ದಾವಣಗೆರೆಯ ಯುವ ಗಾಯಕಿ ಫಿಲ್ಮ್ ಫೇರ್ ಅವಾರ್ಡ್ ಗೆ ನಾಮಿನೇಟ್

ದಾವಣಗೆರೆಯ ಯುವ ಗಾಯಕಿ ಫಿಲ್ಮ್ ಫೇರ್ ಅವಾರ್ಡ್ ಗೆ ನಾಮಿನೇಟ್

ದಾವಣಗೆರೆಯ ಯುವ ಗಾಯಕಿ ಫಿಲ್ಮ್ ಫೇರ್ ಅವಾರ್ಡ್ ಗೆ ನಾಮಿನೇಟ್

ದಾವಣಗೆರೆಯ ಮಗಳು ಮತ್ತು ಕಲಬುರ್ಗಿಯ ಸೊಸೆ ಶೃತಿ ಪ್ರಹ್ಲಾದ ಈಗಾಗಲೇ ಐವತ್ತಕ್ಕೂ ಹೆಚ್ಚು ಸಿನೆಮಾಗಳಿಗೆ ಹಿನ್ನೆಲೆ ಗಾಯಕಿಯಾಗಿ ಪ್ರಸಿದ್ದರಾಗಿದ್ದಾರೆ. ಇವರು ಹಾಡಿದ "ಹಿತ್ತಲಕ ಕರಿಬ್ಯಾಡ ಮಾವ" ಎಂಬ ಕರಟಕ ದಮನಕ ಸಿನೆಮಾದ ಹಾಡು ಬಹಳಷ್ಟು ಜನಪ್ರಿಯ ಆಗಿತ್ತು. 

ಇದೀಗ ಇದೇ ಹಾಡು ಪ್ರತಿಷ್ಠಿತ ಫಿಲ್ಮ್ ಫೇರ್ ಪ್ರಶಸ್ತಿಯ ಅಂತಿಮ‌ ಸುತ್ತಿಗೆ ಆಯ್ಕೆ ಆಗಿದೆ. ಕನ್ನಡದ ಹಿನ್ನೆಲೆ ಗಾಯನ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಇಂದೂ ನಾಗರಾಜ್, ಶಿವಾನಿ ಸ್ವಾಮಿ ಮತ್ತು ವೈಶ್ ಅಂತಿಮ ಸುತ್ತಿನ ಸಹಸ್ಪರ್ಧಿಗಳಿದ್ದಾರೆ. ಫಿಲ್ಮ್ ಫೇರ್ ಪ್ರಶಸ್ತಿಯ ಅತ್ಯುತ್ತಮ ಹಿನ್ನೆಲೆ ಗಾಯಕಿ ಸ್ಪರ್ಧೆ ಇದಾಗಿದ್ದು ಕೋಚಿನ್ ನಗರದಲ್ಲಿ ಅಂತಿಮ ಸ್ಪರ್ಧೆ ಏರ್ಪಟ್ಟಿದೆ. ನಮ್ಮೂರಿನ ಯುವಗಾಯಕಿ ಶೃತಿಪ್ರಹ್ಲಾದಗೆ ಫಿಲ್ಮ್ ಫೇರ್ ಅವಾರ್ಡ್ ಲಭಿಸಲೆಂದು ಮನದುಂಬಿ ಹಾರೈಸೋಣ.

ಮಲ್ಲಿಕಾರ್ಜುನ ಕಡಕೋಳ

 ನಿರ್ದೇಶಕರು, ರಂಗಾಯಣ, ದಾವಣಗೆರೆ