ಕರ್ನಾಟಕ ಸಚಿವ ಸಂಪುಟದಲ್ಲಿ ಲಂಬಾಣಿ ಸಮುದಾಯಕ್ಕೆ ಸಚಿವ ಸ್ಥಾನ ನೀಡದಿರುವುದಕ್ಕೆ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ಅಸಮಾಧಾನ

ಕಲಬುರಗಿ : ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಕರ್ನಾಟಕ ರಾಜ್ಯದ ಶೇಕಡಾ 80ರಷ್ಟು ಬಂಜಾರ ಸಮುದಾಯದ ಜನರು ಬೆಂಬಲಿಸಿದ್ದರೂ ಸಚಿವ ಸಂಪುಟ ರಚನೆಯಲ್ಲಿ ಸ್ಥಾನ ನೀಡದಿರುವು ದು ಅತ್ಯಂತ ಬೇಸರದ ಸಂಗತಿ ಎಂದು ಕರ್ನಾಟಕದ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಯದೇವ ನಾಯಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ನವದೆಹಲಿಯ ಡಾ. ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ಫೆ.28 ರಂದು ನಡೆದ ಸೇವಾಲಾಲ್ ಜಯಂತಿ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಬಂಜಾರ ಸಮುದಾಯ ಕೈಜೋಡಿಸಿದ್ದು ಆದರೆ ಸಚಿವ ಸಂಪುಟ ಸಾಲದ ನಿರೀಕ್ಷೆಯಲ್ಲಿದ್ದರೂ ಸಿಗಲಿಲ್ಲ. ಸದ್ಯ ಮೀಸಲಾತಿಯ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದ್ದು ಬಂಜಾರ ಸಮುದಾಯಕ್ಕೆ ನ್ಯಾಯೋಚಿತ ಸೌಲಭ್ಯಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು. ಬಂಜಾರ ಸಮುದಾಯದವರು ಇಡೀ ದೇಶದಲ್ಲಿ ಒಂದೇ ಭಾಷೆ, ಒಂದೇ ಆಹಾರ ಕ್ರಮ, ಉಡುಗೆ ತೊಡುಗೆಗಳನ್ನು ಹೊಂದಿದ್ದಾರೆ. ರಾಜಕೀಯವಾಗಿ ಭಿನ್ನ-ಭಿನ್ನವಾಗಿರುವುದರಿಂದ ಒಗ್ಗೂಡಿತ ಪ್ರಯತ್ನ ಮಾಡಲು ಸಮುದಾಯ ವಿಫಲವಾಗುತ್ತಿದೆ. ಇದರಿಂದ ಸಮುದಾಯಕ್ಕೆ ಸೌಲಭ್ಯ ಪಡೆಯಲು ವಂಚಿತವಾಗುತ್ತಿದೆ ಎಂದರು.