ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅಜಯರೆಡ್ಡಿ ಯಲ್ಹೇರಿ ಅವಿರೋಧ ಆಯ್ಕೆ

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅಜಯರೆಡ್ಡಿ ಯಲ್ಹೇರಿ ಅವಿರೋಧ ಆಯ್ಕೆ

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅಜಯರೆಡ್ಡಿ ಯಲ್ಹೇರಿ ಅವಿರೋಧ ಆಯ್ಕೆ

ಗುರುಮಿಠಕಲ್ : ತಾಲೂಕಿನ ಗಣಪುರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅಜಯರೆಡ್ಡಿ ಶಿವರಾಯ ಯಲ್ಹೇರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಂಜನೇಯ ಗಣಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಅಜಯರೆಡ್ಡಿ ಯಲ್ಹೇರಿ ಅವರು ಗ್ರಾಮೀಣ ಭಾಗದ ಜನರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯತ್ವ ಪಡೆಯುವ ಕುರಿತು ಹಾಗೂ ಸಂಘದ ಸಾಲ ಸೌಲಭ್ಯಗಳನ್ನು ಪಡೆಯುವ ಕುರಿತು  ಹಾಗೂ ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸದೃಢಗೊಳಿಸಲು ಪ್ರಯತ್ನ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕ.ರಾ.ರೈತ ಸಂಘ ಗುರುಮಿಠಕಲ್ ತಾಲೂಕ ಅಧ್ಯಕ್ಷ ಭೀಮರಾಯ ಯಲ್ಹೇರಿ ಅವರ ನೇತೃತ್ವದಲ್ಲಿ ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು.

ಉಪಾಧ್ಯಕ್ಷರಾದ ಆಂಜನೇಯ ಗಣಪುರ,ಸದಸ್ಯರಾದ ಹಣಮರೆಡ್ಡಿ ಪಟ್ಟೆದಾರ್ , ಬಸ್ಸಪ್ಪ ಹಳ್ಳಿ, ವಿಜಯಕುಮಾರ್ ಮೊಗ್ದಂಪುರ, ಮಲ್ಲುಗೌಡ ಹಳೆಮನಿ, ಸುಭಾಸಗೌಡ ಹಳೆಮನಿ, ಸಿದ್ದುಗೌಡ ಪೋ ಪಾ, ಮಾಣಿಕಪ್ಪ ಗಣಪುರ, ಇನ್ನಿತರ ಸದಸ್ಯರು ಹಾಗೂ ಗ್ರಾಮಸ್ಥರರಿದ್ದರು.