ದಾಕ್ಷಾಯಿಣಿ ಅವ್ವ,ದೇವಯ್ಯ, ಡಾ.ಅರುಣ್ ಹರಿದಾಸ್ ,ದೊಡ್ಡಮನಿ ಡಾ. ನಿಂಗಣ್ಣ,ಅಮೀನಾ ಮುಸ್ತಾಫಾ ಸೇರಿ 18 ಸಾಧಕರಿಗೆ ಬ್ರಹ್ಮಶ್ರೀ ನಾರಾಯಣ ಗುರು ಪ್ರಶಸ್ತಿ

ದಾಕ್ಷಾಯಿಣಿ ಅವ್ವ,ದೇವಯ್ಯ, ಡಾ.ಅರುಣ್ ಹರಿದಾಸ್ ,ದೊಡ್ಡಮನಿ ಡಾ. ನಿಂಗಣ್ಣ,ಅಮೀನಾ ಮುಸ್ತಾಫಾ ಸೇರಿ 18 ಸಾಧಕರಿಗೆ ಬ್ರಹ್ಮಶ್ರೀ ನಾರಾಯಣ ಗುರು ಪ್ರಶಸ್ತಿ
ಕಲಬುರಗಿ : ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಪ್ರಯುಕ್ತ ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 18 ಮಂದಿ ಸಾಧಕರಿಗೆ ಬ್ರಹ್ಮಶ್ರೀ ನಾರಾಯಣ ಗುರು ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ವಿನಯ್ ಗುತ್ತೇದಾರ್ ಗಾರಂಪಳ್ಳಿ ತಿಳಿಸಿದ್ದಾರೆ.
ಸೆಪ್ಟೆಂಬರ್ 16ರಂದು ಕಲಬುರಗಿಯ ಡಾ.ಎಸ್ ಎಂ. ಪಂಡಿತ್ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಮಾತೃಶ್ರೀ ಡಾ. ದಾಕ್ಷಾಯಿಣಿ ಅಪ್ಪಾ, (ಶಿಕ್ಷಣ), ವಿಠಲ ದೊಡ್ಡಮನಿ ( ಸಮಾಜ ಸೇವೆ), ದೇವಯ್ಯ ಗುತ್ತೇದಾರ್ (ಪತ್ರಿಕೋದ್ಯಮ) ಡಾ. ಹನುಮಂತ ರಾವ ದೊಡ್ಡಮನಿ (ಸಾಹಿತ್ಯ), ಡಾ. ಅರುಣ್ ಹರಿದಾಸ್ (ವೈದ್ಯಕೀಯ) ಮಲ್ಲಯ್ಯ ಬಿ ಗುತ್ತೇದಾರ್ (ಶಿಕ್ಷಣ), ಶಿವಶರಣಪ್ಪ ಎಂ. ಕೋಬಾಳ್ (ಸಮಾಜಸೇವೆ), ಗಣಪತ ರಾವ್ ಸಿಂಗಶೆಟ್ಟಿ ಕಾಳಗಿ (ಸಂಗೀತ) ಉಸ್ಮಾನ್ ಭಾಷಾ (ಶಿಕ್ಷಣ ), ಶಾಂತ ಲಿಂಗಯ್ಯ ಎಸ್ ಮಠಪತಿ (ರಂಗಭೂಮಿ) ಡಾ. ಚಿ.ಸಿ ನಿಂಗಣ್ಣ (ಸಾಹಿತ್ಯ), ಗಿರಿಜಾ ಕೊಂಕಣಗಾಂವ (ಶಿಕ್ಷಣ ) ದತ್ತು ಅಗರವಾಲ್ (ಶಿಕ್ಷಣ) ಅರವಿಂದ ಹಾಳಕಿ (ಕೃಷಿ) ಲತೀಫ್ ಪಟೇಲ್ ಭೋಗನಳ್ಳಿ (ಕೃಷಿ)ಶ್ರೀಮತಿ ಅಮೀನಾ ಮುಸ್ತಾಫ್ ಕಲಿಕೋಟೆ,ಕೇರಳ
(ಸಮಾಜ ಸೇವೆ), ಕು. ಹನಿನಾ ಫಾತಿಮಾ (ಕಲಾಕ್ಷೇತ್ರ), ಪ್ರಕಾಶ್ ಎನ್. ಗುತ್ತೇದಾರ್ (ಕ್ರೀಡೆ) ಇವರನ್ನು ಆಯ್ಕೆ ಮಾಡಲಾಗಿದೆ.
*ರಕ್ತ ದಾನ ~ ಆರೋಗ್ಯ ಶಿಬಿರ*
ನಾರಾಯಣ ಗುರು ಜಯಂತಿ ಪ್ರಯುಕ್ತ ಕಲಬುರಗಿಯ ಜೀವಾ ಆಸ್ಪತ್ರೆ ಸಹಯೋಗದಲ್ಲಿ ಸೆಪ್ಟೆಂಬರ್ 16ರಂದು ಬೆಳಿಗ್ಗೆ 9.30 ರಿಂದ ಡಾ.ಸುಶೀಲ್ ಗುತ್ತೇದಾರ್ ಮತ್ತು ಡಾ.ಅಜಯ್ ಗುತ್ತೇದಾರ್ ನೇತೃತ್ವದಲ್ಲಿ ಸಾಯಂಕಾಲದ ವರೆಗೆ ಉಚಿತ ಆರೋಗ್ಯ ತಪಾಸಣೆ ರಕ್ತದಾನ ಶಿಬಿರ ನಡೆಯಲಿದೆ. ಎಲುಬು, ಚರ್ಮ ರೋಗ ರೇಡಿಯೋಲಜಿ ನೇತ್ರ, ಜನರಲ್ ಫಿಜಿಶಿಯನ್, ಹಾಗೂ ಇತರ ತಜ್ಞ ವೈದ್ಯರಿಂದ ಉಚಿತ ತಪಾಸಣೆ ನಡೆಸಲಾಗುವುದು ಸಾರ್ವಜನಿಕರು ಉಚಿತ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಡಾ. ಗಾರಂಪಳ್ಳಿ ತಿಳಿಸಿದ್ದಾರೆ.