ಶಾಲಾ ಮಕ್ಕಳಿಗಾಗಿ,ಪ್ರೇಮ್ ಜಿ ಹಣ ಕೊಟ್ಟರೂ ಸರ್ಕಾರ ಮೊಟ್ಟೆ ಕೊಡುತ್ತಿಲ್ಲ. ಮಹಾಂತಗೌಡ ಆರ್ ಪಾಟೀಲ ಆರೋಪ

ಶಾಲಾ ಮಕ್ಕಳಿಗಾಗಿ,ಪ್ರೇಮ್ ಜಿ ಹಣ ಕೊಟ್ಟರೂ ಸರ್ಕಾರ ಮೊಟ್ಟೆ ಕೊಡುತ್ತಿಲ್ಲ. ಮಹಾಂತಗೌಡ ಆರ್ ಪಾಟೀಲ ಆರೋಪ

ಶಾಲಾ ಮಕ್ಕಳಿಗಾಗಿ,ಪ್ರೇಮ್ ಜಿ ಹಣ ಕೊಟ್ಟರೂ ಸರ್ಕಾರ ಮೊಟ್ಟೆ ಕೊಡುತ್ತಿಲ್ಲ.ಮಹಾಂತಗೌಡ ಆರ್ ಪಾಟೀಲ ಆರೋಪ 

ಜೇವರ್ಗಿ / ಯಡ್ರಾಮಿ ಪ್ರೇಮಜಿ ಪ್ರತಿಷ್ಠಾನವು ವಾರಕ್ಕೆ 6 ದಿನ ಶಾಲೆಯ ಮಕ್ಕಳಿಗೆ ಮೊಟ್ಟೆ ನೀಡಲು 1500 ಕೋಟಿ ರೂಪಾಯಿ ಮೊತ್ತದ ಹಣ ನೀಡಿದರೆ . ಯಡ್ರಾಮಿ ಹಾಗೂ ಜೇವರ್ಗಿ ತಾಲೂಕಿನ ಕೆಲವು ಶಾಲೆಗಳಲ್ಲಿ ಮೊಟ್ಟೆ ಬದಲು ಬಾಳೆಹಣ್ಣು ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಶಾಲೆಗಳ ವಿರುದ್ಧ್ ರಾಷ್ಟ್ರೀಯ ಅಹಿಂದ ಸಂಘಟನೆಯ ಯಡ್ರಾಮಿ ತಾಲೂಕ ಅಧ್ಯಕ್ಷರಾದ ಮಹಂತಗೌಡ ಆರ್ ಪಾಟೀಲ್ ಹಂಗರಗಾ ಕೆ ಅವರು ಸರ್ಕಾರ, ಶಾಲೆಯ ಶಿಕ್ಷಕರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು .

  ವಾರದಲ್ಲಿ ಆರು ದಿನ ಮೊಟ್ಟೆ ನೀಡುವ ಯೋಜನೆ ಆರಂಭಿಸಿ ತಿಂಗಳುಗಳು ಕಳೆದರೂ ಯಡ್ರಾಮಿ ಹಾಗೂ ಜೆವರ್ಗಿ ತಾಲೂಕಿನಲ್ಲಿ ಬಹಳಷ್ಟು ಶಾಲೆಗಳಲ್ಲಿ ಈ ಯೋಜನೆ ಸಮರ್ಪಕವಾಗಿ ಜಾರಿಯಾಗುತಿಲ್ಲ . ಮೊಟ್ಟೆ ತಿನ್ನುವ ಮಕ್ಕಳಿಗೆ ಬಾಳೆಹಣ್ಣು ಮತ್ತು ಶೇಂಗಾ ಚಕ್ಕೆ ತಿನ್ನಿಸುತ್ತಿರುವ ಶಿಕ್ಷಕರ ವಿರುದ್ಧ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ಎಚ್ಚೆತ್ತುಕೊಂಡು ಶಾಲೆಯ ಮಕ್ಕಳಿಗೆ ವಾರಕ್ಕೆ ಆರು ದಿನದಂತೆ ಮೊಟ್ಟೆ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ಯಡ್ರಾಮಿ ತಾಲೂಕ ರಾಷ್ಟ್ರೀಯ ಅಹಿಂದ ಸಂಘಟನೆಯ ತಾಲೂಕ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ