ಲಂಕೇಶರ ಒಳ್ಳೆಯ ಕೃತಿ ಗೌರಿ- ವಿಶ್ವರಾಧ್ಯ ಸತ್ಯಂಪೇಟೆ
ಸರ್ಕಾರಿ ಕಾಲೇಜ ಜೇವರ್ಗಿಯಲ್ಲಿ: ಚಕೋರ
ಲಂಕೇಶರ ಒಳ್ಳೆಯ ಕೃತಿ ಗೌರಿ- ವಿಶ್ವರಾಧ್ಯ ಸತ್ಯಂಪೇಟೆ
ಕಲಬುರಗಿ: ಒಂದು ಸರ್ಕಾರ ಉಳಿಸುವ ಮತ್ತು ಉರುಳಿಸುವ ಕೆಲಸ ಲಂಕೇಶ್ ಪತ್ರಿಕೆ ಮಾಡುವ ಗಟ್ಟಿತನ, ಬದ್ಧತೆ ಲಂಕೇಶ್ ಅವರಿಗಿತ್ತು; ಅವರ ಒಳ್ಳೆಯ ಕೃತಿ ಗೌರಿ ಕೆಟ್ಟ ಕೃತಿ ಇಂದ್ರಜಿತ್ ಎಂದ ಪ್ರಖರ ವೈಚಾರಿಕ ಶರಣ ಚಿಂತಕ ವಿಶ್ವರಾಧ್ಯ ಸತ್ಯಂಪೇಟೆ ಅಭಿಮತ ಪಟ್ಟರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ವೇದಿಕೆ ಮತ್ತು ಕನ್ನಡ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಜೇವರ್ಗಿ ಸಂಯುಕ್ತ ಆಶ್ರಯದಲ್ಲಿ ಜರುಗಿದ ಪಿ.ಲಂಕೇಶ್ ಅವರ ಸಾಹಿತ್ಯ- ವಿಶೇಷ ಉಪನ್ಯಾಸ ನೀಎಇ ಮಾತನಾಡಿ ತಮ್ಮ ತಮ್ಮ ತಂದೆ ಲಿಂಗಣ್ಣ ಮತ್ತು ಲಂಕೇಶ್ ಅವರ ಒಡನಾಡ, ಸಂದರ್ಭಗಳನ್ನು ಹೇಳುತ್ತಾ ಅವಿ ಬದುಕು- ಬರಹ ಅವಲೋಕನ ಮಾಡಿದರು.ಅವರ ಕುಟುಂಬ ಮಾನವೀಯತೆ ಚಿಂತನೆ,ಬಹರಗಳ್ಲಿ ಕಾಣುತ್ತೇವೆ. ಅವರೊಬ್ಬ ಶರಣಜೀವಿ ಎಂದರು.
ಆಶಯ ನುಡಿ ಆಡಿದ ಹಿರಿಯ ಸಾಹಿತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿದ್ಧರಾಮ ಹೊನ್ಕಲ್ ಅವರು ವಿದ್ಯಾರ್ಥಿಗಳು ಸಾಹಿತ್ಯ ಅಧ್ಯಯನಕ್ಕೆ ತೊಡಗ ಬೇಕು,ಹೊಸ ಮನ್ವಂತರ ಯುಗ ಸೃಷ್ಟಿಸಿದ ಲಂಕೇಶ್ ಬಹುಮುಖ ವ್ಯಕ್ತಿತ್ವದ ಮೇರು ಸಾಹಿತಿ ಎಂದರು
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಂತಾ ಬಿ.ಅಸ್ಟಿಗಿಯವರು ಲಂಕೇಶ್ ಅವರ ಸಾಹಿತ್ಯ ಹಲವು ವೈಚಾರಿಕ ಚಿಂತಕರ ಪ್ರೇರಣೆಗೆ ಕಾರಣರಾದರೆ; ಪತ್ರಿಕೆಯ ಮೂಲಕ ಸಾರಾ,ಬಾನು,ಲಲಿತಾನಾಕ,ವೈದೇಹಿ, ಚಂಪಾ,ಮೊದಲಾದ ಲೇಖಕರ ಮುಖ್ಯವಾಹಿನಿಗೆ ತಂದ ಸಾಂಸ್ಕೃತಿಕ ನಾಯಕರೆಂದರು.
ಚಕೋರ ವೇದಿಕೆ ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ ಲಂಕೇಶ್ ಅವರ ಬದ್ಧತೆ,ಕಾವ್ಯ,ನಾಟಕ,ಕಥೆ, ಅನುವಾದ,ಬರಹಗಳ ಮತ್ತು ಪತ್ರಿಕೆಯ ಮೂಲಕ ಮಾಡಿದ ಸಾಧನೆ ಅವರ ಪ್ರತಿಭೆ ವಿದ್ಯಾರ್ಥಿಗಳಿಗೆ ಪರಿಚಯಿಸುವ ಕೆಲಸ ಇದಾಗಿದೆ ಎಂದರು.
ಕನ್ನಡ ವಿಭಾಗ ಮುಖ್ಯಸ್ಥ ಡಾ.ಖಾಜಾವಲಿ ಸ್ವಾಗತಿಸಿ ದರು. ಪ್ರಾಧ್ಯಾಪಕ ಭೀಮಣ್ಣ. ಎನ್.ಬೆಡಕಪಳ್ಳಿ ನಿರೂಪಿಸಿದರು ಪ್ರಾಧ್ಯಾಪಕಿ ಭಾಗ್ಯಶ್ರೀ ನರಗುಂದ ವಂದಿಸಿದರು.ಡಾ.ಶರಣಪ್ಪ ಗುಂಡಗುರ್ತಿ,ಕುಪೇಂದ್ರ ರಾಠೋಡ,ಡಾ.ಮಲ್ಲಿಕಾರ್ಜುನ ಹೂಗಾರ, ಖುತೇಜಾ ನಸ್ರೀನ್,ಶಿಲ್ಪ ಜಗದೀಶ,ರೂಪಾ ಕುಲಕರ್ಣಿ, ರವೀಂದ್ರ, ಹೊನ್ನುರು ಸ್ವಾಮಿ, ವಿಕಾಸ,ಮೋಹನ ಬೈಲಪುತ್ರ, ಸಂದೀಪ ತಿವಾರಿ,ನಾಗಣ್ಣಗೌಡ,ಗುಂಡಪ್ಪ, ಮಹಾಂತೇಶ ಹಾಗೂ ವಿದ್ಯಾರ್ಥಿಗಳ ಪಾಲ್ಗೊಂಡಿದ್ದರು.
ವರದಿ ಡಾ .ಅವಿನಾಶ.S.ದೇವನೂರ
