ನಾವೇಲ್ಲ ಹಿಂದೂ, ನಾವೇಲ್ಲ ಒಂದು ಅಂದಾಗ ಮಾತ್ರ ದೇಶ ಸುಭದ್ರವಾಗಿರಲಿದೆ : ಗುರುಪ್ರಸಾದ ಸ್ವಾಮಿ ಜಮಖಂಡಿ
ಚಿಂಚೋಳಿಯಲ್ಲಿ ಹಿಂದೂ ಜಾಗೃತಿ ಸಮಾವೇಶ ಜರುಗಿತು
ವಂದೇ ಮಾತರಂ ಒಪ್ಪದವರು ಭಾರತ ಬಿಟ್ಟು ತೊಲಗಿ: ವಾಗ್ಮಿ ಶ್ರೀಕಾಂತ ಶೆಟ್ಟಿ ಕಾರ್ಕಳ
ನಾವೇಲ್ಲ ಹಿಂದೂ, ನಾವೇಲ್ಲ ಒಂದು ಅಂದಾಗ ಮಾತ್ರ ದೇಶ ಸುಭದ್ರವಾಗಿರಲಿದೆ : ಗುರುಪ್ರಸಾದ ಸ್ವಾಮಿ ಜಮಖಂಡಿ
ಚಿಂಚೋಳಿ : ವಂದೇ ಮಾತರಂ ಹಾಡಲು ಒಪ್ಪದವರು ದೇಶ ದ್ರೋಹಿಗಳು. ಅಂತಹವರು ಭಾರತ ನೆಲ ತೊಲಗಿ . ದೇಶದಲ್ಲಿಯೇ ಇರಲು ಇಚ್ಚಿಸುವರು ಭಾರತ ಸರಕಾರದ ನೀತಿಗಳಿಗೆ ಬದ್ಧರಾಗಿರಬೇಕು ಎಂದು ಮಂಗಳೂರಿನ ಹಿಂದೂ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತಶೆಟ್ಟಿ ಕಾರ್ಕಳ ಹೇಳಿದರು.
ಅವರು ಪಟ್ಟಣದ ದಿ. ವೈಜಿನಾಥ ಪಾಟೀಲ್ ಸ್ಮಾರಕ ಆವರಣದಲ್ಲಿ ಚಿಂಚೋಳಿ ಛತ್ರಪತಿ ಶಿವಾಜಿ ಯುವಕ ಸಂಘದ 11ನೇ ವರ್ಷದ ಪ್ರಯುಕ್ತ ಹಾಗೂ ಶಿವಾಜಿ ಮಹಾರಾಜರ 396ನೇ ಜಯಂತ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಹಿಂದೂ ಜಾಗೃತಿ ಸಮಾವೇಶದ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿ ಮಾತನಾಡಿದರು.
ದೇಶದಿಂದ ಪಾಕಿಸ್ತಾನವನ್ನು ಹೊರಹಾಕಲಾಗಿದೆ. ಅದು ಈಗ ಬಿಕ್ಷುಕರ ದೇಶ. ಭಾರತದ ಇವತ್ತಿನ ಶತ್ರು ಅಮೇರಿಕ. ಅಮೇರಿಕವನ್ನು ಎದುರಿಸುವ ಶಕ್ತಿ ಭಾರತ ಹೊಂದಿದೆ. ಛತ್ರಪತಿ ಶಿವಾಜಿ, ಸಂಬಾಜಿಯವರ ಸೋಲು ದೇಶದೊಳಗಿರುವ ದೇಶದ್ರೋಹಿಗಳಿಂದಲೇ ನಡೆದಿದೆ. ಹೀಗಾಗಿ ದೇಶದೊಳಗಿರುವ ದೇಶದ್ರೊಹಿಗಳ ಬಗ್ಗೆ ಎಚ್ಚರವಹಿಸಬೇಕಾಗಿದೆ. ಪಾಕಿಸ್ಥಾನವನ್ನು ನಾಲ್ಕು ತುಂಡುಗಳ್ನಾಗಿ ಮಾಡುವ ಕೆಲಸ ಭಾರತದ ರಾಜತಾಂತ್ರಿಕ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋಧಿಯವರು ಶಿವಾಜಿ ಅವರ ತತ್ವ ಆದರ್ಶಗಳ ಹಾದಿಯಲ್ಲಿ ನಡೆಯುತ್ತಿದ್ದಾರೆ. ವಿಶ್ವದ ಇತರೆ ದೇಶಗಳು ಉರಿಯುತ್ತಿರುವ ಹೊತ್ತಿನಲ್ಲಿ ಭಾರತ ನೆಮ್ಮದಿಯಾಗಿದೆ ಅಂದರೆ ಅದು ಛತ್ರಪತಿ ಶಿವಾಜಿ ಮಾಹರಾಜರು ನೀಡಿರುವ ತ್ಯಾಜ ಬಲಿದಾನದಿಂದ ಇದೆ. ಆದರೆ ಇವತ್ತು ಸಮಾಜ 5 ಕೆಜಿ ರೇಷನ ಅಕ್ಕಿಗಾಗಿ ಧರ್ಮವನ್ನು ಮಾರಿಕೊಳ್ಳಲಾಗುತ್ತಿದೆ. ತಾಯಿಯೆಂದರು 33 ಕೋಟಿ ದೇವತೆಗಳನ್ನು ಪಕ್ಕಕೆ ಇಟ್ಟು, ಪ್ರತಿ ಮನೆಯಲ್ಲಿ ಭಾರತಾಂಬೆ ಪೋಟೋ, ಮಕ್ಕಳಿಗೆ ಧರ್ಮ ಶಿಕ್ಷಣ, ಸಂಸ್ಕೃತಿ ಮತ್ತು ಶಿವಾಜಿ ಮಹಾರಾಜರ ಕಥೆಗಳನ್ನು ತಿಳಿಸುವುದರ ಜೊತೆಗೆ ಸ್ವಾಭಿಮಾನ, ರಾಷ್ಟ್ರಾಭಿಮಾನ ಮತ್ತು ಹಿಂದೂ ಸ್ವರಾಜ ಕಟ್ಟಿ ಬೆಳಿಸಿರುವ ಶಿವಾಜಿ ಮಹಾರಾಜರ ಸಾಮ್ರಾಜ್ಯವನ್ನು ಉಳಿಸುವುದು ದೇಶದ ಪ್ರತಿಯೊಬ್ಬರ ಮಾತೆಯರ ಜಿಜಾಬಾಯಿಯಂತೆ ಜವಬ್ದಾರಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಜಮಖಂಡಿಯ ಗುರುಪ್ರಸಾದ ಸ್ವಾಮಿ ಮಾತನಾಡಿ, ವಿಶ್ವಕ್ಕೆ ಕೊಡುಗೆ ನೀಡಿದ ಭಾರತ ದೇಶದ ಸಂಸ್ಕೃತಿಯ ಮೇಲೆ ವಿದೇಶಿಯರಿಂದ ಬಲತ್ಕಾರ ನಡೆಯುತ್ತಿದೆ. ಮತಾಂದರ ಭಕ್ತಿಯಾರ ಕಿಲ್ಜಿಯಿಂದ ನಳಂದಾ ವಿಶ್ವವಿದ್ಯಾಲಯಕ್ಕೆ ಬೆಂಕಿ ಹಚ್ಚಲಾಗಿತ್ತು. ಸೋಮನಾಥ ದೇವಾಲಯದ ಮೇಲೆ 16 ಬಾರಿ ದಾಳಿ ನಡೆಸಿ ಬಂಗಾರದ ಸಂಪತ್ತು ದೊಚ್ಚಿಕೊಂಡು ಹೋಗಲಾಗಿದೆ. ದೇಶದೊಳಗಿನವರಿಂದಲೇ ದೇಶದ್ರೋಹಿಗಳ ಪುಣ್ಯ ಸ್ಮರಣೆಗಳು ನಡೆಯುತ್ತಿದ್ದು, ಜನರು ಬದಲಾವಣೆ ಆಗದಿದ್ದರೆ ದೇಶಕ್ಕೆ ಗಂಡಾತರವಿದೆ. ಹಿಂದೂ ಸಂಸ್ಕೃತಿಯನ್ನು ಹರಣ ಮಾಡಲಾಗುತ್ತಿದ್ದು, ಜಾತಿ ಬಿಟ್ಟು ನಾವೇಲ್ಲ ಹಿಂದೂ, ನಾವೇಲ್ಲ ಒಂದು ಅಂದಾಗ ಮಾತ್ರ ದೇಶ ಸುಭದ್ರವಾಗಿರಲಿದೆ ಎಂದರು.
ನರನಾಳ ಶಿವಕುಮಾರ ಶಿವಾಚಾರ್ಯರು ಮಾತನಾಡಿದರು. ಸಂಘದ ಕಿರಣ ಪಾಂಚಾಳ ಪ್ರಾಸ್ತವಿಕ ನುಡಿಗಳಲ್ಲಿ ಸಂಘದ ಉದ್ದೇಶಗಳು ವಿವರಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಸಂತ ಇಟಗಿ, ಆರ್ ಎಸ್ ಎಸ್ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ ಅವರು ಉಪಸ್ಥಿತರಿದರು.
