ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ಮನವಿ ಸಲ್ಲಿಸಿದ ಅನುದಾನಿತ ಪ ಪೂ ಕಾಲೇಜುಗಳು ನೌಕರರು
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ಮನವಿ ಸಲ್ಲಿಸಿದ ಅನುದಾನಿತ ಪ ಪೂ ಕಾಲೇಜುಗಳು ನೌಕರರು
ಕಲಬುರ್ಗಿ ನ 25: ಕರ್ನಾಟಕ ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘ ಕಲಬುರ್ಗಿ ಜಿಲ್ಲಾ ಘಟಕವು ಜಿಲ್ಲೆಯ ಅನುದಾನಿತ ಉಪನ್ಯಾಸಕರ ಜೋತೆ ಗೂಡಿ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಅವರ ನೇತೃತ್ವದಲ್ಲಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಸಮಸ್ಯೆಗಳ ಬಗ್ಗೆ ಬೆಳಗಾವಿಯ ಅಧಿವೇಶನದ ವಿಧಾನ ಸಭೆಯಲ್ಲಿ ಗಮನ ಸೆಳೆದು ಸರ್ಕಾರದ ಮೇಲೆ ಒತ್ತಡ ಹೇರಿ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಇಪಿ ೦9 ಟಿಪಿಯು.2024 ದಿನಾಂಕ 12-09-2024 ಆದೇಶದಂತೆ ಕರ್ನಾಟಕ ರಾಜ್ಯದ ಅನುದಾನಿತ ಪದವಿ ಪೂರ್ವ ಕಾಲೇಜುಗಳಿಲ್ಲಿ ಕನಿಷ್ಠ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ಅನುದಾನಿತ ವಿಭಾಗಕ್ಕೆ 40 ಇರಬೇಕು ಒಂದು ವೇಳೆ ಅದಕ್ಕಿಂತಲೂ ಕಡಿಮೆ ಇದ್ದರೆ ಅಂತಹ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ವೇತನ ತಡೆ ಹಿಡಿಯುವುದು ಹಾಗೂ ಅಂತಹ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಅನುದಾನ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ ಇದು ಅನುದಾನಿತ ನೌಕರರಿಗೆ ಬಹಳಷ್ಟು ತೊಂದರೆಯುಂಟಾಗಿ ಅವರ ಪಾಠ ಪ್ರವಚನಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ ಇದರಿಂದ ಅನುದಾನಿತ ನೌಕರರು ಮಾನಸಿಕ ತೊಳಲಾಟದಲ್ಲಿ ಪಾಠ ಮಾಡುವುದರಿಂದ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸರ್ಕಾರ ಪ್ರತಿ ವರ್ಷ ಅವೈಜ್ಞಾನಿಕವಾಗಿ ಕಾಲೇಜುಗಳ ಆರಂಭಿಸಲು ಅವಕಾಶ ನೀಡುತ್ತಿರುವುದರಿಂದ ಕಾಲೇಜುಗಳ ಸಂಖ್ಯೆ ಹೆಚ್ಚಾಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಸಂಖ್ಯೆ ಕಡಿಮೆಯಾಗುತ್ತಿರುವದಕ್ಕೆ ಸರ್ಕಾರದ ಅವೈಜ್ಞಾನಿಕವಾಗಿ ನೀತಿಯೆ ಕಾರಣ ಪರೋಕ್ಷವಾಗಿ ಸರ್ಕಾರವೆ ಇದಕ್ಕೆ ಕಾರಣವಾಗಿದೆ.ಹೀಗಾಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರತಿ ವಿಭಾಗದಲ್ಲೂ 40 ವಿದ್ಯಾರ್ಥಿಗಳು ದಾಖಲಾಗುವುದು ದುಸ್ತರವಾಗಿದೆ.
ಆಂಧ್ರಪ್ರದೇಶ ಸರ್ಕಾರ ಆದೇಶ ಸಂಖ್ಯೆ ಎಪಿ ಶಿಕ್ಷಣ ಕಾಯ್ದೆ 1982 ದಿನಾಂಕ 17-08-2021 ಆದೇಶವನ್ನು ಕರ್ನಾಟಕ ರಾಜ್ಯ ಸರ್ಕಾರವು ನಮ್ಮ ರಾಜ್ಯದಲ್ಲಿ ಜಾರಿಗೆ ತಂದು ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಸೇವಾ ಭದ್ರತೆ ನೀಡಬೇಕು.
ಯಾವ ಕಾಲೇಜುಗಳಲ್ಲಿ ಅನುದಾನಿತ ವಿಭಾಗಕ್ಕೆ ಕನಿಷ್ಠ ದಾಖಲಾತಿ 40ಕ್ಕಿಂತ ಕಡಿಮೆ ಹಾಗೂ ಕಾರ್ಯಭಾರ 20 ಗಂಟೆಗಳಿಗಿಂತ ಕಡಿಮೆ ಇದಿಯೋ ಅಂತಹ ನೌಕರರನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ನಿಯೋಜನೆ ಅಥವಾ ವಿಲೀನ ಗೊಳಿಸಬೇಕು.
.ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಒಂದು ಸಂಯೋಜನೆಗೆ ಕನಿಷ್ಠ ದಾಖಲಾತಿಯ ಮಿತಿಯನ್ನು 40 ರಿಂದ 20ಕ್ಕೆ ಇಳಿಸಬೇಕು.
ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಇರುವಂತೆ "ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (KASS)"ವಿಸ್ತರಿಸಬೇಕು.
ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರಿಗೆ ಕರ್ನಾಟಕ ಸರ್ಕಾರವೇ ವೇತನ ಅನುದಾನ ನೀಡುತ್ತಿರುವುದರಿಂದ, ಈ ಮೇಲ್ಕಂಡ ಬೇಡಿಕೆಗಳನ್ನು ಈಡೇರಿಸುವುದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ. ಆದ್ದರಿಂದ ನಮ್ಮ ಈ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಸದನದಲ್ಲಿ ಒತ್ತಡ ಹೇರುವಂತೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿಯವರು ವಿಧಾನ ಪರಿಷತ್ ನಾನು ವಿಧಾನ ಸಭೆಯಲ್ಲಿ ಆರ್ ಅಶೋಕ್ ಅವರು ಗಮನ ಸೆಳೆಯುತ್ತವೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ಸಂಸದರಾದ ಗೋವಿಂದ ಕಾರಜೋಳ, ನಳೀನ್ ಕುಮಾರ್ ಕಟೀಲ್, ಕಲ್ಯಾಣ ಕರ್ನಾಟಕದ ಹಲವಾರು ಶಾಸಕರು ಉಪಸ್ಥಿತರಿದ್ದರು
ಕರ್ನಾಟಕ ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಜ್ ನಂದಗಾಂವ, ಪ್ರಧಾನ ಕಾರ್ಯದರ್ಶಿ ಗುಂಡಯ್ಯ ಸ್ವಾಮಿ, ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಆನಂದಕರ, ರಾಜ್ಯ ಒಕ್ಕೂಟದ ಬಿ ಎಸ್ ಮಾಲಿಪಾಟೀಲ, ಐ ಕೆ ಪಾಟೀಲ್, ಲಕ್ಷ್ಮಿಕಾಂತ್ ಹಿರೇಗೌಡ, ಮಲ್ಲಿಕಾರ್ಜುನ ಕಂದಳ್ಳಿ, ರಾಜಾರಾಂ ಬಾಸುತ್ಕರ, ಅನಂತ ರಾಜಾ ಪೂರ್, ವೀರನಗೌಡ, ಸಿ ಬಿ ಫಟ್ಟಣಕರ ಉಪಸ್ಥಿತರಿದ್ದರು.
