ಸಹಕಾರಿ ಸಂಘ ಉದ್ಘಾಟಿಸಿದ ಸಚಿವ ದರ್ಶನಾಪುರ್

ಸಹಕಾರಿ ಸಂಘ ಉದ್ಘಾಟಿಸಿದ ಸಚಿವ ದರ್ಶನಾಪುರ್
ಕಲಬುರಗಿ : ನಗರದ ರಿಂಗ್ ರಸ್ತೆಯ ಬಬಲಾದ ಮಠ ಸಮೀಪದ ಭವಾನಿ ನಗರದಲ್ಲಿ ಓಂ ವೀರಭದ್ರೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡವನ್ನು ಸಚಿವರಾದ ಶರಣಬಸಪ್ಪ ದರ್ಶನಾಪುರ ಹಾಗೂ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಅವರು ಉದ್ಘಾಟಿಸಿದರು. ಶ್ರೀ ವೀರತಪಸ್ವಿ ವೀರಭದ್ರೇಶ್ವರ ಮಹಾಸ್ವಾಮೀಜಿ ಕಡ, ಬಸವರಾಜ ಮತ್ತಿಮೂಡ್, ಎಂಎಲ್ಸಿ ಶಶೀಲ್ ನಮೋಶಿ, ಕರ್ನಾಟಕ ರಾಜ್ಯ ಸಹಕಾರಿ ಸಂಘಗಳ ರಾಜ್ಯಾಧ್ಯಕ್ಷ ನಂಜನಗೌಡರು, ಬಿಜೆಪಿ ನಗರಾಧ್ಯಕ್ಷ ಚಂದ್ರಕಾAತ ಪಾಟೀಲ್, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಗುರುನಾಥ ಜಾಂತಿಕರ್, ಲಿಂಗಾರೇಡ್ಡಿಗೌಡ ಭಾಸ ರೆಡ್ಡಿ, ಶೈಲಾಜಾ ತಪಲಿ, ಸಂಘದ ಅಧ್ಯಕ್ಷ ಚಂದ್ರಶೇಖರ ಪರಸರಡ್ಡಿ, ಉಪಾಧ್ಯಕ್ಷ ಸಿದ್ರಾಮಪ್ಪ ಬಿರಬಿಟ್ಟೆ, ಜಿ.ಶ್ರೀಧರ ಕೆಸರಹಟ್ಟಿ, ಗಂಗಮ್ಮ ಬಿ.ಮುನ್ನಳ್ಳಿ, ರಾಜಕುಮಾರ ಕಪನೂರ, ಪುತಳಿ ಬೆಂಗ್, ವಿಶ್ವನಾಥ ಮಲಕೂಡ, ಸಂಜೀವ ಮಹಾಜನ, ಸಿದ್ರಾಮಪ್ಪ ಪಾಟೀಲ, ಶರಣಗೌಡ ಪಾಟೀಲ, ಸೂರ್ಯಕಾಂತ ರ‍್ಯಾಕಲೆ, ಹಣಮಂತ ಪೂಜಾರಿ, ಪ್ರತಾಪ ಕಾಕಡೆ ಸೇರಿದಂತೆ ಓಂ ವೀರಭದ್ರೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಇದ್ದರು.