ಅನಿರ್ಧಿಷ್ಟಾವಧಿ ಪ್ರತಿಭಟನಾ ಸಭೆ ನರೇಗಲ್ಲ,

ಅನಿರ್ಧಿಷ್ಟಾವಧಿ ಪ್ರತಿಭಟನಾ ಸಭೆ ನರೇಗಲ್ಲ,

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ ಇಂದು, ರೈತ ಸೇನಾ ಕರ್ನಾಟಕ ನರೇಗಲ್ಲ, ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ಮುಖಂಡರು *ಅನಿರ್ಧಿಷ್ಟಾವಧಿ ಪ್ರತಿಭಟನಾ ಸಭೆ ನರೇಗಲ್ಲ,*ನರೇಗಲ್ಲ ಹೋಬಳಿಯ ಸಮಸ್ತ ರೈತರು ಮತ್ತು ನಾಗರಿಕರು ಸೇರಿ ಆಹೋ ರಾತ್ರಿ ಹೋರಾಟವನ್ನು ಮಾಡುತ್ತಿದ್ದಾರೆ, ರೈತರ ಬೆವರ ಹನಿ ಭೂತಾಯಿ ಒಡಲು ಸೇರುತ್ತದೆ, ದೇಶಕ್ಕೆ ಅನ್ನ ಹಾಕುವ ರೈತರ ಗೋಳು ಕೇಳುವವರಿಲ್ಲ, ಹಾಗೂ ಅವರ ಶ್ರಮಕ್ಕೆ ಬೆಲೆಯೇ ಇಲ್ಲದಂತಾಗಿದೆ, ದಯವಿಟ್ಟು ಕರ್ನಾಟಕ ರಾಜ್ಯ ಸರ್ಕಾರ ರೈತರ ಕಡೆಗೆ ಗಮನ ಹರಿಸಬೇಕು ಎಂದು ನರೇಗಲ್ಲ ರೈತರು ಹೋರಾಟ ಮಾಡುತ್ತಿದ್ದಾರೆ. ರೈತರ ಹೋರಾಟವನ್ನು ಕೇಳಿ ತಾಲೂಕಿನ ತಹಸಿಲ್ದಾರ್ ಸಾಹೇಬರು ಆಗಮಿಸಿ ರೈತರ ಮನವಿಯನ್ನು ಸ್ವೀಕರಿಸಿ, ರೈತರ ಬೆಳೆ ಹಾನಿ ಪರಿಹಾರ ನಾಳೆಯೇ ಬರುತ್ತದೆ ಎಂದು ಹೇಳಿದರು.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ