ವಿಕ್ರಮ ಅಷ್ಟಗಿಗೆ ಗೆಳೆಯರ ವತಿಯಿಂದ ಸನ್ಮಾನ
ವಿಕ್ರಮ ಅಷ್ಟಗಿಗೆ ಗೆಳೆಯರ ವತಿಯಿಂದ ಸನ್ಮಾನ
ಆಳಂದ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ನ್ಯಾಷನಲ್ ಹುಮೆನ್ ರೈಟ್ಸ್ ಆ್ಯಂಟಿ ಕರಪಷನ ಬ್ಯೂರೊ ಆಫ್ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾದ ವಿಕ್ರಮ ಅಷ್ಟಗಿ ಯವರಿಗೆ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು. ಶ್ರೀಕಾಂತ ಕಾಂಬಳೆ ಮಾತನಾಡಿ ವಿಕ್ರಮ ಅಷ್ಟಗಿಯವರು ಪ್ರಾಮಾಣಿಕವಾಗಿ ಬಡವರಿಗೆ ನ್ಯಾಯವನ್ನು ಒದಗಿಸಿ ಕೊಟ್ಟಿದ್ದಾರೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಲಿ ಎಂದು ಆಶಯವ್ಯಕ್ತಪಡಿಸಿ ಶುಭ ಹಾರೈಸಿದರು. ರಾಜಕುಮಾರ ಮುದಗಲೆ ಮಾತನಾಡಿ ಇವರ ಪರಿಶ್ರಮಕ್ಕೆ ಸಿಕ್ಕ ಫಲವಾಗಿದೆ ಇದೇ ರೀತಿ ಕಾರ್ಯ ಮುಂದುವರಿಸಲಿ ಎಂದರು. ವಿಕಾಸ ಕಾಂಬಳೆ ಮಾತನಾಡಿ ವಿಕ್ರಮ ಅವರಿಗೆ ಈ ಸ್ಥಾನ ದೊರೆತಿದ್ದು ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.ಈ ಸಂದರ್ಭದಲ್ಲಿ ರಾಜಕುಮಾರ ಮುದಗಲೆ ಬಿಎಸ್ಪಿ ತಾಲೂಕು ಅಧ್ಯಕ್ಷರು. ಸತೀಶ ಮೊದಲೆ , ಸುಧಾಕರ ಮೊದಲೆ ಶ್ರೀಕಾಂತ ಕಾಂಬಳೆ ವಿಕಾಸ ಕಾಂಬಳೆ ಪೃಥ್ವಿ ಮೊದಲೆ . ಸಂತೋಷ ಹಡಪದ . ಮುಂತಾದವರು ಉಪಸ್ಥಿತರಿದ್ದರು.
ವರದಿ ಡಾ. ಅವಿನಾಶ S. ದೇವನೂರ
