ಪ್ರಿಯಾಂಕ್ ಖರ್ಗೆ ಗೆ ನಿಂದಿಸಿದ ವ್ಯಕ್ತಿ ಗಡಿಪಾರಿಗೆ - ಮಾನಪ್ಪ ವಠಾರ ಆಗ್ರಹ

ಪ್ರಿಯಾಂಕ್ ಖರ್ಗೆ ಗೆ ನಿಂದಿಸಿದ ವ್ಯಕ್ತಿ ಗಡಿಪಾರಿಗೆ - ಮಾನಪ್ಪ ವಠಾರ ಆಗ್ರಹ
ಶಹಾಪುರ : ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ದೂರವಾಣಿ ಮೂಲಕ ನಿಂದಿಸಿ ಬೆದರಿಕೆ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ವ್ಯಕ್ತಿಯನ್ನು ಗಡಿಪಾರು ಮಾಡಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಗರ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ದಲಿತ ಮುಖಂಡ ಮಾನಪ್ಪ ವಠಾರ ಆಗ್ರಹಿಸಿದ್ದಾರೆ.
ಅತ್ಯಂತ ಪ್ರಾಮಾಣಿಕತೆಯಿಂದ ಪ್ರಿಯಾಂಕ್ ಖರ್ಗೆಯವರು ಖಾತೆ ನಿಭಾಯಿಸುತ್ತಿರುವ ಅವರ ವೈಯಕ್ತಿಕ ತೇಜೋವಧೆ ಮಾಡಿರುವುದು ಅತ್ಯಂತ ಖಂಡನೆಯ,ಮಾತನಾಡುವಾಗ ಮೈಮೇಲೆ ಪ್ರಜ್ಞೆ ಇರಬೇಕು,ನಾಲಿಗೆ ಹರಿಬಿಟ್ಟ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.