ಸಂವಿಧಾನ ಶಿಲ್ಪಿಗೆ ವರ್ಣಿಸಿದ : ಖಂಡ್ರೆ, ಜಾದವ್, ಶಿಂಧೆ

ಸಂವಿಧಾನ ಶಿಲ್ಪಿಗೆ ವರ್ಣಿಸಿದ :  ಖಂಡ್ರೆ, ಜಾದವ್, ಶಿಂಧೆ

ಡಾ. ಬಾಬಾ ಸಾಹೇಬರು ಬರೆದ ಸಂವಿಧಾನದ ಶಕ್ತಿ ಎಲ್ಲರೂ ಅರಿಯಬೇಕು : ಸಂಸದ ಸಾಗರ ಖಂಡ್ರೆ

ಅಂಬೇಡ್ಕರ್ ಅವರೇ ನಮ್ಮ ದೇವರು : ಶಾಸಕ ಡಾ. ಜಾಧವ್

ಜೈ ಭೀಮ ನಾರಾ ಮೊಳಗಿಸಿದರೇ ದಿಲ್ಲಿ ನಡುಗುತ್ತದೆ : ದಿವ್ಯ ಶಿಂಧೆ

ಚಿಂಚೋಳಿ :ಕಿತ್ತು ತಿನ್ನುವ ಬಡತನದ ಕಷ್ಟದಲ್ಲಿ ಶಿಕ್ಷಣ ಪಡೆದು ಕೆಳಮಟ್ಟದ ಶೋಷಿತ ಜನಾಂಗದ ಎಲ್ಲಾ ಸಮುದಾಯಗಳಿಗೆ ಸಂವಿಧಾನದ ಮೂಲಕ ನ್ಯಾಯ ಮತ್ತು ಶಕ್ತಿ ಕೊಡಿಸಿರುವ ಮಹಾನ ನಾಯಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಆಗಿದ್ದಾರೆ ಎಂದು ಬೀದರ ಸಂಸದ ಸಾಗರ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ 134ನೇ ಅಂಬೇಡ್ಕರ್ ಜಯಂತ್ಯೋತ್ಸವ ಸಮತಿ ಹಮ್ಮಿಕೊಂಡಿದ್ದ ಜಂಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚಿಕ್ಕ ವಯಸ್ಸಿನಲ್ಲಿ ಸಂಸದನಾಗಿ ಆಯ್ಕೆಗೊಂಡು ಸಂಸತ್ ಪ್ರವೇಶ ಪಡೆಯಬೇಕಾದರೆ, ಅಂಬೇಡ್ಕರ್ ನೀಡಿರುವ ಸಂವಿಧಾನವೇ ಮೂಲ ಕಾರಣವಾಗಿದೆ. ಬಾಬಾ ಸಾಹೇಬರು ಬರೆದ ಸಂವಿಧಾನದ ಕಾನೂನು ಅರಿತುಕೊಂಡು ತುಳಿತಕ್ಕೆ ಒಳಗಾದ ಕೆಳಮಟ್ಟದ ಸಮುದಾಯಗಳನ್ನು ಮೇಲೇತ್ತುವ ಕೆಲಸ ಆಗಬೇಕಾಗಿದೆ. ಪ್ರತಿಯೊಬ್ಬರು ಶಿಕ್ಷಣಕ್ಕೆ ಮಹತ್ವ ನೀಡಬೇಕೆಂದರು.

ಶಾಸಕ ಡಾ. ಅವಿನಾಶ ಜಾಧವ್ ಅವರು ಮಾತನಾಡಿ, ನಾವು ದೇವರನ್ನು ಕಂಡಿಲ್ಲ. ಡಾ. ಬಾಬಾ ಸಾಹೇಬ್ ಅಂಬೇಡ್ಕರೇ ನಮ್ಮ ದೇವರು ಎಂದರು.

ಪುಣೆ ಮಹಾರಾಷ್ಟ್ರದ ದಿವ್ಯಾ ಶಿಂಧೆ ಮಾತನಾಡಿ, ಜೈ ವಿಶ್ವದಲ್ಲಿಯೇ ಬಲಿಷ್ಠ ನಾಯಕ ಅಂಬೇಡ್ಕರ್ ಆಗಿದ್ದಾರೆ. ದೇಶದ ಜನ ಸಾವಿರ ವರ್ಷಗಳ ಹಿಂದೆ ಕತ್ತಲಲ್ಲಿ ಬದುಕುತಿದ್ದ ಜನಾಂಗಕ್ಕೆ ಬೆಳಕಿಗೆ ತಂದು ಬದುಕಿಗೆ ಬೆಳಕು ಪಸರಿಸಿ, ಉಸಿರಾಡಲು ಶಕ್ತಿ ಕೊಟ್ಟಿದ್ದು ಡಾ.ಅಂಬೇಡ್ಕರ್ ಅವರು. ಬುದ್ಧ ಮತ್ತು ಅಂಬೇಡ್ಕರ್ ಅವರ ಮೂರ್ತಿಗಳನ್ನು ನೋಡಿ ಕಣ್ಣು ತುಂಬಿಕೊಂಡರೆ ಸಾಕು ಸ್ವರ್ಗಸಿಗುತ್ತದೆ. ಉಸಿರು ನಿಲ್ಲುವ ತನಕ ಬಾಬಾ ಸಾಹೇಬರ ಪ್ರಚಾರ ನಡೆಯುತ್ತಲೇ ಇರಬೇಕು. ಜೈ ಭೀಮ್ ಘೋಷಣೆ ಮೊಳಗಿದರೇ ದಿಲ್ಲಿ ನಡುಗುತ್ತದೆ ಎಂದರು.

ಪುರಸಭೆ ಅಧ್ಯಕ್ಷ ಆನಂದ ಟೈಗರ್, ಸಂಜೀವನ ಯಾಕಾಪೂರ, ವೀಠಲ್ ವಗ್ಗನ್ ಅವರು ಮಾತನಾಡಿದರು. ದಿವ್ಯ ಸಾನ್ನಿಧ್ಯವನ್ನು ಅಣದೂರಿನ ಜ್ಞಾನ ಸಾಗರ ಬಂತೆ , ಅಧ್ಯಕ್ಷತೆ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಹೋಡೆಬೀರನಳ್ಳಿ ಅವರು ವಹಿಸಿದರು.  

ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ, ಗೋಪಾಲರಾವ ಕಟ್ಟಿಮನಿ, ಗೌತಮ ಬೊಮ್ಮನಳ್ಳಿ, ಮಾರುತಿ ಗಂಜಗಿರಿ, ಅಮರ ಲೋಡನೂರ, ಕೆ.ಮಹೇಶ, ರಾಜಶೇಖರ ಹೊಸಮನಿ, ರಾಹುಲ್ ಯಾಕಾಪೂರ, ಅಂಬರೀಶ ರಾಯಕೋಡ, ಅಶೋಕ ಹೂವಿನಭಾವಿ, ಅಜೀತ ಪಾಟೀಲ, ಅಬ್ದುಲ್ ಬಾಷಿದ್, ಜಗನ್ನಾಥ ಕಟ್ಟಿ, ಕಾಶಿನಾಥ ಧನ್ನಿ, ವೈಜಿನಾಥ ಮಿತ್ರ ಸೇರಿದಂತೆ ಸಮಾಜದ ಹಿರಿಯರು ಉಪಸ್ಥಿತರಿದರು.