ಜೇಸ್ಕಾಂ ನಿಗಮ ಮಂಡಳಿ ಅಧ್ಯಕ್ಷರಾಗಿ ಪ್ರವೀಣ ಪಾಟೀಲ ಹರವಾಳ ಪದಗ್ರಹಣ

ಜೇಸ್ಕಾಂ ನಿಗಮ ಮಂಡಳಿ ಅಧ್ಯಕ್ಷರಾಗಿ ಪ್ರವೀಣ ಪಾಟೀಲ ಹರವಾಳ ಪದಗ್ರಹಣ
ಪದಗ್ರಹಣ ಕಾರ್ಯಕ್ರಮ
ಕಲಬುರಗಿ: ಗುಲಬರ್ಗಾ ವಿದ್ಯುತ್ ಶಕ್ತಿ ಸರಬರಾಜು ಕಂಪನಿಯ (ಜೇಸ್ಕಾಂ) ನಿಗಮ ಮಂಡಳಿಯ ಅಧ್ಯಕ್ಷರಾಗಿ ಪ್ರವೀಣ ಪಾಟೀಲ ಹರವಾಳ ಅವರು ಇಂದು ಸರಳ ರೀತಿಯಲ್ಲಿ ಪದಗ್ರಹಣ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಮಜರ ಅಲಂಖಾನ, ಡಾ. ಕಿರಣ ದೇಶಮುಖ, ಈರಣ್ಣ ಝಳಕಿ, ರಾಜೀವ ಜಾನೆ, ಶಿವು ಹೊನಗುಂಟಿ, ಅಶ್ವಿನ್ ಸಂಕಾ ಸೇರಿದಂತೆ ಅನೇಕರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಪ್ರವೀಣ ಪಾಟೀಲ ಅವರಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.