ಅಂಬೇಡ್ಕರ್ ಮಾತು ಕೇಳಿದಂತೆ ಬಸವಣ್ಣನ ಮಾತು ಕೇಳುವುದಿಲ್ಲ : ಹುಲಸೂರು ಶಿವಾನಂದ ಸ್ವಾಮಿ

ಅಂಬೇಡ್ಕರ್ ಮಾತು ಕೇಳಿದಂತೆ ಬಸವಣ್ಣನ ಮಾತು ಕೇಳುವುದಿಲ್ಲ : ಹುಲಸೂರು ಶಿವಾನಂದ ಸ್ವಾಮಿ

ಅಂಬೇಡ್ಕರ್ ಮಾತು ಕೇಳಿದಂತೆ ಬಸವಣ್ಣನ ಮಾತು ಕೇಳುವುದಿಲ್ಲ : ಹುಲಸೂರು ಶಿವಾನಂದ ಸ್ವಾಮಿ

ವಚನ ಸಾಹಿತ್ಯ ಜೀವನದ ಮೌಲ್ಯಗಳ ಬಗ್ಗೆ ತಿಳಿಸಿಕೊಟ್ಟಂತೆ ಲಿಂಗಾಯತ ಧರ್ಮ ನಡೆಯಬೇಕು

ಚಿಂಚೋಳಿ : ವಚನ ಸಾಹಿತ್ಯ ಜೀವನದ ಮೌಲ್ಯ ಗಳ ಬಗ್ಗೆ ತಿಳಿಸಿವೆ. ಅದರಂತೆ ವಚನ ಸಾಹಿತ್ಯ ಅರೆತುಕೊಂಡು ಲಿಂಗಾಯತ ಧರ್ಮದ ಸಂಸ್ಕೃತಿಯ ಮೂಲ ಅರ್ಥದಂತೆ ಜೀವನ ನಡೆಸಬೇಕು ಎಂದು ಹುಲಸೂರು ಸಂಸ್ಥಾನ ಮಠದ ಶಿವಾನಂದ ಶಿವಾಚಾರ್ಯರು ಹೇಳಿದರು.

ತಾಲೂಕಿನ ಪೋಲಕಪಳ್ಳಿ ಗ್ರಾಮದಲ್ಲಿ ವಿಶ್ವ ಗುರು ಬಸವಣ್ಣನವರ ಅಭಯ ಹಸ್ತ ಮೂರ್ತಿ ಅನಾವರಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಅಂಬೇಡ್ಕರ್ ಅವರ ಮಾತು ದಲಿತ ಶರಣರು ಪಾಲನೆ ಮಾಡಿಕೊಂಡು ನಡೆಯುತ್ತಿದಾರೆ. ಆದರೆ ಬಸವಣ್ಣನವರ ಮಾತು ಲಿಂಗಾಯತ ಧರ್ಮದ ಶರಣರು ಕೇಳುತ್ತಿಲ್ಲ. ಮಹಿಳೆಯರು ಮೂಡ ನಂಬಿಕೆಗಳಿಂದ ಹೊರಬರಬೇಕು. ಆಚಾರ, ವಿಚಾರದಂತೆ ನಡೆಯುವುದೇ ನಿಜವಾದ ಲಿಂಗಾಯತ ಧರ್ಮವಾಗಿದ್ದು, ಮಕ್ಕಳಿಗೆ ವಚನ ಸಾಹಿತ್ಯದಂತೆ ಒಳ್ಳೆಯ ಸಂಸ್ಕಾರದ ಗುಣ ಕಲಿಸಬೇಕು ಎಂದರು.

ಐನಾಪೂರ ಸಂಸ್ಥಾನ ಮಠದ ಉಪಮನ್ನು ಶಿವಾಚಾರ್ಯರು ಮಾತನಾಡಿ,

12ನೇ ಶತಮಾನದ ಬಸವಣ್ಣನವರು ವಚನಗಳ ಮೂಲಕ ಮೂಡನಂಬಿಕೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು. ಲಿಂಗಾಯತ ಧರ್ಮದಲ್ಲಿ ಹುಟ್ಟಿದವರೆಲ್ಲ ಲಿಂಗಾಯತರಾಗುವುದಿಲ್ಲ. ಲಿಂಗವನ್ನು ಧರಿಸಿದವರೆಲ್ಲರೂ ಲಿಂಗಾಯತರೆಂದು ಬಸವಣ್ಣನವರು ಹೇಳಿದರು. ಅದರಂತೆ ವಚನ ಸಾಹಿತ್ಯದ ಸಂಸ್ಕೃತಿ ತಿಳಿಸಿರುವ ದಾರಿಯಂತೆ ಸಮಾಜ ನಡೆಯಬೇಕು ಎಂದರು.  

ಅ.ಭಾ.ವೀ. ಲಿಂ.ಮ. ಸಭಾದ ಚಿಂಚೋಳಿ ಘಟಕದ ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ ಮಾತನಾಡಿ.

ಬಸವಣ್ಣ ಎಲ್ಲಾ ಲಿಂಗಾಯತರಿಗೆ ಬೇಕಾಗಿದೆ. ಆದರೆ ಬಸವಣ್ಣನ ತತ್ವ ಸಿದ್ದಾಂತಗಳು ಬೇಡವಾಗಿದೆ.

ವಿಶ್ವವಿದ್ಯಾಲಯಗಳು ನೀಡುವ ಜ್ಞಾನಕ್ಕಿಂತ ಹತ್ತುಪಟ್ಟು ಜ್ಞಾನ ಬಸವಣ್ಣನ ಮೂರ್ತಿ ಸ್ಥಾಪನೆಯಿಂದ ಸಿಗುತ್ತದೆ. ಲಿಂಗಾಯತ ಸಮಾಜವನ್ನು ಸ್ವಾರ್ಥಕ್ಕಾಗಿ ಚಿಂಚೋಳಿಯಲ್ಲಿ ಬಳಕೆ ಮಾಡಿಕೊಳ್ಳಲಾಗಿತ್ತು. ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಸಂಘಟನೆಗೆ 108 ಗ್ರಾಮ ಘಟಕಗಳು ರಚನೆ ಮಾಡುವ ಮೂಲಕ ಲಿಂಗಾಯತ ಸಮಾಜ ಒಗ್ಗೂಡಿಸುವ ಕೆಲಸ ನಡೆಸಲಾಗುತ್ತಿದೆ ಎಂದರು.  

ಪೋಲಕಪಳ್ಳಿ ಮಠದ ಶಿವಶಂಕರ ಶಿವಾಚಾರ್ಯರು, ಸುಲೇಪೇಟ ಖಟ್ವಾಂಗೇಶ್ವರ ಮಠದ ಪ್ರಭು ದೇವರು ಮಾತನಾಡಿದರು.

ಶಿವರಾಜ ಪಾಟೀಲ್ ಅಧ್ಯಕ್ಷತೆ ವಹಿಸಿದರು.

ಈ ಸಂದರ್ಭದಲ್ಲಿ ಡಾ. ಜಗದೀಶಚಂದ್ರ ಬುಳ್ಳಾ, ಸುರೇಶ ದೇಶಪಾಂಡೆ, ನಂದಿಕುಮಾರ ಪಾಟೀಲ್, ರಾಜಶೇಖರ ಹಿತ್ತಲ್, ಸೈಯದ್ ಜಾಕೀರ, ರವಿಕುಮಾರ ಅವರು ಸೇರಿದಂತೆ ಸುತ್ತುಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದರು.