ಸಭೆಯ ದಿಕ್ಕು ತಪ್ಪಿಸಲು ಪ್ರಯತ್ನಿಸಿದ ಅಧಿಕಾರಿಗಳಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ : ಸಭೆಯ ಅಧ್ಯಕ್ಷರು
ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷ ಬಸವರಾಜ ಮಲಿ ಹಾಗೂ ಬಿಜೆಪಿ ಶಾಸಕ ಡಾ. ಅವಿನಾಶ ಜಾಧವ ಅವರ ಜಂಟಿ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಜರುಗಿತು
ಸಭೆಯ ದಿಕ್ಕು ತಪ್ಪಿಸಲು ಪ್ರಯತ್ನಿಸಿದ ಅಧಿಕಾರಿಗಳಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ : ಸಭೆಯ ಅಧ್ಯಕ್ಷರು
ಜಲಜೀವನ ಮಿಷನ್ ಯೊಜನೆಯ ಕಳೆಪೆ ಕಾಮಗಾರಿ, ಬೋಗಸ್ ಬಿಲ್ ಸೃಷ್ಟಿ: ಆರೋಪ, ಲೋಕಾಯುಕ್ತರಿಗೆ ದೂರು ಸಲ್ಲಿಕೆಗೆ ಬಸವರಾಜ ಮಲಿ ತೀರ್ಮಾನ
ಚಿಂಚೋಳಿ :ಇಲ್ಲಿನ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಕಾಂಗ್ರೆಸ್ ಸರಕಾರದ ಪಂಚಗ್ಯಾರೆಂಟಿ ಯೋಜನೆಗಳ ಅಧ್ಯಕ್ಷ ಬಸವರಾಜ ಮಲಿ ಹಾಗೂ ಕ್ಷೇತ್ರದ ಬಿಜೆಪಿ ಶಾಸಕ ಡಾ. ಅವಿನಾಶ ಜಾಧವ್ ಅವರ ಜಂಟಿ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಜರುಗಿತು.
ಸಭೆಯಲ್ಲಿ ಕೃಷಿ , ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಅಕ್ಷರ ದಾಸೋಹ, ಜಲಜೀವನ ಮಿಷನ್, ಪಿ.ಆರ್.ಇ, ತೋಟಗಾರಿಕೆ, ಸಣ್ಣ ನಿರವಾರಿ ಇಲಾಖೆ, ಲೋಕೋಪಯೋಗಿ ಹಾಗೂ ಪ್ರವಾಸೋದ್ಯಮ ಇಲಾಖೆ, ಚಂದ್ರಂಪಳ್ಳಿ ಇಲಾಖೆ, ಲ್ಯಾಂಡ್ ಆರ್ಮಿ ಕಾಮಗಾರಿಗಳ ಮತ್ತು ಪಿಎಂವೈ ಹಾಗೂ ಪ್ರಗತಿ ಪಂಥ ಯೋಜನೆಗಳ ಬಗ್ಗೆ ಜಂಟಿಯಾಗಿ ಪ್ರಗತಿ ಪರಿಶೀಲನೆ ನಡೆಸಿದರು.
ತಾಲೂಕಿನಲ್ಲಿ ಜಲಜೀವನ ಮಿಷನ ಯೋಜನೆ ಕಳೆದ 7 ವರ್ಷಗಳಿಂದ ಅನುಷ್ಠಾನದಲ್ಲಿದೆ. ಜಲಜೀವನ ಮಿಷನ್ ಯೋಜನೆಯ ಕಾಮಾಗಾರಿಗಳಿಗೆ 108 ಕೋಟಿ ರು ಖರ್ಚು ಮಾಡಲಾಗಿದೆ. ಆದರೂ ಯೋಜನೆಯ ಉದ್ದೇಸ ಜನರಿಗೆ ತಲುಪಿಲ್ಲ. ಈ ಯೋಜನೆಯ ಕಾಮಗಾರಿಗಳು ಸಂಪೂರ್ಣ ಕಳಪೆ ಮತ್ತು ಬೊಗಸ್ ಆಗಿದ್ದು, ಸಭೆಗೆ ನೀಡಿದ ಸಂಪೂರ್ಣ ದಾಖಲೆಗಳೊಂದಿಗೆ ಇದರ ವಿರುದ್ಧ ತನಿಖೆ ಕೈಗೊಳಲು ಲೋಕಾಯುಕ್ತರಿಗೆ ಒಪ್ಪಿಸಲಾಗುವುದು ಎಂದು ಗ್ಯಾರೆಂಟಿ ಅಧ್ಯಕ್ಷ ಬಸವರಾಜ ಮಲಿ ಸಭೆಯ ಗಮನಕ್ಕೆ ತಂದರು. ಇದಕ್ಕೆ ಶಾಸಕ ಡಾ. ಅವಿನಾಶ ಜಾಧವ ಅವರು ಕೂಡ ಧ್ವನಿ ಗೂಡಿಸಿ ಲೋಕಾಯುಕ್ತರಿಗೆ ಒಪ್ಪಿಸಲು ಸಮಹತವಿದೆ ಎಂದು ಒಪ್ಪಿಗೆ ಸೂಚಿಸಿ, ಇಇ ಉಮೇಶ ರಾಠೋಡ ಮತ್ತು ಯುವರಾಜ ರಾಟೋಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಜರುಗಿತು.
ಕೆಕೆಆರ್.ಡಿಬಿ ಅನುದಾನ ಬೇರೊಂದು ತಾಲೂಕಿಗೆ ವರ್ಗಾವಣೆ :
ತಾಲೂಕಿಗೆ ಬಂದ ಕೆಕೆಆರ್.ಡಿಬಿ ಯೋಜನೆಯ ಅನುದಾನದಡಿ ನಡೆಸುತ್ತಿದ್ದ ಲ್ಯಾಂಡ್ ಆರ್ಮಿ ಕಾಮಗಾರಿಗಳ 205 ಕೋಟಿ ರು. ಬಂದ ಅನುದಾನವನ್ನು ಬೇರೊಂದು ತಾಲೂಕಿಗೆ ವರ್ಗಾವಣೆಗೊಂಡಿದ್ದು, ಶಾಸಕ ಡಾ. ಅವಿನಾಶ ಜಾಧವ್ ಅವರು ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿದರ ಹಿನ್ನಲೆಯಲ್ಲಿ ಅದರ ವಿರುದ್ಧ ಎಸ್.ಐ.ಟಿ ತನಿಖಾ ಸಂಸ್ಥೆಯ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದ್ದು, ಅನುದಾನ ಮರಳಿ ಸೆರಲಿದೆ ಮತ್ತು ಬಳಕೆ ಮಾಡಿಕೊಂಡ ಅನುದಾನದ ಅಕ್ರಮ ಕಾಮಗಾರಿಗಳ ನಡೆಸಿ ಅಧಿಕಾರಿಗಳಿಂದ ವಸೂಲಿ ಆಗಲಿದೆ ಎಂದು ಲ್ಯಾಂಡ್ ಆರ್ಮಿ ಅಧಿಕಾರಿಗಳು ತಿಳಿಸಿದರು.
· ಸಭಗೆ ಅಧಿಕಾರಿಗಳಿಂದ ತಪ್ಪು ಮಾಹಿತಿ, ತರಾಟೆ :
ತಾಲೂಕಿನ ಪ್ರಗತಿ ಪರಿಶೀಲನೆ ಸಭೆಗೆ ಇಲಾಖಾ ವರದಿಯೊಂದಿಗೆ ಬಂದ ಅಧಿಕಾರಿಗಳು ಸಭೆಗೆ ಪ್ರಗತಿ ವರದಿ ಸರಿಯಾಗಿ ಸಲ್ಲಿಸದೆ ಶಾಸಕರ ಡಾ. ಅವಿನಾಶ ಜಾಧವ್ ಅವರ ಕಣ್ಣಿಗೆ ಧೂಳು ಚೆಲ್ಲುವ ರೀತಿಯಲ್ಲಿ ಅಧಿಕಾರಿಗಳು ನಡೆದುಕೊಂಡಿರುವುದನ್ನು ಕಂಡು ಗ್ಯಾರೆಂಟಿ ಅನುಷ್ಠಾನದ ಅಧ್ಯಕ್ಷ ಬಸವರಾಜ ಮಲಿ ಸಭೆಯ ದಾರಿ ತಪ್ಪಿಸಿದ ಅಧಿಕಾರಿಗಳಿಗೆ ಶಾಸಕ ಸಮ್ಮುಖದಲ್ಲಿ ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿರುವುದು ನಡೆಯಿತು.
· ಪ್ರಗತಿ ಪರಿಶೀಲನೆ ಆಗದ ಇಲಾಖೆಗಳು :
ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಕಾರ್ಮಿಕ ಇಲಾಖೆ, ಕಂದಾಯ, ಆರ್.ಡಿ.ಪಿ.ಆರ್, ಅಬಕಾರಿ, ಸಬ್ ರೇಜಿಸ್ಟರ್, ಪುರಸಭೆ, ಬಿಸಿಎಂ. ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಮೀನುಗಾರಿಕೆ, ಪಶು ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಎರಡು ದಿನಗಳಲ್ಲಿ ದಿನಾಂಕ ನಗದಿಪಡಿಸಿ ನಡೆಸಲಾಗುತ್ತದೆ ಎಂದು ಶಾಸಕರು ಸಭೆ ಮುಂದೂಡಿದರು.
ಸಭೆಯಲ್ಲಿ ತಾ.ಪಂ. ಆಡಳಿತಾಧಿಕಾರಿ ಸಮತ್ ಪಟೇಲ್, ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಚವ್ಹಾಣ, ತಹಸೀಲ್ದಾರ ಸುಬ್ಬಣ್ಣ ಜಮಖಂಡಿ, ಡಿವೈಎಸ್ಪಿ ಸಂಗಮನಾಥ ಹಿರೆಮಠ ಸೇರಿದಂತೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದರು.
