ವಲಸೆ ನಿಯಂತ್ರಣ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಲಿ: ಆನಂದ್ ಕುಮಾರ್ ಬಡಿಗೇರ್ ಆಗ್ರಹ

ವಲಸೆ ನಿಯಂತ್ರಣ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಲಿ: ಆನಂದ್ ಕುಮಾರ್ ಬಡಿಗೇರ್ ಆಗ್ರಹ

ವಲಸೆ ನಿಯಂತ್ರಣ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಲಿ: ಆನಂದ್ ಕುಮಾರ್ ಬಡಿಗೇರ್ ಆಗ್ರಹ

ವರದಿ: ಜೆಟ್ಟೆಪ್ಪ ಎಸ. ಪೂಜಾರಿ*

ಬೆಂಗಳೂರು:  ರಾಜ್ಯದಲ್ಲಿ ಉದ್ಯೋಗಾವಕಾಶಗಳ ವಿಚಾರದಲ್ಲಿ ಸ್ಥಳೀಯ ಕನ್ನಡಿಗರಿಗೆ ನ್ಯಾಯ ದೊರೆಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕದಲ್ಲಿ ವಲಸೆ ನಿಯಂತ್ರಣ ಕಾಯ್ದೆ ಜಾರಿಗೆ ತರಬೇಕೆಂಬ ಆವಶ್ಯಕತೆಯನ್ನು ಸಮಾಜ ಸೇವಕರು ಹಾಗೂ ಪ್ರಗತಿಪರ ಹಿತಚಿಂತಕರು ಆದ ಆನಂದ್ ಕುಮಾರ್ ಮಾರಡಗಿ ಅವರು ರಾಜ್ಯ ಸರ್ಕಾರಕ್ಕೆ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.ಅವರು ತಮ್ಮ ಪ್ರಕಟಣೆಯಲ್ಲಿ ಹೇಳಿದರು:  

"ಇಂದು ಕನ್ನಡಿಗರು ಕೈಗಾರಿಕಾ ಕಂಪನಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೇವಲ ಹತ್ತರಿಂದ ಹದಿನೈದು ಸಾವಿರ ರೂಪಾಯಿಯಲ್ಲಿ ದುಡಿಯುವ ಅನಿವಾರ್ಯತೆಯೊಳಗಾಗಿ ಶೋಷಣೆಗೊಳಗಾಗುತ್ತಿದ್ದಾರೆ. ಈ ಪರಿಸ್ಥಿತಿಗೆ ಕಾರಣವೆಂದರೆ ಹೊರ ರಾಜ್ಯಗಳಿಂದ ಬರುವ ವಲಸೆ ಕಾರ್ಮಿಕರು ಅತಿ ಕಡಿಮೆ ಸಂಬಳದಲ್ಲಿ ಕೆಲಸ ಮಾಡಲು ಸಿದ್ಧರಾಗಿರುವುದು. ಇದರ ಪರಿಣಾಮವಾಗಿ ಸ್ಥಳೀಯರಿಗೆ ಉದ್ಯೋಗ ಸಿಗದಂತಾಗಿದೆ."

ಕನ್ನಡಿಗರ ಆರ್ಥಿಕ ಭದ್ರತೆ ಮತ್ತು ಭವಿಷ್ಯವನ್ನು ಕಾಪಾಡಲು, ಬೆಂಗಳೂರಿನಂತಹ ನಗರಗಳಲ್ಲಿ ಉದ್ಯೋಗದಲ್ಲಿ ನ್ಯಾಯಪೂರಿತ ಸ್ಥಳೀಯ ಪ್ರತಿನಿಧನೆ ಸಿಗಬೇಕೆಂಬ ಆಶಯದಿಂದ, ಅವರು ವಲಸೆ ನಿಯಂತ್ರಣ ಕಾಯ್ದೆ ತಕ್ಷಣ ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.