ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಸೇವಾ ಪಾಕ್ಷಿಕ ಅಭಿಯಾನ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಸೇವಾ ಪಾಕ್ಷಿಕ ಅಭಿಯಾನ
ಕಲಬುರಗಿ: ಉತ್ತರ ಮಂಡಲದ ವಾರ್ಡ ನಂ.5 ರಲ್ಲಿನ ಪೂಜಾರಿ ಕಮಾನ್ ಹತ್ತಿರ ಪ್ರಧಾನಮಂತ್ರಿ ನರೆಂದ್ರ ಮೋದಿ ರವರ ಜನ್ಮದಿನದ ಪ್ರಯುಕ್ತ ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್ ಅವರ ನಿರ್ದೇಶನದಂತೆ "ಸೇವಾ ಪಾಕ್ಷಿಕ ಅಭಿಯಾನ" ಅಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವು ಮತ್ತು ರಾಜ್ಯ ಪೌರಕಾರ್ಮಿಕರ ದಿನದ ನಿಮಿತ್ತ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಬಸವರಾಜ ಬಿರಾದರ್, ವರದಾ ಶಂಕರ್ ಶೆಟ್ಟಿ, ಅಶೋಕ ಮಾನಕರ, ಗಂಗಾಧರ್ ಬಿಲಗುಂದಿ, ಸಂಗಮೇಶ್ ಮನಳ್ಳಿ, ಶಾಂತು ಧುದನಿ, ರಾಜು ರೆಡ್ಡಿ, ರಮೇಶ ಬೆಳಕೇರಿ, ಗುರು ನಂದೂರ ಸೇರಿದಂತೆ ಬಡಾವಣೆಯ ಮುಖಂಡರು ಇದ್ದರು.