ತಂದೆ ತಾಯಿಯ ಸೇವೆ ದೊಡ್ಡ ಸೇವೆ: ಹೌವಗಿಲಿಂಗೇಶ್ವರ ಶಿವಾಚಾರ್ಯ

ತಂದೆ ತಾಯಿಯ ಸೇವೆ ದೊಡ್ಡ ಸೇವೆ: ಹೌವಗಿಲಿಂಗೇಶ್ವರ  ಶಿವಾಚಾರ್ಯ

ತಂದೆ ತಾಯಿಯ ಸೇವೆ ದೊಡ್ಡ ಸೇವೆ: ಹೌವಗಿಲಿಂಗೇಶ್ವರ ಶಿವಾಚಾರ್ಯ

ಕಮಲನಗರ: ಮನೆಯಲ್ಲಿ ತಂದೆ ತಾಯಿಯನ್ನು ಬಿಟ್ಟು, ಗುಡಿ ಗೋಪುರಗಳಲ್ಲಿ ಭಕ್ತಿ ಸಲ್ಲಿಸಿದರೆ ದೇವರಿಗೆ ಒಪ್ಪದು ಮೊದಲು

ತಂದೆ ತಾಯಿ ಸೇವೆ ದೊಡ್ಡ ಸೇವೆಯಾಗಿರುತ್ತೆದೆ ಎಂದು ಹೌವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.

 ತಾಲೂಕಿನ ಡಿಗ್ಗಿ ಗ್ರಾಮದ ಮಡಿವಾಳೇಶ್ವರ ದೇವಾಲಯದಲ್ಲಿ ಸೋಮವಾರ ನಡೆದ ಶಿವಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಹಲಬರ್ಗಾ, ಶಿವಣಿ, ಹೈದರಾಬಾದ ಮಠದ ಪೀಠಾಧಿಪತಿ ಹೌವಗಿಲಿಂಗೇಶ್ವರ ಶಿವಾಚಾರ್ಯ ಮಾತನಾಡಿದರು.

ಯಾವುದೋ ಮಹಾರಾಜರು ಹೇಳಿದರೆ ಎಂದು ಶಿವಲಿಂಗಕ್ಕೆ ನೀರಿರುವುದು ಬೇಡ, ನಿಮ್ಮ ಮನಸ್ಸು ಭಾವವನ್ನೇ ಸ್ವಚ್ಛ ಮಾಡಿ, ಒಳ್ಳೆ ಆಚಾರ ವಿಚಾರವನ್ನು ರೂಢಿ ಮಾಡಿಕೊಂಡು ಭಕ್ತಿಯನ್ನು ಅರ್ಪಿಸಿ ಅವಾಗ ದೇವರು ಸಂತಸಕೊಳ್ಳುತ್ತಾನೆ.

 ಪವಿತ್ರವಾದ ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯ ಮತ್ತು ಅನ್ನದಾಸೋಹ ಮಾಡುವುದಕ್ಕೆ ಬಹಳ ಒಳ್ಳೆಯ ಸಮಯ, ಡಿಗ್ಗಿ ಗ್ರಾಮದಲ್ಲಿ ಇಂದು ಶ್ರಾವಣ ಮಾಸದ ಸೋಮವಾರ ಲಿಂಗ ಪ್ರತಿಷ್ಠಾಪನೆಯ ಅಮೃತಗಳಿಗೆ ಪಾಲ್ಗೊಂಡ ನೀವೆಲ್ಲರೂ ಪುಣ್ಯವಂತರು ಎಂದರು. ಗ್ರಾಮದಲ್ಲಿ ನಡೆಯುತ್ತಿರುವ ನಿರಂತರ ಅನ್ನದಾಸ ಕಾರ್ಯಕ್ರಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮ ನಿಮಿತ್ಯ ಮಡಿವಾಳೇಶ್ವರ ರುದ್ರಾಭಿಷೇಕ ಹಾಗೂ ಭಜನೆ ಸಂಘದಿಂದ ಭಜನೆ, ಆರಾಧನೆ ನಡೆಯಿತು. ನಂತರ ಎಲ್ಲರೂ ಶಿವಲಿಂಗಕ್ಕೆ ಹೂ ಪತ್ರಿ ಸಲ್ಲಿಸಿ ನಮಿಸಿದರು.

ಈ ಸಂದರ್ಭದಲ್ಲಿ ಮಡಿವಾಳೇಶ್ವರ ದೇವಾಲಯ ಟ್ರಸ್ಟ್ ಅಧ್ಯಕ್ಷ ದೇವೇಂದ್ರ ಪಾಟೀಲ, ಕಾರ್ಯದರ್ಶಿ ಮಡಿವಾಳಪ್ಪ ಮುರ್ಕೆ, ಶಿವಕುಮಾರ ರಾಂಪುರೆ, ಮಡಿವಾಳಪ್ಪ ಶ್ರೀಗಿರಿ

 ಚನ್ನಬಸವ ಬಿರಾದಾರ, ಬಾಲಾಜಿ ಬನವಾಸೆ, ಸಂದೀಪ ಪಾಟೀಲ, ವೈಜಿನಾಥ ಕುಂಬಾರಗೆರೆ, ಸೋಮನಾಥ ರಾಂಪುರೆ, ಸಂಗಮನಾಥ ಬಿರಾದಾರ, ಪರಮೇಶ ರಾಂಪುರೆ, ಸಂಗಮೇಶ ಬನವಾಸೆ, ಅಭಿಜಿತ ರಾಂಪುರೆ, ಸೇರಿದಂತೆ ಇನ್ನಿತರು ಇದ್ದರು.