ಗಣೇಶ ಉತ್ಸವ ಹಾಗೂ ಈದ್ ಮಿಲದ್ ಉನ್ ನಬೀ ಹಬ್ಬದ ಹಿನ್ನೆಲೆಯಲ್ಲಿ ರೂಟ್ ಮಾರ್ಚ್

ಗಣೇಶ ಉತ್ಸವ ಹಾಗೂ ಈದ್ ಮಿಲದ್ ಉನ್ ನಬೀ ಹಬ್ಬದ ಹಿನ್ನೆಲೆಯಲ್ಲಿ ರೂಟ್ ಮಾರ್ಚ್

ಗಣೇಶ ಉತ್ಸವ ಹಾಗೂ ಈದ್ ಮಿಲದ್ ಉನ್ ನಬೀ ಹಬ್ಬದ ಹಿನ್ನೆಲೆಯಲ್ಲಿ ರೂಟ್ ಮಾರ್ಚ್

ಕಲಬುರಗಿ : ಗಣೇಶ ಉತ್ಸವ ಹಾಗೂ ಈದ್ ಮಿಲದ್ ಉನ್ ನಬೀ ಹಬ್ಬದ ಹಿನ್ನೆಲೆಯಲ್ಲಿ ನಗರದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಯಾದ ಸ್ಥಳದಿಂದ ಕಲಬುರಗಿ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್ ಡಿ ಅವರು ಎಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರೊAದಿಗೆ ನಗರದ ಪ್ರಮುಖ ರಸ್ತೆಗಳಾದ ಹುಮನಾಬಾದ ಬೆಸ್, ಮುಸ್ಲೀ ಚೌಕ್, ಹಪ್ತ ಗುಮಾಜ್, ಸಂತ್ರಸ್ ವಾಡಿ, ಸೇರಿದಂತೆ ಮುಖ್ಯ ರಸ್ತೆಗಳ ಮೂಲಕ ಜಗತ್ ವೃತ್ತದ ವರಗೆ ಪೊಲೀಸ್ ರೂಟ್ ಮಾರ್ಚ್ ನಡೆಸಿದರು. ಈ ಸಂದರ್ಭದಲ್ಲಿ ಎಸ್.ಪಿ ಮತ್ತು ಪ್ರಿನ್ಸಿಪಾಲ್ ಪೊಲೀಸ್ ತರಬೇತಿ ಕಾಲೇಜು ಕಲಬುರಗಿಯ ಕಿಶೋರ ಬಾಬು, ಡಿಸಿಪಿ ಕನಿಕಾ ಸಿಕ್ರಿವಾಲ, ಸೇರಿದಂತೆ ಕಲಬುರಗಿ ನಗರ ವ್ಯಾಪಿಯ ಡಿವೈಎಸ್ಪಿ, ವಿವಿಧ ಠಾಣೆಯ ಸಿಪಿಐ ಸೇರಿದಂತೆ ಅಧಿಕಾರಿಗಳು ಇದ್ದರು.