನ್ನು ಸಾವಿಗೆ ದೂಡುತ್ತಿವೆ. ದೇಶದ ಪ್ರಗತಿಯಲ್ಲಿ ದೊಡ್ಡ ಕೊಡುಗೆ ಕೊಡಬೇಕಾದ ಯುವಕರೇ ಇವತ್ತು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಸಣ್ಣ ವಯಸ್ಸಿಗೆ ಅನೇಕ ಮಾರಕ ರೋಗಗಳಿಗೆ ಬಲಿಯಾಗಿ ತಮ್ಮ ಕುಟುಂಬವನ್ನು ಅಕ್ಷರಶ ಬೀದಿಗೆ ತಳ್ಳುತ್ತಿದ್ದಾರೆ. ಇಂತಹ ಕಲುಷಿತ ವಾತಾವರಣದಲ್ಲಿ ನಮ್ಮ ಆರೋಗ್ಯವನ್ನು ಸದೃಢಗೊಳಿಸುತ್ತಾ ದೇಶವನ್ನು ಸದೃಢ ಮಾಡುವ ಸಂಕಲ್ಪ ಮಾಡಬೇಕಿದೆ. ಆದ್ದರಿಂದ ಪ್ರತಿಯೊಬ್ಬರೂ ಚಟಮುಕ್ತ ಸಮಾಜಕ್ಕೆ ಸಂಕಲ್ಪ ಮಾಡೋಣ ಎಂದು ಹೇಳಿದರು.

ಸಂಸ್ಥೆಯ ಯೋಜನಾಧಿಕಾರಿ ಗುರುರಾಜ್. ಬಿ ಪ್ರಾಸ್ತಾವಿಕವಾಗಿ ಮಾತನಾಡಿ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆ ಸಮಾಜದ ವಿವಿಧ ವರ್ಗದವರಿಗೆ ಜಾತಿ. ಮತ. ಪoಥಗಳನ್ನು ಮೀರಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಅವರ ಬದುಕನ್ನು ಹಸನುಮಾಡುವ ಕೆಲಸ ಮಾಡುತ್ತಿದೆ. ಪ್ರತಿಯೊಬ್ಬರೂ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ವೇದಿಕೆ ಮೇಲೆ ಸಂಸ್ಥೆಯ ಕೃಷಿ ಮೇಲ್ವಿಚಾರಕ ಕೃಷ್ಣ ಕಮ್ಮಾರ್, ಎಸ್ ಡಿ ಎಂ ಸಿ ಅಧ್ಯಕ್ಷ ಖದಿರ್ ಪಾಷಾ, ಶಿಕ್ಷಕ ಸಿದ್ದಲಿಂಗಪ್ಪ ನಾಯ್ಕೊಡಿ ಉಪಸ್ಥಿತರಿದ್ದರು.

ಶಾಲೆಯ ಶಿಕ್ಷಕಿಯರಾದ ಮಂಜುಳಾ ಧರ್ಮಶೆಟ್ಟಿ, ರೇಣುಕಾ ಬಿ.ವಿ, ಶಾಹಿನ್ ಫಾತಿಮಾ, ರೇಖಾ ಕಾಳೆ ಉಪಸ್ಥಿತರಿದ್ದರು. ಸಂಸ್ಥೆ ಸೇವಾ ಪ್ರತಿನಿಧಿ ಪಿ. ಮಮತಾ ಉಪಸ್ಥಿತರಿದ್ದರು.

ಶಿಕ್ಷಕ ಉದಯಕುಮಾರ ಇಂಗಳೇ ನಿರೂಪಿಸಿ ವಂದಿಸಿದರು.