ಶಿವಬಸವ ಸಾಂಸ್ಕೃತಿಕ ಸಂಸ್ಥೆಯಿಂದ ಭಾವೈಕ್ಯ ಬೇಸುಗೆ ಭಾರತ ವಿಶೇಷ ಭಾವ ಸಮ್ಮಿಲನ ಕಾರ್ಯಕ್ರಮ
ಶಿವಬಸವ ಸಾಂಸ್ಕೃತಿಕ ಸಂಸ್ಥೆಯಿಂದ ಭಾವೈಕ್ಯ ಬೇಸುಗೆ ಭಾರತ ವಿಶೇಷ ಭಾವ ಸಮ್ಮಿಲನ ಕಾರ್ಯಕ್ರಮ
ಕಲಬುರಗಿ : ಯುಗಾದಿ ಹಾಗೂ ರಂಜಾನ್ ಹಬ್ಬಗಳ ಪ್ರಯುಕ್ತ ನಗರದ ಪ್ರೀಯದರ್ಶಿನಿ ಇಂದಿರಾಗಾಂಧಿ ಕೈಗಾರಿಕಾ ತರಬೇತಿ ಕಾಲೇಜಿನಲ್ಲಿ ಶಿವಬಸವ ಸಾಂಸ್ಕೃತಿಕ ಸಂಸ್ಥೆಯಿಂದ ಭಾವೈಕ್ಯ ಬೆಸುಗೆ ಭಾರತ "ವಿಶೇಷ ಭಾವ ಸಮ್ಮಿಲನ" ಕಾರ್ಯಕ್ರಮವನ್ನು ಶುಕ್ರವಾರ 20ನೇ ತಾರೀಖಿನಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಜಯಶ್ರೀ ವಿ.ತೋಟ್ನಳ್ಳಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನದಿಸಿನ್ನೂರಿನ ಮಹಾಲಕ್ಷ್ಮಿ ಗುರುಪೀಠ ಹಾಗೂ ಶರಣ ಹೂಗಾರ ಮಾದಯ್ಯ ಗುರುಪೀಠದ ಪೀಠಾಧಿಪತಿ, ಪರಮಪೂಜ್ಯ ಶ್ರೀ ಗುರುರಾಜೇಂದ್ರ ಶಿವಯೋಗಿಗಳು ವಹಿಸಲ್ಲಿದ್ದು,
ಗೋಟುರಿನ, ಹಜರತ್ ಬಾಬುಶಾ ಸಾಹೇಬ್ ದಾದಾಪೀರ್ ದರ್ಗಾ ಪೀಠಾಧಿಪತಿ ಪೂಜ್ಯ ಶ್ರೀ ಸುರೇಶ ಮಾಲಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಹಿರಿಯ ಸಾಹಿತಿ ಮತ್ತು ಸರಕಾರಿ ಕಿರಿಯ ತಾಂತ್ರಿಕ ಶಾಲೆಯ ಪ್ರಾಂಶುಪಾಲ ಡಾ ಕೆ ಗಿರಿಮಲ್ಲ ನೇತೃತ್ವ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ, ಕೃಷಿ ಶ್ರೀ ಪ್ರಶಸ್ತಿ ಪುರಸ್ಕೃತ ಲೇಖಕ ಪ್ರೊ.ಯಶವಂತರಾಯ ಅಷ್ಠಗಿ, ಖ್ಯಾತ ಚಿತ್ರ ಕಲಾವಿದ ರೆಹಮಾನ್ ಪಟೇಲ್, ಕುಸುನೂರಿನ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ರಮೇಶ್ ತೇಗ್ಗಿನಮನಿ, ಚಿತ್ರ ಕಲಾವಿದ ಹಾಗೂ ಛಾಯಾಗ್ರಾಹಕ ಖಾಜಾ ಪಟೇಲ್ ಭಂಕುರ, ಪ್ರಿಯದರ್ಶಿನಿ ಇಂದಿರಾಗಾಂಧಿ ಕೈಗಾರಿಕಾ ತರಬೇತಿ ಕಾಲೇಜಿನ ಪ್ರಾಂಶುಪಾಲ ಸಿದ್ದಣ್ಣ ಭಾವಿಕಟ್ಟಿ, ಪ್ರಿಯದರ್ಶಿನಿ ಇಂದಿರಾಗಾಂಧಿ ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ಕುಶಾಲ್ ದರ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ.
ಶಿವಬಸವ ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ವಿಶ್ವನಾಥ್ ತೋಟ್ನಳ್ಳಿ ನೀರೂಪಿಸುವರು, ಪ್ರೀಯದರ್ಶಿನಿ ಕೈಗಾರಿಕಾ ತರಬೇತಿ ಕಾಲೇಜಿನ ಉಪನ್ಯಾಸಕ ಸಂಜು ಹಾಗರಗಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಲಿದ್ದಾರೆ ಎಂದು ಶಿವಬಸವ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೀಣಿ ಜಯಶ್ರೀ ವಿ ತೋಟ್ನಳ್ಳಿ ಅವರು ಮಾಹಿತಿ ನೀಡಿದ್ದಾರೆ.
