ಹಿಂದೂ-ಮುಸ್ಲಿಂರ ಬಾಂಧವ್ಯ ಒಗ್ಗಟ್ಟಿಗೆ ಇಫ್ತಿಯಾರ ಕೂಟವೇ ಸಾಕ್ಷಿ : ಅಬ್ದುಲ್ ಬಾಸಿದ್

ಹಿಂದೂ-ಮುಸ್ಲಿಂರ ಬಾಂಧವ್ಯ ಒಗ್ಗಟ್ಟಿಗೆ ಇಫ್ತಿಯಾರ ಕೂಟವೇ ಸಾಕ್ಷಿ : ಅಬ್ದುಲ್ ಬಾಸಿದ್

ವೀರಶೈವ ಲಿಂಗಾಯತ ಸಂಘಟನೆ ವತಿಯಿಂದ ಮುಸ್ಲಿಂ ಬಂದವರಿಗೆ ಔತಣ ಕೂಟ

ಹಿಂದೂ-ಮುಸ್ಲಿಂರ ಬಾಂಧವ್ಯ ಒಗ್ಗಟ್ಟಿಗೆ ಇಫ್ತಿಯಾರ ಕೂಟವೇ ಸಾಕ್ಷಿ : ಅಬ್ದುಲ್ ಬಾಸಿದ್ 

ಚಿಂಚೋಳಿ :ಮುಸ್ಲಿಂ ಬಾಂಧವರ ಪವಿತ್ರ ರಂಜಾನ ಹಬ್ಬ ಅಂಗವಾಗಿ ಚಿಂಚೋಳಿ ಅವಳಿ ಪಟ್ಟಣ ಚಂದಾಪುರದ ಪಟೇಲ್ ಕಾಲೋನಿಯ ಅರೇಬಿಕ್ ಶಾಲೆಯ ಮಕ್ಕಳಿಗೆ ತಾಲೂಕಾ ವೀರಶೈವ ಲಿಂಗಾಯತ ಸಮಾಜ ವತಿಯಿಂದ ರಂಜಾನ್ ಉಪವಾಸಿಕರಿಗೆ ಉಪಹಾರದ ಔತಣ ಕೂಟ ಏರ್ಪಡಿಸಲಾಯಿತು. 

 ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಮಾಜಿ ಪುರಸಭೆ ಅಧ್ಯಕ್ಷ ಅಬ್ದುಲ್ ಬಾಸಿದ ಮಾತನಾಡಿ, ಚಿಂಚೋಳಿ ತಾಲೂಕಿನಲ್ಲಿ ಹಿಂದೂ ಮತ್ತು ಮುಸ್ಲಿಂ ಎರಡು ಧರ್ಮಗಳ ಸಮುದಾಯಗಳು ಅಣ್ಣ ತಮ್ಮಂದರಂತೆ ಒಂದಾಗಿದ್ದು, ಒಳ್ಳೆಯ ಪವಿತ್ರ ಬಾಂಧವ್ಯದೊಂದಿಗೆ ಬದುಕುತ್ತಿದ್ದಾರೆ. ಇದಕ್ಕೆ ಲಿಂಗಾಯತ ಸಮಾಜ ಮುಸ್ಲಿಂ ಸಮಾಜದ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಉಪವಾಸಿಕರಿಗೆ ಔತಣ ಕೂಟ ಏರ್ಪಡಿಸಿ, ನೀಡುತ್ತಿರುವುದು ಚಿಂಚೋಳಿಯಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವ್ಯ ಒಗ್ಗಟ್ಟಿನಿಂದ ಗಟ್ಟಿ ಆಗಿದ್ದೇವೆ ಎಂಬುವುದಕ್ಕೆ ಕೂಟವೇ ಸಾಕ್ಷಿಯಾಗಿದ್ದು, ಪವಿತ್ರ ಬಾಂಧವ್ಯದ ಸಂದೇಶ ನೀಡಿದೇ ಎಂದು ಹೇಳಿದರು.

 ಬಿಜೆಪಿ ಹಿರಿಯ ಮುಖಂಡ ಕೆ.ಎಂ ಬಾರಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕ ಅಧ್ಯಕ್ಷ ಶರಣು ಪಾಟೀಲ್ ಮೋತಕಪಳ್ಳಿ, ಅವರು ಮಾತನಾಡಿದರು.

 ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ತಾಲೂಕ ಅಧ್ಯಕ್ಷ ಸಂಜೀವಕುಮಾರ ಪಾಟೀಲ್, ತಾಲೂಕ ಅರೋಗ್ಯ ಅಧಿಕಾರಿ ಡಾ.ಮಹಮ್ಮದ್ ಗಫಾರ್, ಪುರಸಭೆ ಮಾಜಿ ಅಧ್ಯಕ್ಷ ಆನಂದಕುಮಾರ ಟೈಗರ, ಬಿಜೆಪಿ ಹಿರಿಯ ಮುಖಂಡ ಗೋಪಾಲರಾವ್ ಕಟ್ಟಿಮನಿ, ಪ್ರದೀಪ್ ದೇಶಮುಖ, ಶಿವಶರಣಪ್ಪ ಡೆಂಗಿ, ರೇವಣಸಿದ ದಾದಾಪುರ, ವಿಜಯಕುಮಾರ ಬೆಳಕೇರಿ, ಚಂದ್ರಶೇಖರ್ ಪಾರಾ, ಸಿದ್ದಣ್ಣ ಪಾಟೀಲ, ಚನ್ನವೀರ ಗೌಡನೂರ್ , ಸೂರ್ಯಕಾಂತ ಸುಂಕದ, ಮಕಸೂದ ಸೌದಾಗರ್, ಸತ್ತರ್ ಖುರೇಷಿ, ಸೈಯದ್ ಶಬ್ಬೀರ್, ಮಹಮ್ಮದ ನಯುಮ್ ಪಟೇಲ್, ಕಲೀಲ್ ಪಟೇಲ್, ಮತ್ತೀನ್ ಸೌದಾಗರ್,

ಚಾಂದ, ಬಬ್ಬು ಖಾನ್, ಅಝರ್ ಸೌದಾಗರ್, ಶೇಕ್ ಫಾರಿದ್, ಜಿಯಾ ಸೇರಿದಂತೆ ಮಜೀದ್ ಕಮಿಟಿಯ ಸದಸ್ಯರು ಇಫ್ತಾರ ಕೂಟದಲ್ಲಿ ಉಪಸ್ಥಿತರಿದ್ದರು .