ಜನರಿಗೆ ನಿರಾಶಾದಾಯಕ ಆಯವ್ಯಯ ಬಜೆಟ್: ಸುಂದರ ಡಿ ಸಾಗರ

ಜನರಿಗೆ ನಿರಾಶಾದಾಯಕ ಆಯವ್ಯಯ ಬಜೆಟ್: ಸುಂದರ ಡಿ ಸಾಗರ

ಜನರಿಗೆ ನಿರಾಶಾದಾಯಕ ಆಯವ್ಯಯ ಬಜೆಟ್: ಸುಂದರ ಡಿ ಸಾಗರ

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿ ಸಿದ ಪ್ರಸಕ್ತ ಸಾಲಿನ ಬಜೆಟ್ ಮೇಲ್ನೋಟಕ್ಕೆ ಹತ್ತಾರು ಭರ ವಸೆಗಳ ಮೂಟೆಯಂತೆ ಕಂಡರೂ ಅನುಷ್ಠಾನದ ಸಾಧ್ಯ ತೆಯನ್ನು ಅರಿತಾಗ ವಾಸ್ತವ ದಲ್ಲಿ ತೀವ್ರ ನಿರಾಶಾದಾಯಕ ವಾಗಿದೆ ಎಂದು ಬಿಜೆಪಿ ಜಿಲ್ಲಾ ಗ್ರಾಮಾಂತರ ಕಾರ್ಯದರ್ಶಿಯಾದ ಸುಂದರ ಡಿ ಸಾಗರ

ಅಭಿಪ್ರಾಯಪಟ್ಟಿದ್ದಾರೆ.

     ಕೇವಲ ಅಂಕಿ-ಅಂಶಗಳ ಆಟವಾಗಿರುವ ಈ ಬಜೆಟ್, ಸಾಮಾನ್ಯ ಜನರಲ್ಲಿ ಭರವಸೆ ಮೂಡಿಸುವ ಬದಲು ಆತಂಕ ವನ್ನು ಹೆಚ್ಚು ಮಾಡಿದೆ. ಸಾರಿಗೆ ನಿಗಮಗಳ ನೌಕರರ ವೇತನ ಬಾಕಿಗಾಗಿ 1,271 ಕೋಟಿ, ಒಂದು ಸಾವಿರ ಹೊಸ ಡೀಸೆಲ್ ಬಸ್‌ಗಳು ಮತ್ತು 4 ಸಾವಿರ ಎಲೆಕ್ಟಿಕ್ ಬಸ್ ಗಳ ಸೇರ್ಪಡೆಯಂತಹ ದೊಡ್ಡ ಭರವಸೆ ಗಳನ್ನು ನೀಡಲಾಗಿದೆ. ಜತೆಗೆ ಶಕ್ತಿ ಯೋಜನೆಗೆ 25,300 ಕೋಟಿ ಮೀಸಲಿಡಲಾಗಿದೆ. ಆದರೆ, ಕಳೆದ ವರ್ಷದ

 ಬಜೆಟ್ ಸ್ಥಿತಿಗತಿ ನೋಡಿದರೆ ಈ ಭರವಸೆಗಳ ಬಗ್ಗೆ ತೀವ್ರ ಅನುಮಾನ ಕಾಡುತ್ತದೆ.ರೈತರ ಓಲೈಕೆಗಾಗಿ ಕೃಷಿ ಸಾಲ ವಿತರಿ ಸುವ ಗುರಿ ಹೊಂದಲಾಗಿದೆ. ಜೊತೆಗೆ ಎಪಿಎಂಸಿಗಳ ಡಿಜಿಟಲೀಕರಣಕ್ಕೆ 10 ಕೋಟಿ ಘೋಷಿಸಲಾಗಿದೆ. ಕಳೆದ ವರ್ಷದ ಗುರಿಗೂ ಸಾಧನೆಗೂ ಅಜಗಜಾಂತರ ವ್ಯತ್ಯಾಸ ಎದ್ದು ಕಾಣುತ್ತದೆ. ಹಳೆಯ ಗುರಿ ತಲುಪಲಾಗದ ಸರ್ಕಾರ ಕೇವಲ ರೈತರ ದಿಕ್ಕು ತಪ್ಪಿಸುತ್ತಿದೆ ಎಂದಿದ್ದಾರೆ.