ಜಮಾತೆ ಇಸ್ಲಾಂ ಹಿದಾಯತ್ ಸೆಂಟರ್‌ನಲ್ಲಿ ಇಫ್ತಿಯಾರ್ ಕೂಟ – ಸೌಹಾರ್ದತೆಗೆ ಒತ್ತು-ಶಿವರಾಜ ಅಂಡಗಿ
ಜಮಾತೆ ಇಸ್ಲಾಂ ಹಿದಾಯತ್ ಸೆಂಟರ್‌ನಲ್ಲಿ ಇಫ್ತಿಯಾರ್ ಕೂಟ – ಸೌಹಾರ್ದತೆಗೆ ಒತ್ತು-ಶಿವರಾಜ ಅಂಡಗಿ
ಕಲಬುರಗಿ:ಮನುಷ್ಯ ಜಾತಿ ತಾನೊಂದೇ ಬಲಂ" ಎಂದರ್ಥ. ಇದು ಪಂಪನ ಆದಿಪುರಾಣದಲ್ಲಿ ಬರುವ, ಮನುಷ್ಯರೆಲ್ಲರೂ ಒಂದೇ ಎಂಬ ಸಮಾನತೆ ಮತ್ತು ವಿಶ್ವಬಂಧುತ್ವವನ್ನು ಸಾರುವ ರಂಜಾನ್ ಹಬ್ಬ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಹೇಳಿದರು.
ನಗರದ ಜಮಾತೆ ಇಸ್ಲಾಂ ಹಿದಾಯತ್ ಸೆಂಟರ್‌ನಲ್ಲಿ ಪವಿತ್ರ ರಂಜಾನ್ ಮಾಸದ ಅಂಗವಾಗಿ ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಹಿಂದೂಗಳು ಶ್ರಾವಣ ಮಾಸವನ್ನು ಪವಿತ್ರವಾಗಿ ಆಚರಿಸುವಂತೆ, ಮುಸ್ಲಿಂ ಬಾಂಧವರು ರಂಜಾನ್ ಮಾಸವನ್ನು ಭಕ್ತಿ ಭಾವದಿಂದ ಆಚರಿಸುತ್ತಾರೆ. ಕಲಬುರಗಿ ಜಿಲ್ಲೆಯ ಜನರು ಧರ್ಮಭೇದವಿಲ್ಲದೆ ಸೌಹಾರ್ದತೆಯೊಂದಿಗೆ ಬದುಕುತ್ತಿರುವುದು ಶ್ರೀ ಶರಣಬಸವೇಶ್ವರರು ಹಾಗೂ ಖಾಜಾ ಬಂದೇನವಾಜ್ ಅವರ ಆದರ್ಶಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೆಗಲತಿಪ್ಪಿ , ಸೈಯದ ನಜೀರುದ್ದೀನ್ ಮುತಾವಲಿ, ಡಾ. ರಹಿಮಾನ್ ಪಟೇಲ್ ಅವರನ್ನು ಜಿಲ್ಲಾ ಮತ್ತು ರಾಜ್ಯ ಪರಿಷತ್ತಿನ ಪ್ರತಿನಿಧಿಗಳಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದರು.
ಡಾ. ಸುಬ್ಬಯ್ಯ ನೀಲಾ, ಡಾ. ಹೋರಾಟಗೋರ ಲಕ್ಷ್ಮಣ ದಸ್ತಿ, ಮೊಹಮ್ಮದ್ ಶಫಿ, ಮೊಹಮ್ಮದ್ ಜೀಯಾಹುಲ್ಲಾ, ಆಯಾಜುದ್ದೀನ್ ಪಟೇಲ್ ಮಾತನಾಡಿದರು.
ಪ್ರಾರ್ಥನೆಯ ನಂತರ ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲಿ ಇದ್ದ ಆಹಾರಗಳನ್ನು ಸೇವಿಸಿದರು,
ಈ ಸಂದರ್ಭದಲ್ಲಿ ನಾಗೇಂದ್ರ ಸಕ್ಕರಗಿ, ಚಂದ್ರಶೇಖರ ಬ್ಯಾಕಡ್, ರಾಜಶೇಖರ, ಶ್ಯಾಮಣ್ಣ, ಪ್ರಭು, ವಿನೋದ ಜನೆವರಿ, ಗಣೇಶ ಚಿನ್ನಾಕರ, ಶರಣು ಪಟ್ಟಣಶೆಟ್ಟಿ, ಆಯೋಜಿದ್ದೀನ್ ಪಟೇಲ್, ರಹೆಮಾನ್ ಪಟೇಲ್, ಅಬ್ದುಲ್ ಬಾಬಾ ಫಕ್ರುದ್ದೀನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
