ಗುಡಿಗಳಿಗೆ ತೆರಳಿದರೆ ಕಣ್ಣು ಮುಚ್ಚಿಸುತ್ತವೆ. ಶಾಲೆಗಳು ಕಣ್ಣು ತೆರೆಸುತ್ತವೆ : ಜ್ಞಾನಪ್ರಕಾಶ ಸ್ವಾಮಿಜಿ
ಗುಡಿಗಳಿಗೆ ತೆರಳಿದರೆ ಕಣ್ಣು ಮುಚ್ಚಿಸುತ್ತವೆ. ಶಾಲೆಗಳು ಕಣ್ಣು ತೆರೆಸುತ್ತವೆ : ಜ್ಞಾನಪ್ರಕಾಶ ಸ್ವಾಮಿಜಿ
ಸರಕಾರಿ ಶಾಲೆಗಳೆಂದರೆ ತಾತ್ಸಾರ ಮನೋಭಾವನೆ ಇರಬಾರದು | ಸರಕಾರಿ ಶಾಲೆಗಳಲ್ಲಿ ಓದಿದ್ದ ಮಕ್ಕಳೇ ದೊಡ್ಡ ಪ್ರತಿಭೆ ಹೊಂದಿದವರು ಆಗಿದ್ದಾರೆ | ಐಎಎಸ್, ಐಪಿಎಸ್ ಗಳಾಗಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ
ಚಿಂಚೋಳಿ : ಗುಡಿಗಳಿಗೆ ತೆರಳಿದರೆ ಕಣ್ಣು ಮುಚ್ಚಿಸುತ್ತವೆ. ಆದರೆ ಶಾಲೆಗಳಿಗೆ ತೆರಳಿದರೆ ಕಣ್ಣು ತೆರೆಸುತ್ತವೆ. ಹೀಗಾಗಿ ಶಾಲೆಗಲೇ ದೇವಾಲಯ. ಶಿಕ್ಷಕರೆ ದೇವರು. ವಿದ್ಯಾರ್ಥಿಗಳೇ ಭಕ್ತಾದಿಗಳು ಎಂದು ಮೈಸೂರು, ಕೋಡ್ಲಾ ಉರಲಿಂಗ ಪೆದ್ದೇಶ್ವರ ಸಂಸ್ಥಾನದ ಪೀಠಾಧಿಪತಿ ಜ್ಞಾನಪ್ರಕಾಶ ಸ್ವಾಮಿಜಿ ಹೇಳಿದರು.
ತಾಲೂಕಿನ ಗಡಿಕೇಶ್ವರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಗ್ರಾಮದ ಬುದ್ಧ ಬಸವ ಅಂಬೇಡ್ಕರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 2025- 26ನೇ ಸಾಲಿನ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಪ್ರಧಾನ ಪರೀಕ್ಷೆಗಾಗಿ ನಡೆಸಿರುವ ಪೂರ್ವ ಸಿದ್ದತಾ ಪರೀಕ್ಷೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸರಕಾರಿ ಶಾಲೆಗಳೆಂದರೆ ತಾತ್ಸಾರ ಮನೋಭಾವನೆ ಇರಬಾರದು. ಈ ಶಾಲೆಗಳಲ್ಲಿ ಓದಿದ್ದವರೇ ಐಎಎಸ್, ಐಪಿಎಸ್ ಗಳಂತಹ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿಕೊಂಡವರಲ್ಲಿಯೇ ದೊಡ್ಡ ಪ್ರತಿಭೆ ಅಡಗಿಡದೆ. ಪುಸ್ತಕಗಳನ್ನು ಆಸ್ತಿ ಆಗಿಸಿಕೊಂಡವನು ,ಜಗತ್ತಿನ ನಂಬರ್ ಒನ್ ವ್ಯಕ್ತಿ ಆಗುತ್ತಾನೆ. ಹೀಗಾಗಿ ಪಾಲಕರು ಆಸ್ತಿ ಖರೀದಿ ಮಾಡುವುದರ ಬದಲಾಗಿ ಪುಸ್ತಕಗಳು ಖರೀದಿಸಿ ಅದನ್ನೆ ಆಸ್ತಿಯನ್ನಾಗಿಸಬೇಕು. ಕನಿಷ್ಠ ಮನೆಯಲ್ಲಿ 1 ಸಾವಿರ ಪುಸ್ತಕಗಳು ಇಟ್ಟುಕೊಂಡಿರಬೇಕು. ಪೇನ್ನು ಅನ್ನೊಂದು ಒಂದು ಅಸ್ತ್ರ ಆಗಿದೆ. ಜೇಬಲ್ಲಿ ಹಣವಿಲ್ಲದಿದ್ದರೂ ಪರವಾಗಿಲ್ಲ. ಆದರೆ ಜೇಬಲ್ಲಿ ಪೇನ್ನು ಇರಬೇಕು. ಅಂಬೇಡ್ಕರ್ ಹೇಳಿರುವಂತೆ ಶಿಕ್ಷಣವೆಂಬುವುದು ಹುಲಿಯ ಹಾಲಿದ್ಧಂತೆ. ಇದನ್ನು ಕುಡಿದವರು ಘರ್ಜಿಸಲೇಬೇಕು. ಆದರಿಂದ ಶಿಕ್ಷಣ ಬದುಕಿನ ವಿಮೋಚನೆ ಆಗಿದೆ ಎಂದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭೀಮರಾವ ಟಿ. ಟಿ, ಎಸ್. ಬಿ. ಐ ಬ್ಯಾಂಕ್ ವ್ಯವಸ್ಥಾಪಕ ಸದಾಶಿವ ರಾತ್ರೀಕರ್, ಸುರೇಶ ಓಂಕಾರ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷೆ ಸುಮಲತಾ ಅಶೋಕ ರಂಗನೂರ, ಮಹಾದೇವಪ್ಪ ಮುಕ್ರಂಬಿ, ದೇವೀಂದ್ರಪ್ಪ ಹೋಳ್ಕರ್, ಶಿವನಾಗಯ್ಯ ಹಾಬಳಕರ್, ಶಂಕರರಾವ ಹೊಸಮನಿ, ಬಸವರಾಜ ಹಲಚೇರಿ, ಸುಲೇಮಾನ ಸಾಬ್ ದರ್ಜಿ, ನೀಲಕಂಠಪ್ಪ ಹಲಚೇರಿ, ಸಂತೋಷ ಮಾಲಿಪಾಟೀಲ್, ಸಿದ್ದಪ್ಪ ರಂಗನೂರ್, ಶಿವಲಿಂಗಪ್ಪ, ಶಿವಾನಂದ ರೆಮಣಿ, ಬಸವರಾಜ. ಕೆ.ಹಲಚೇರಿ, ಜೈರಾಮ ಕುಲಕರ್ಣಿ, ಸೂಳೆಮನ ದರ್ಜಿ, ಶಂಕರರಾವ ಹೊಸಮನಿ, ಶಕುಂತಲಾ ರಂಗನೂರ್, ರಾಜಶೇಖರ ರಾಮನಿ, ಚಂದ್ರಶೇಖರ, ಕಲ್ಲಪ್ಪ , ರಾಮಲಿಂಗಪ್ಪ, ರಾಯಪ್ಪ, ಶಿವಶರಣ ಭಟಗೇರಿ ಅವರು ಸೇರಿದಂತೆ ಶಾಲೆಯ ಮಕ್ಕಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ :
ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದುಕೊಂಡು ಪ್ರಥಮ ಸ್ಥಾನಗಳಿಸಿರುವ ಭಾಗೇಶ, ದ್ವಿತೀಯ ಸ್ಥಾನ ಲಕ್ಷ್ಮೀ ಹಾಗೂ ತೃತೀಯ ಸ್ಥಾನ ಸಾಗರ ಭೀಮಯ್ಯ, ಕುಶಾಲ ರಾಘವೇಂದ್ರ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಬಹುಮಾನದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು ಮತ್ತು ಗ್ರಾಮದ ಶಾಲೆಗೆ ಭೂದಾನ ಮಾಡಿರುವ ದಾನಿಗಳು ವಿಶೇಷ ಗೌರವ ಸನ್ಮಾನ ಜರುಗಿಸಲಾಯಿತು.
