ಬಸವ ತತ್ವ ವಿಶ್ವಕ್ಕೆ ಮಾದರಿ ಹಾರಕೂಡ ಶ್ರೀಗಳು

ಬಸವ ತತ್ವ ವಿಶ್ವಕ್ಕೆ ಮಾದರಿ ಹಾರಕೂಡ ಶ್ರೀಗಳು

ಬಸವ ತತ್ವ ವಿಶ್ವಕ್ಕೆ ಮಾದರಿ : ಹಾರಕೂಡ ಶ್ರೀಗಳು 

ಬಸವಕಲ್ಯಾಣ: 'ಬಸವತತ್ವ ವಿಶ್ವಕ್ಕೆ ಮಾದರಿ, ಹೃದಯ ಮುಟ್ಟುವ ಸಾಹಿತ್ಯವೇ ಶರಣರ ವಚನ ಸಾಹಿತ್ಯ' ಎಂದು ಹಾರಕೂಡ ಚನ್ನವೀರ ಶಿವಾಚಾರ್ಯರು ಹೇಳಿದರು.

ನಗರದ ಎಂ.ಎಂ.ಬೇಗ್ ಕಲ್ಯಾಣ - ಮಂಟಪದಲ್ಲಿ ರಾಷ್ಟ್ರೀಯ ಬಸವದಳ, ಅಕ್ಕನಾಗಲಾಂಬಿಕಾ ಮಹಿಳಾ ಗಣದ ಮತ್ತು ಲಿಂಗಾಯತ ಸಮಾಜ ವತಿಯಿಂದ ಶನಿವಾರ ಆಯೋಜಿಸಿದ್ದ 3 ನೇ ಸ್ವಾಭಿಮಾನಿ ಕಲ್ಯಾಣ ಪರ್ವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ತಮ್ಮ ವಿಚಾರ ವ್ಯಕ್ತಪಡಿಸಿದರು.

'ಮನುಷ್ಯ ದಿನನಿತ್ಯ ವಚನ ಓದುವುದರಿಂದ ತನ್ನ ಚಿಂತೆಯನ್ನು ಮರೆಯಬಹುದು, ವಚನಗಳನ್ನು ಅದರ ಅರ್ಥ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಚಿಂತೆ ದೂರಾಗುತ್ತದೆ ಎಂದು ಹೇಳಿದರು.

ಲಿಂಗಾನಂದ ಸ್ವಾಮೀಜಿ, ಮಾತೆ ಮಾದೇವಿ ಅವರ ಆಸೆಯಂತೆ ಬಸವತತ್ವ ವಿಶ್ವದಲ್ಲಿ ಪ್ರಸಾರವಾಗುತ್ತಿದೆ, ವಚನ ಸಾಹಿತ್ಯ ಪ್ರಚಾರ ಮಾಡುತ್ತಿರುವ ಎಲ್ಲರಿಗೂ ಸ್ವಾಭಿಮಾನಿ ಸಮಿತಿ ಪರ್ವ ಸಮಿತಿ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಧನ್ಯವಾದಗಳು ತಿಳಿಸಿದರು.

ಹುಬ್ಬಳ್ಳಿ ಹೊಸ ಮಠದ ಚಂದ್ರ ಶೇಖರ ಸ್ವಾಮೀಜಿ ಮಾತನಾಡಿದರು.ಮುಖಂಡ ಧನರಾಜ ತಾಳಂಪಳ್ಳಿ ಮಾತನಾಡಿದರು. ಮಾತೆ ಸತ್ಯಾದೇವಿ ಸಂಪಾದಿಸಿದ ವಚನ ಸಂಗಮ ಮತ್ತು ಯೋಗಾಂಗ ತ್ರಿವಿಧಿ ಗ್ರಂಥಗಳನ್ನು ' ಬಿಡುಗಡೆ ಮಾಡಲಾಯಿತು.

ಬಾಣೂರು ಚನ್ನಪ್ಪ, ಜಯಬಸವಾನಂದ ಸ್ವಾಮೀಜಿ, ಮಾತೆ ಶಾಂತಾದೇವಿ ಹಾಜರಿದ್ದರು.

ವರದಿ ಮಛಂದ್ರನಾಥ ಕಾಂಬ್ಳೆ ಬೀದರ್