ಕಲಬುರಗಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ, ಆಚರಣೆ

ಕಲಬುರಗಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ, ಆಚರಣೆ

ಕಲಬುರಗಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ, ಆಚರಣೆ

ಕಲಬುರಗಿ: ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಉತ್ಸವವನ್ನು ಕಲಬುರಗಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

    ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಭಾನುವಾರ ಬೆಳಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಿಗಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು. ನಂತರ ಸೆಪ್ಟೆಂಬರ್ 16ರಂದು ಕಲಬುರ ಗಿಯಲ್ಲಿ ಅದ್ದೂರಿಯಾಗಿ ಡಾ. ಎಸ್ ಎಂ ಪಂಡಿತ್ ರಂಗಮಂದಿರದಲ್ಲಿ ಆಚರಿಸಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. 

   ಕಲಬುರಗಿ ಜಿಲ್ಲಾ ನಾರಾಯಣ ಗುರು ಜಯಂತಿಯ ಜಿಲ್ಲಾಧ್ಯಕ್ಷರಾದ ಡಾ. ವಿನಯ್ ಬಿ ಗುತ್ತೇದಾರ್ ಗಾರಂಪಳ್ಳಿ ಆಮಂತ್ರಣ ಪತ್ರಿಕೆಯನ್ನು ನೀಡಿ ಉತ್ಸವದ ಯಶಸ್ಸಿಗೆ ಜಿಲ್ಲಾ ಆಡಳಿತದಿಂದ ಸಂಪೂರ್ಣವಾಗಿ ಸಹಕರಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಾಜೇಶ್ ಜಗದೇವ ಗುತ್ತೇದಾರ್, ಉತ್ಸವ ಸಮಿತಿಯ ಮುಖ್ಯ ಸಲಹೆಗಾರರಾದ ವೆಂಕಟೇಶ್ ಎಂ ಕಡೇಚೂರ್, ಸಾಹಿತಿಗಳಾದ ಡಾ. ಚಿ.ಸಿ ನಿಂಗಣ್ಣ, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ಜಗದೀಶ್ವರಿ ನಾಶಿ, ಶಿಷ್ಟಾಚಾರ ತಹಶೀಲ್ದಾರ್ ಉಮಾಕಾಂತ ಹಳ್ಳೆ, ಚುನಾವಣಾ ತಹಶೀಲ್ದಾರ್ ಪಂಪಯ್ಯ, ಡಿಯು ಡಿಯುಡಿಸಿ ತಹಶೀಲ್ದಾರ್ ಶ್ರೀಮತಿ ವಿಟ್ಠು ಬಾಯಿ, ಹೋಟೆಲ್ ಎಸೋಸಿಯೇಷನ್ ಜಿಲ್ಲಾಧ್ಯಕ್ಷರಾದ ನರಸಿಂಹ ಮೆಂಡನ್, ಬಿಲ್ಲವ ಸಮುದಾಯದ ಸಂತೋಷ್ ಪೂಜಾರಿ,ಈಡಿಗ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಕುಕ್ಕುಂದ, ಮಹೇಶ ಹೊಳಕುಂದ, ಹನುಮಯ್ಯ ಆಲೂರು, ಸಾಗರ್ ಹರಸೂರು, ಆನಂದ ಬಳೂರ್ಗಿ, ಬಸಯ್ಯ ಗುತ್ತೇದಾರ್ ಜೀವಣಗಿ, ಜಗದೇವಿ ಗುತ್ತೇದಾರ್ ಕಲ್ ಬೇನೂರ, ವಿನಯ್ ದತ್ತು ಗುತ್ತೇದಾರ್, ರಮೇಶ್, ರಾಹುಲ್ ಚಿಟಗುಪ್ಪ ,ವಿಜಯ್ ಕವಲದಾರ್, ಅಚ್ಚುತ ಹಡಗಿಲ್ ಶಿವು ಕುಮಾರ್ ಇಟಗಿ, ಸುಜಿತ್ ಸಿರನೂರ್ ಮತ್ತಿತರು ಉಪಸ್ಥಿತರಿದ್ದರು.