ಹಿಂದಿ ದಿವಸ ವಿರೋಧಿಸಿ ಒಂದು ದಿನದ ಬೃಹತ್ ಪ್ರತಿಭಟನೆ ಧರಣ ಸತ್ಯಾಗ್ರಹ
ಹಿಂದಿ ದಿವಸ ವಿರೋಧಿಸಿ ಒಂದು ದಿನದ ಬೃಹತ್ ಪ್ರತಿಭಟನೆ ಧರಣ ಸತ್ಯಾಗ್ರಹ
ಕಲಬುರಗಿ : ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಆನಂದ ದೋಡ್ಡಮನಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಎದರು ಹಿಂದಿ ದಿವಸ ವಿರೋಧಿಸಿ ಒಂದು ದಿನದ ಬೃಹತ್ ಪ್ರತಿಭಟನೆ ಧರಣ ಸತ್ಯಾಗ್ರಹ ಮಾಡಲಾಯಿತು. ಈ ಸಂದರ್ಭದಲ್ಲಿ ಮಹೇಶ್ ಕಾಶಿ, ಮೈಹತಾಬ ಪಟೇಲ್, ಪ್ರವೀಣ್ ಕಟ್ಟಿಮನಿ, ಜಿಲ್ಲಾ ಉಪಾಧ್ಯಕ್ಷ ಸಿದ್ದು ಪೂಜಾರಿ, ಹಾಗೂ ಸೂರ್ಯಕಾಂತ ಪಂಚಾಳ, ಸುರೇಶ ಹೋಸಮನಿ, ಅಪ್ಪು ಛತ್ರಿ, ಚಂದರ ಚವ್ಹಾಣ, ಯಲ್ಲಪ್ಪಾ ಭಂಕಲಗಿ, ಸಚಿನ ಲೋಕಾಣೆ, ಸಾಗಾರ ಡಿ ಅಭಿಶಾಳ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
ಭಾರತದ ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಭಾಷಿಕ ವೈವಿಧ್ಯತೆ ಅನನ್ಯವಾದದ್ದು. ವಿವಿಧತೆಯಲ್ಲಿ ಬಕತೆ ಎಂಬುದು ಸ್ವಾತಂತ್ರ‍್ಯ ಚಳವಳಿಗೂ ಹಿಂದಿನ ಘೋಷವಾಕ್ಯವಾಗಿತ್ತು. ಎಲ್ಲ ಭಾಷಿಕ ಸಮುದಾಯಗಳೂ ತಮ್ಮ ವೈವಿಧ್ಯತೆಯನ್ನು ಉಳಿಸಿಕೊಂಡೇ ಈ ದೇಶ ಒಂದಾಗಿ ಉಳಿಯಲು ಸಹಕರಿಸಿದ್ದರು. ಬ್ರಿಟಿಷರ ಆಳ್ವಿಕೆಗೂ ಮುನ್ನ ಸಾವಿರಾರು ದೊರೆಗಳ, ಸಾಮಂತರ ಅಡಿಯಲ್ಲಿ ಛಿದ್ರವಾಗಿದ್ದ ಭೂಭಾಗಗಳೆಲ್ಲ ಒಂದಾಗಿಯೇ ದೇಶವಾಗಿದೆ. ಇಂಥ ವೈವಿಧ್ಯತೆಯ ನೆಲದಲ್ಲಿ ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿಯನ್ನು ಬಲವಂತವಾಗಿ ಎಲ್ಲರ ಮೇಲೂ ಹೇರುವುದು ಕ್ರೌರ್ಯ ಮತ್ತು ರಾಜಕೀಯ ಗೂಂಡಾಗಿರಿ, ಸಾಂಸ್ಕೃತಿಕ ಭಯೋತ್ಪಾದನೆಯ ಲಕ್ಷಣ. ಅದು ಯಾವ ಕಾಲಕ್ಕೂ ಆಗಕೂಡದು. ಈ ಥರದ ರಾಜಕೀಯ ದಾದಾಗಿರಿ ನಡೆದಾಗಲೆಲ್ಲ ಜನರು ಸಿಡಿದೆದ್ದು ಪ್ರತಿಭಟಿಸಿದ್ದಾರೆ. ಜನರು ತಾವಾಡುವ ನುಡಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತಾರೆ. ಅವರ ನುಡಿಗೆ ಹೊರತಾದ ಇನ್ಯಾವುದೋ ಅಪರಿಚಿತ ಭಾಷೆಯನ್ನೇ ನೀವು ಆಡಬೇಕು. ಬಳಸಬೇಕು ಎಂಬ ಫರ್ಮಾನು ಹೊರಡಿಸಿದರೆ ಆ ಭಾಷಾ ಸಮುದಾಯ ಬಂಡಾಯವೇಳುತ್ತದೆ.
ಭಾರತ ಒಂದು ಒಕ್ಕೂಟ ರಾಷ್ಟ್ರ, ಯೂನಿಯನ್ ಆಫ್ ಸ್ಟೇಟ್ಸ್. ಬ್ರಿಟಿಷ್ ವಸಾಹತುಶಾಹಿ ಆಡಳಿತ ಕೊನೆಗೊಂಡ ನಂತರ ಬೇರೆ ಬೇರೆ ಪ್ರಾಂತ್ಯಗಳಾಗಿ ಗುರುತಿಸಿಕೊಂಡಿದ್ದ ಭೂಭಾಗಗಳೆಲ್ಲ ಒಂದಾಗಿ ಭಾರತ ಒಕ್ಕೂಟ ನಿರ್ಮಾಣವಾಗಿದೆ. ಒಂದು ಒಕ್ಕೂಟವಾಗಿ ಎಲ್ಲ ಪ್ರಾಂತ್ಯಗಳ ಭಾಷೆ, ಸಂಸ್ಕೃತಿ, ಇತಿಹಾಸ, ಆಚಾರ- ವಿಚಾರಗಳನ್ನು ಗೌರವಿಸುವ ಹೊಣೆ ಒಕ್ಕೂಟದ್ದಾಗಿದೆ. ವಿವಿಧತೆಯಲ್ಲಿ ಏಕತೆ,
ಎಂಬುದು ಒಕ್ಕೂಟದ ಮೂಲಮಂತ್ರ, ಆದರೆ ಈ ಒಗ್ಗಟ್ಟನ್ನು ಮುರಿಯುವ ಕೆಲಸವನ್ನು ಹಿಂದಿ ಸಾಮ್ರಾಜ್ಯಶಾಹಿಗಳು ನಿರಂತರವಾಗಿ ನಡೆಸುತ್ತಲೇ ಇದ್ದಾರೆ.
ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳೂ ರಾಷ್ಟ್ರಭಾಷೆಗಳೇ ಆಗಿವೆ. ಈ ಪರಿಚ್ಛೇದದಲ್ಲಿ ಒಳಗೊಳ್ಳದ ನೂರಾರು ಜೀವಂತ ಭಾಷೆಗಳೂ ನಮ್ಮ ನಡುವೆ ಇವೆ. ಈ ಎಲ್ಲ ಭಾಷೆಗಳೂ ಉಳಿದು, ಬೆಳೆಯುವ ಎಲ್ಲ ಹಕ್ಕನ್ನೂ ಒಳಗೊಂಡಿವೆ. ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡುವ ಪ್ರಸ್ತಾಪವನ್ನು ಸಂವಿಧಾನ ಕರಡು ರಚನೆಯ ಸಂದರ್ಭದಲ್ಲೇ ತಿರಸ್ಕರಿಸಲಾಗಿದೆ. ಹಿಂದಿಯೂ ಕನ್ನಡದ ಹಾಗೆಯೇ ಒಂದು ಭಾಷೆ, ಅದಕ್ಕೆ ಯಾವ ಹೆಚ್ಚುಗಾರಿಕೆಯೂ ಇಲ್ಲ. ಇರಬೇಕಾಗೂ ಇಲ್ಲ,
ಕೇಂದ್ರ ಸರ್ಕಾರ ತನ್ನ ಆಡಳಿತಕ್ಕಾಗಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಬಳಸಿಕೊಳ್ಳುತ್ತಿದೆ. ಇಂಗ್ಲಿಷನ್ನು ಬಿಟ್ಟು ಕೇವಲ ಹಿಂದಿಯನ್ನು ಮಾತ್ರ ಆಡಳಿತ ಭಾಷೆಯನ್ನಾಗಿ ಮಾಡಿಕೊಳ್ಳುವ ಹುನ್ನಾರವನ್ನು ಅರವತ್ತರ ದಶಕದ ಹಿಂದಿವಿರೋಧಿ ಹೋರಾಟ ವಿಫಲಗೊಳಿಸಿದೆ. ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಇಂಗ್ಲಿಷನ್ನೂ ಸಹ ಕೇಂದ್ರ ಸರ್ಕಾರದ ಆಡಳಿತ ಭಾಷೆಯನ್ನಾಗಿ ಉಳಿಸಬೇಕೆಂದು ಒತ್ತಡ ಹೇರಿದ್ದರಿಂದಾಗಿ ಇಂಗ್ಲಿಷ್-ಹಿಂದಿ ಎರಡೂ ಭಾಷೆಗಳೂ ಆಡಳಿತ ಭಾಷೆಗಳಾಗಿ ಉಳಿದುಕೊಂಡಿವೆ. ಒಂದು ವೇಳೆ ಈ ಹೋರಾಟ ನಡೆಯದೇ ಹೋಗಿದ್ದರೆ ಹಿಂದಿ ಬಳಸದ ರಾಜ್ಯಗಳ ಜನರು ಮೂರನೇ ದರ್ಜೆ ಪ್ರಜೆಗಳಾಗಿ ಉಳಿದುಕೊಳ್ಳಬೇಕಿತ್ತು,
ರಾಜಭಾಷಾ ಕಾಯ್ದೆಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಹಿಂದಿಯನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹಿಂದಿಯೇತರ ರಾಜ್ಯಗಳ ಮೇಲೆ ಹೇರುವ ಕಾರ್ಯವನ್ನು ಮಾಡುತ್ತ ಬಂದಿದೆ. ಹಿಂದಿ ರಾಜ್ಯಗಳ ಜನರನ್ನು ಉದ್ಯೋಗದ ನೆಪದಲ್ಲಿ ಹಿಂದಿಯೇತರ ರಾಜ್ಯಗಳಿಗೆ ವಲಸೆ ಕಳುಹಿಸುವ ಮತ್ತು ವಲಸೆ ಹೋದ ಹಿಂದಿಯನ್ನರಿಗೆ ಎಲ್ಲ ರೀತಿಯ ಸವಲತ್ತುಗಳನ್ನು ನೀಡುವ ಕೆಲಸವನ್ನು ಮಾಡುತ್ತಿದೆ. ಹಿಂದೀ ಭಾಷಿಕರು ಹಿಂದಿಯೇತರ ಪ್ರದೇಶಗಳಿಗೆ ವರ್ಗವಾಗಲು ಒಪ್ಪಿದರೆ ಅವರಿಗೆ ಹೆಚ್ಚಿನ ಭತ್ಯೆ ನೀಡುವಂತೆ ಸಂ'ತ್ ಸಮಿತಿ ಶಿಫಾರಸು ಮಾಡಿದೆ. ಇಂಥ ಕುತಂತ್ರಗಳಿಂದಲೇ ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಗಂಟಲಿಗೆ ತುರುಕಲಾಗುತ್ತಿದೆ. ದೂರದರ್ಶನ ಆರಂಭವಾದ ಕಾಲಘಟ್ಟದಲ್ಲಿ ಕೇವಲ ನೆಪಕ್ಕೆ ಮಾತ್ರ ಒಂದೆರಡು ಗಂಟೆಗಳ ಪ್ರಾದೇಶಿಕ ಭಾಷಾ ಕಾರ್ಯಕ್ರಮಗಳನ್ನು ನೀಡಿ, ಸಂಪೂರ್ಣ ಹಿಂದಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಹಿಂದಿಯನ್ನು ಪರೋಕ್ಷವಾಗಿ ಹೇರಿದ್ದನ್ನು ಮರೆಯುವಂತಿಲ್ಲ,
ಕೇಂದ್ರ ಸರ್ಕಾರದ ಅಡಿಯಲ್ಲಿನ ಉದ್ಯಮಗಳು, ರೈಲ್ವೆ ಇಲಾಖೆ, ಬ್ಯಾಂಕಿಂಗ್ ವಲಯ ಹಾಗು ಸೇನಾ ನೇಮಕಾತಿಗಳ ಸಂದರ್ಭದಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಪರೀಕ್ಷೆಗಳನ್ನು ನಡೆಸುವ ಮೂಲಕ ಪ್ರಾದೇಶಿಕ ಭಾಷೆಗಳನ್ನು ಆಡುವ ಜನರ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳಗುತ್ತಿದೆ.
ಹಿಂದಿಯನ್ನು ಮಾತೃಭಾಷೆಯನ್ನಾಗಿ ಹೊಂದಿದವರು ಎಲ್ಲ ಅವಕಾಶಗಳನ್ನು ಆಕ್ರಮಣಕಾರಿಯಾಗಿ, ಆನೈತಿಕವಾಗಿ ಪಡೆದುಕೊಳ್ಳುತ್ತಿದ್ದರೆ, ಹಿಂದಿಯೇತರ ಭಾಷಿಕ ಯುವಸಮುದಾಯ ಉದ್ಯೋಗ ಮತ್ತು ಇತರ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ.
ಕೇಂದ್ರ ಸರ್ಕಾರ ಹಿಂದಿ ದಿವಸ್, ಹಿಂದಿ ಸಪ್ತಾಹ, ಹಿಂದಿ ಪಾಕ್ಷಿಕ ಇತ್ಯಾದಿ ಕಾರ್ಯಕ್ರಮಗಳನ್ನು ನಮ್ಮ ತೆರಿಗೆ ಹಣದಲ್ಲಿ ಸಂಘಟಿಸಿ, ಕೋಟ್ಯಂತರ ರುಪಾಯಿಗಳನ್ನು ಖರ್ಚು ಮಾಡಿ ಹಿಂದಿ ಭಾಷೆಯನ್ನು ಹಿಂದಿಯೇತರ ರಾಜ್ಯಗಳಲ್ಲಿ ಪಸರಿಸುವ ಕೆಲಸಕ್ಕೆ ಬಳಸುತ್ತಿದೆ. ಹಿಂದಿ ದಿವಸ್‌ಗಳಲ್ಲಿ ಭಾಗವಹಿಸುವ ನೌಕರರಿಗೆ ಅವರ ಕುಟುಂಬದವರಿಗೆ ಸಾವಿರಾರು ರುಪಾಯಿಗಳ ಬಹುಮಾನಗಳನ್ನು ಕೊಡಲಾಗುತ್ತದೆ. ಇದು ಕೇಂದ್ರ ಸರ್ಕಾರ ಕನ್ನಡ ದಿವಸ, ತಮಿಳು ದಿವಸ, ಮಲಯಾಳಂ ದಿವಸ, ಬಂಗಾಲಿ ದಿವಸಗಳನ್ನು ಎಂದು ಆಚರಿಸಿಲ್ಲ. ಇದರ ಹುನ್ನಾರವೇನು? ಹಿಂದಿಯೊಂದೇ ಈ ದೇಶದ ಭಾಷೆಯೇ? ಇತರ ಭಾಷೆಗಳು ಬೇರೆ ಜಗತ್ತಿನ ಭಾಷೆಗಳೇ? ಯಾಕೀ ತಾರತಮ್ಯ? ಕೇಂದ್ರ ಸರ್ಕಾರವೆಂದರೆ ಹಿಂದೀ ಸರ್ಕಾರವೇ? ಕೇಡ ಸರ್ಕಾರದಲ್ಲಿ ಹಿಂದಿಯೇತರ ಭಾಷಿಕರ ಪಾಲು ಇಲ್ಲವೇ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಹಿಂದಿಯನ್ನು ಕೇಂದ್ರ ಸರ್ಕಾರ ತನ್ನ ಆಡಳಿತ ಭಾಷೆಯನ್ನಾಗಿ ಮಾಡಿಕೊಂಡಿರುವ ಪರಿಣಾಮವ ಹಿಂದಿಯೇತರ ರಾಜ್ಯಗಳ ಜನರು ದ್ವಿತೀಯ ದರ್ಜೆ ಪ್ರಜೆಗಳಾಗಿ ಬದುಕಬೇಕಾಗಿ ಬಂದಿದೆ. ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಹಿಂದಿಯಲ್ಲೇ
ಸAದರ್ಶನಗಳು ನಡೆಯುತ್ತಿವೆ. ಹಿಂದಿಯ ಒಂದಕ್ಷರವೂ ಬಾರದವರು ಹಿಂದಿಯಲ್ಲೇ ಪ್ರಮಾಣ ಪತ್ರಗಳನ್ನು ನೀಡಬೇಕು. ಹಿಂದಿಯಲ್ಲೇಋ ಅರ್ಜಿಗಳನ್ನು ಭರ್ತಿ ಮಾಡಬೇಕು ಎಂಬ ನಿಯಮಗಳಿವೆ ಇದರಿಂದಾಗಿ ಹಿಂದಿಯೇತರರು ಭಾರೀ ಪ್ರಮಾಣದ ನಷ್ಟಕ್ಕೆ ಒಳಗಾಗುತ್ತಿದ್ದಾರೆ.
ಕರ್ನಾಟಕಕ್ಕೆ ವಲಸೆ ಬಂದ ಹಿಂದಿ ಭಾಷಿಕನಿಗೆ ಇಲ್ಲಿನ ರೈಲುಗಳಲ್ಲಿ ವಿಮಾನ ನಿಲ್ದಾಣಗಳಲ್ಲಿ, ಅಂಚೆ ಕಚೇರಿ- ಪಾಸ್ ಪೋರ್ಟ್ ಕಚೇರಿಗಳಲ್ಲಿ, ಕೇಂದ್ರ ಸರ್ಕಾರದ ಎಲ್ಲ ವ್ಯವಸ್ಥೆಗಳಲ್ಲೂ ಹಿಂದಿಯಲ್ಲೇ ಸೇವೆ ಸಿಗುತ್ತದೆ. ಆದರೆ ಒಬ್ಬ ಕನ್ನಡಿಗೆ ಹಿಂದಿರಾಜ್ಯಗಳಿಗೆ ವಲಸೆ ಹೋದರೆ ಅಲ್ಲಿ ಕನ್ನಡದಲ್ಲಿ ಯಾವುದೇ ರೀತಿಯಸೇವೆಗಳೂ ಸಿಗುವುದಿಲ್ಲ. ಹಿಂದಿ ವಲಸಿಗರು ಕರ್ನಾಟಕದ ಜನರೊಂದಿಗೆ ಸುಲಭವಾಗಿ ತಮ್ಮ ಭಾಷೆಯಲ್ಲೇ ವ್ಯವಹರಿಸಲು ವ್ಯವಹರಿಸಲು ಅನುಕೂಲ ಮಾಡಿಕೊಡಲು ಕನ್ನಡಿಗರಿಗೆ ಕಡ್ಡಾಯವಾಗಿ ತೃತೀಯ ಭಾಷೆಯನ್ನಾಗಿ ಹಿಂದಿ ಕಲಿಸಲಾಗುತ್ತಿದೆ. ನಾವು ಹಿಂದಿಯನ್ನು ಶಾಲೆಗಳಲ್ಲಿ ಕಲಿಸಿರುವುದು ನಮ್ಮ ಉಪಯೋಗಕ್ಕಲ್ಲ, ವಲಸೆ ಬಂದು ಕಟ್ಟಿಕೊಳ್ಳುತ್ತಿರುವ ಹಿಂದಿ ಭಾಷಿಕರ ಉಪಯೋಗಕ್ಕೆ! ಇಲ್ಲಿ ಬದುಕು,
ಹಿಂದಿಯೊAದೇ ದೇಶವನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ ಎಂದು ದೆಹಲಿಯಲ್ಲಿ ಕುಳಿತ ನಮ್ಮನ್ನಾಳುವ ರಾಜಕಾರಣ ಗಳು ಹೇಳುತ್ತಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ ಭಾಷೆಗಳು ದೇಶವನ್ನು ಒಡೆಯುತ್ತವೆಯೇ? ಹಿಂದಿಯನ್ನು ದೇಶಪ್ರೇಮದ ಪ್ರತೀಕವೆಂಬAತೆ ಕೇಂದ್ರ ಸರ್ಕಾರ ಬಿಂಬಿಸುತ್ತಿದೆ. ಹಾಗಿದ್ದರೆ ಈ ನೆಲದ ಭಾಷೆಗಳು ದೇಶವಿರೋಧಿಗಳೇ? ದೇಶವೆಂದರೆ ಹಲವು ಭಾಷಿಕ ರಾಜ್ಯಗಳಿಂದ ಆದದ್ದಲ್ಲವೇ? ಹೀಗಿದ್ದ ಮೇಲೆ ಹಿಂದಿಯೊAದನ್ನೇ ದೇಶದ ಭಾಷೆಯನ್ನಾಗಿ ಬಿಂಬಿಸುವುದೇ ಸಂವಿಧಾನ ವಿರೋಧಿ, ದೇಶವಿರೋಧಿಯಾಗುತ್ತದೆ.
ಬ್ಯಾಂಕುಗಳ ವಿಲೀನದ ಹೆಸರಲ್ಲಿ ಕನ್ನಡನಾಡಿನಲ್ಲಿ ಹುಟ್ಟಿದ ಅನೇಕ ಬ್ಯಾಂಕುಗಳು ಈಗ ಇತಿಹಾಸದ ಪುಟ ಸೇರಿಕೊಂಡಿವೆ. ಇನ್ನೂ ಹಲವು ಬ್ಯಾಂಕುಗಳು ವಿಲೀನಗೊಂಡು ಅಸ್ತಿತ್ವ ಕಳೆದುಕೊಳ್ಳಲಿವೆ. ಏಕೀಕರಣಗೊಂಡ ಬ್ಯಾಂಕುಗಳ, ಸಿಬ್ಬಂದಿ ಉತ್ತರದ ಭಾಗದಿಂದ ಬಂದವರಾಗಿದ್ದು ಎಲ್ಲೆಡೆ
ಗ್ರಾಹಕರೊಂದಿಗೆ ಬಲವಂತವಾಗಿ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ. ಇದರಿಂದಾಗಿ ಹಿಂದಿ ಗೊತ್ತಿಲ್ಲದ ಬಡ ರೈತರು, ಗ್ರಾಮೀಣ ಭಾಗದ ಜನರು, ಮಹಿಳೆಯರು ಪ್ರತಿನಿತ್ಯ ಪರದಾಡುತ್ತಿದ್ದಾರೆ.
ನಮ್ಮ ಹಕ್ಕೊತ್ತಾಯಗಳು:
ಕೇಂದ್ರ ಸರ್ಕಾರ ಈ ಕೂಡಲೇ ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವ ಎಲ್ಲ 22 ಭಾಷೆಗಳನ್ನೂ ಅಧಿಕೃತ, ಆಡಳಿತ ಭಾಷೆಗಳನ್ನಾಗಿ ಮಾಡಿ ಈ ದೇಶದ ಬಹುತ್ವವನ್ನು ಆ ಮೂಲಕ ಸಾರ್ವಭೌಮತೆಯನ್ನು ಕಾಪಾಡಬೇಕು. ಹಿಂದಿಗೆ ಅನೈತಿಕವಾಗಿ ವಿಶೇಷ ಮನ್ನಣೆ.
ನೀಡುವ ಸಂವಿಧಾನದ 343ರಿಂದ 351ನೇ ವಿಧಿಗಳನ್ನು ರದ್ದುಪಡಿಸಿ ಎಲ್ಲ ಭಾಷೆಗಳೂ ಒಕ್ಕೂಟದ ದೃಷ್ಟಿಯಲ್ಲಿ ಸಮಾನ ಎಂದು ಸಾರಬೇಕು, ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಕೇಂದ್ರ ಸರ್ಕಾರಿ ಇಲಾಖೆಗಳು, ಉದ್ಯಮಗಳಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು. ಎಲ್ಲ ಬಗೆಯ ಪತ್ರ ವ್ಯವಹಾರಗಳೂ ಕನ್ನಡದಲ್ಲೇ ನಡೆಯಬೇಕು. ಅಂತಾರಾಜ್ಯ ವ್ಯವಹಾರಗಳು ಮತ್ತು ಕೇಂದ್ರ ಸರ್ಕಾರದೊಂದಿಗಿನ ವ್ಯವಹಾರಗಳೂ ಸಹ ಕನ್ನಡ ನುಡಿಯಲ್ಲೇ ಆಗಬೇಕು. ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ಸೂತ್ರ ಜಾರಿಗೆ ಬರಬೇಕಾಗಿದೆ. ನಮ್ಮ ಶಾಲಾಪಠ್ಯಕ್ರಮಗಳಿಂದ ಹಿಂದಿ ಕಡ್ಡಾಯ ಕಲಿಕೆ ಕೊನೆಗೊಳ್ಳಬೇಕು. ಎಂದು ಮನವಿಯಲ್ಲಿತಿಳಿಸಿದ್ದಾರೆ.