ಭಕ್ತರ ಪಾಲಿನ ಭಾಗ್ಯದೇವತೆ ಗುಡ್ಡಾಪುರ ದಾನಮ್ಮ ದೇವಿ : ಸಿದ್ದೇಶ್ವರ ಶಾಸ್ತ್ರಿ

ಭಕ್ತರ ಪಾಲಿನ ಭಾಗ್ಯದೇವತೆ ಗುಡ್ಡಾಪುರ ದಾನಮ್ಮ ದೇವಿ : ಸಿದ್ದೇಶ್ವರ ಶಾಸ್ತ್ರಿ
ಕಲಬುರಗಿ- ಗಂಗಾನಗರದ ಶ್ರೀ ಹನುಮಾನ್ ದೇವಸ್ಥಾನದ ಆವರಣದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿಯಿಂದ ಶ್ರಾವಣ ಮಾಸದಂಗವಾಗಿ ಶ್ರೀ ಗುಡ್ಡಾಪೂರ ಶ್ರೀ ದಾನಮ್ಮ ದೇವಿಯ 19 ನೇ ದೀನದ ಪುರಾಣವನ್ನು ಸಿದ್ದೇಶ್ವರ ಶಾಸ್ತ್ರಿ ಅವರ ಅಮೃತವಾಣಿಯಿಂದ ,ಶಿವಯೋಗ ಸಾಧನೆ, ದಾಸೋಹ, ಕಾಯಕ ನಿಷ್ಠೆ, ಸತ್ಯ- ಧರ್ಮ-ನ್ಯಾಯ ಮೊದಲಾದ ಅಷ್ಟಗುಣಗಳನ್ನು ಅಳವಡಿಸಿಕೊಂಡು ಬದುಕಿದ ಶರಣೆ ಗುಡ್ಡಾಪುರ ದಾನಮ್ಮ. 12 ನೇ ಶತಮಾನದಲ್ಲಿ ಧರ್ಮಜಾಗೃತಿಗಾಗಿ ದೇಶಸಂಚಾರ ಮಾಡುತ್ತ ಲೋಕಕಲ್ಯಾಣಕ್ಕಾಗಿ ಪಾರಮಾರ್ಥದ ಹಾದಿ ಹಿಡಿದು ಗುಡ್ಡಾಪುರದಲ್ಲಿ ನೆಲೆಸಿದ ದಾನಮ್ಮ ಭಕ್ತರ ಪಾಲಿನ ವರದಾನಿ ಎಂದು ಜನರಿಗೆ ದೇವಿಯ ಲೀಲೆ ಹೇಳಿದರು.
ಪುರಾಣದ ಕಾರ್ಯವನ್ನು ಡಾ.ಸವಿತಾ ರಾಜು ದೇವಗಾಂವ ಉದ್ಘಾಟಿಸಿದರು.ಸಮಿತಿಯ ಅಧ್ಯಕ್ಷರಾದ ಅನೀಲ ಕೂಡಿ,ಸಂತೋಷ ಹೂಳಗೇರಿ,ಶರಣು ಎಸ್ ಕೌಲಗಿ,ಬಾಬು ಹಾಗುರಗುಂಡಿಗಿ,ಭಗವಂತ ನಾಗಭ,ಮಲ್ಲಮ್ಮ ಜೇವರ್ಗಿ ,ಭಾಗವಹಿಸಿದರು