ಪತ್ರಿಕಾ ದಿನಾಚರಣೆಯಲ್ಲಿ ಚಿಂಚೋಳಿಯ ಜಗನ್ನಾಥ ಶೇರಿಕಾರಗೆ ಸಿ.ಎಮ್. ಗೌರವ
ಪತ್ರಿಕಾ ದಿನಾಚರಣೆಯಲ್ಲಿ ಚಿಂಚೋಳಿಯ ಜಗನ್ನಾಥ ಶೇರಿಕಾರ ಭಾಗವಹಿಸಿ ಗೌರವ
ಪತ್ರಕರ್ತರಿಗೆ ಆರೋಗ್ಯ ಮತ್ತು ಬಸ್ ಪಾಸ್ ಸೌಲಭ್ಯಗಳಿಗೆ ಸಿಎಂ ಚಾಲನೆ
ಬೆಂಗಳೂರು, ಜು.1: ಇಂದಿಲ್ಲಿ ನಡೆದ ರಾಜ್ಯಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಾದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಹಾಗೂ 5 ಲಕ್ಷ ರೂ. ವರೆಗೆ ನಗದುರಹಿತ ಆರೋಗ್ಯ ಸೇವೆ ನೀಡುವ *ಮಾಧ್ಯಮ ಸಂಜೀವಿನಿ* ಯೋಜನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದರು.
ಈ ಕಾರ್ಯಕ್ರಮವು ಬೆಂಗಳೂರಿನ ವಾರ್ತಾ ಸೌಧದಲ್ಲಿ ನೆರವೇರಿದ್ದು, ಇದರಲ್ಲಿ ರಾಜ್ಯದ ಹಲವಾರು ಪ್ರಭಾವಿ ಪತ್ರಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಮತ್ತು ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನುಮ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಚಿಂಚೋಳಿ ತಾಲೂಕಿನ ಖ್ಯಾತ ಪತ್ರಕರ್ತರಾದ ಜಗನ್ನಾಥ ಶೇರಿಕಾರ* ಅವರು ರಾಜ್ಯ ಸರ್ಕಾರದ ಪತ್ರಕರ್ತರ ಬಸ್ ಪಾಸ್ ಪಡೆದು ಭಾಗವಹಿಸಿದ್ದು, ಚಿಂಚೋಳಿ ತಾಲೂಕಿಗೆ ಹೆಮ್ಮೆ ತಂದಿದ್ದಾರೆ. ಈ ಸಂದರ್ಭದ ಸ್ಮರಣಾರ್ಥವಾಗಿ ಅವರಿಗೆ ವಿಶೇಷ ಗೌರವವೂ ಸಲ್ಲಿಸಲಾಯಿತು.