ನಿರ್ಗತಿಕರ ತಂಗುದಾಣದ ಅನುದಾನವನ್ನು ಮಂಜೂರು ಮಾಡಬೇಕು ಮತ್ತು ತಂಗುದಾಣವನ್ನು ಸ್ಥಗಿತಗೊಳಿಸಲು ಅನುಮತಿ ನೀಡಬೆಕೇಂದು ಸಿಎಂಗೆ ಮನವಿ

ನಿರ್ಗತಿಕರ ತಂಗುದಾಣದ ಅನುದಾನವನ್ನು ಮಂಜೂರು ಮಾಡಬೇಕು ಮತ್ತು ತಂಗುದಾಣವನ್ನು ಸ್ಥಗಿತಗೊಳಿಸಲು ಅನುಮತಿ ನೀಡಬೆಕೇಂದು ಸಿಎಂಗೆ ಮನವಿ
ಕಲಬುರಗಿ: ನಗರ ಹಗಲು ಮತ್ತು ರಾತ್ರಿ ವಸತಿ ರಹಿತ ನಿರ್ಗತಿಕರ ತಂಗುದಾಣದ ಅನುದಾನವನ್ನು ಮಂಜೂರು ಮಾಡಬೇಕು ಮತ್ತು ತಂಗುದಾಣವನ್ನು ಸ್ಥಗಿತಗೊಳಿಸಲು ಅನುಮತಿ ನೀಡಬೆಕೇಂದು ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕರಾದ ಆನಂದರಾಜ ಅವರು ಮನವಿ ಸಲ್ಲಿಸಿದರು.
ಮಾರ್ಗದರ್ಶಿ ಸಂಸ್ಥೆಯು ತಮ್ಮ ಇಲಾಖೆಯಿಂದ ಡೇ ನಮ್ಮ ಯೋಜನಡಿಯಲ್ಲಿ ನಗರ ಹಗಲು ಮತ್ತು ರಾತ್ರಿ ವಸತಿ ರಹಿತ ನಿರ್ಗತಿಕರ ತಂಗುದಾಣನ್ನು ಕಲಬುರಗಿ ನಗರದ ಗಂಜ್ ಏರಿಯಾದಲ್ಲಿ ನಡೆಸಲಾಗುತ್ತಿದೆ. ಸದರಿ ತಂಗುದಾಣದ ನಿರ್ವಹಣೆ ಅನುದಾನವನ್ನು ದಿನಾಂಕ 16-03-2023 ರಿಂದ ಇಲ್ಲಿಯವರೆಗೆ ಅನುದಾನ ಬಿಡಯಗಡೆ ಮಾಡಿರುವುದಿಲ್ಲ, ಆದುದರಿಂದ ತಂಗುದಾಣವನ್ನು ನಡೆಸಲು ಸಂಸ್ಥೆಗೆ ಕಷ್ಟವಾಗುತ್ತಿದೆ. ಅಧಿಕಾರಿಗಳಿಗೆ ಬಹಳಷ್ಟು ಸಲ ಗಮನಕ್ಕೆ ತಂದಿದ್ದೇವೆ, ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ ಆದರೂ ಇಷ್ಟು ನಿರ್ಲಲಕ್ಷ ಮನೋಬಾವನೆ ತೋರುವುದು ನಮಗೆ ಬೇಸರದ ಸಂಗತಿ. ತಮ್ಮ ನಾಯಕತ್ವದಲ್ಲಿ ನಂಬಿಕೆ ಇದೆ.
ಈ ದೆಸೆಯಲ್ಲಿ ಸಂಸ್ಥೆಯು ಸಾಲದಲ್ಲಿ ಇರುವುದರಿಂದ ಸಂಸ್ಥೆಯ ಅಭಿವೃದ್ಧಿಗೆ ಕುಂಠಿತವಾಗುತ್ತದೆ. ಪ್ರತಿ ತಿಂಗಳು ತಂಗುದಾಣದ ಕಟ್ಟಡ ಬಾಡಿಗೆ, ವಿಧ್ಯತ್ ಬಿಲ್ಲೆ ಸಿಬ್ಬಂದಿಗಳ ಸಂಬಳ ಮತ್ತು ಇತರೆ ಖರ್ಚು ವೆಚ್ಚಗಳು ಭರಿಸುವುದು ಸಂಸ್ಥೆಗೆ ಹೊಣೆಯಾಗುತ್ತಿದೆ. ಆದುದರಿಂದ ದಯಾಳುಗಳಾದ ತಾವುಗಳು ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡಿ ನಗರ ಹಗಲು ರಾತ್ರಿ ವಸತಿ ರಹಿತ ನಿರ್ಗತಿಕರ ತಂಗುದಾಣದವನ್ನು ಮಾರ್ಗದರ್ಶಿ ಸಂಸ್ಥೆಗೆ ಮುಚ್ಚಲು/ಸ್ಥಗಿತಗೊಳಿಸಲು ಅದೇಶ ನೀಡಬೇಕು ಮತ್ತು ಮಹಾನಗರ ಪಾಲಿಕೆಯಿಂದ ತಂಗುದಾಣದ ನಿರಾಶ್ರಿತರಣೆ ವದಗಿಸಿರುವ ಮಂಚಗಳನ್ನು ಬೆಡ್ ಗಳನ್ನು ಹಾಗೂ ಸೋಲಾರ್ ಪ್ಯಾನಲ್‌ನ್ನು ತಮ್ಮ ವಶಕ್ಕೆ ಪಡೆದುಕೊಳ್ಳಬೇಕು. ಈ ಪ್ರಕರಣವನ್ನು ಗಂಭೀರವಾವಿ ಪರಿಗಣಿಸಿ ಸದರಿ ಸಂಸ್ಥೆಗೆ ಅನುದಾನ ಬಿಡುಗಡೆಮಾಡಿಸಬೇಕಾಗಿ ಮನವಿಯಲ್ಲಿ ತಿಳಿಸಿದ್ದಾರೆ
.