ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆ :..

ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆ :..
ಶಹಾಬಾದ : -ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಶಿಕ್ಷಕರ ಘಟಕದ ವತಿಯಿಂದ ಪ್ರದಾನ ಮಾಡಲಾಗುವ ಮಾಜಿ ಪ್ರಧಾನಿ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಎಸ ಜಿ ವರ್ಮಾ ಶಾಲೆಯ ಶ್ರೀಮತಿ ಸರಸ್ವತಿ ಶಿವಪುತ್ರ ಕರಣಿಕ ರವರು ಆಯ್ಕೆ ಯಾಗಿದ್ದಾರೆ.
ಸೆ.5 ರಂದು ಶುಕ್ರವಾರ ಬೆಳಗ್ಗೆ 10.00 ಗಂಟೆಗೆ ಭಾರತ ಜೋಡೋ ಭವನ" ಕ್ವೀನ್ಸ್ ರಸ್ತೆ ಬೆಂಗಳೂರು ಇಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಹರ್ಷ ವ್ಯಕ್ತ : ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಶ್ರೀಮತಿ ಕರಣಿಕ ರವರಿಗೆ ಕದಸಂಸ ರಾಜ್ಯ ಸಂ.ಸಂಚಾಲಕ ಸುರೇಶ ಮೆಂಗನ, ಕಾಂಗ್ರೇಸ್ ಪಕ್ಷದ ಎಸ್ಸಿ ಘಟಕದ ಅಧ್ಯಕ್ಷ ರಾಜೇಶ ಯನಗುಂಟಿಕರ, ಶರಣು ಪಗಲಾಪುರ, ಸುಭಾಷ ಸಾಕ್ರೆ, ಹಿರಗಪ್ಪ ಹಿರೇಮನಿ ಹರ್ಷ ವ್ಯಕ್ತ ಪಡಿಸಿ, ಅಭಿನಂದಿಸಿದ್ದಾರೆ.
ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ