ಸಿಇಟಿ ಪರೀಕ್ಷೆಯಲ್ಲಿ ತೀವ್ರ ನಿಯಮಾಚರಣೆ – ಪೂರ್ತಿತೋಳಿನ ಅಂಗಿ ಧರಿಸಿದ್ದ ವಿದ್ಯಾರ್ಥಿಗೆ ತೋಳು ಕತ್ತರಿಸುವ ಘಟನೆ!

ಸಿಇಟಿ ಪರೀಕ್ಷೆಯಲ್ಲಿ ತೀವ್ರ ನಿಯಮಾಚರಣೆ – ಪೂರ್ತಿತೋಳಿನ ಅಂಗಿ ಧರಿಸಿದ್ದ ವಿದ್ಯಾರ್ಥಿಗೆ ತೋಳು ಕತ್ತರಿಸುವ ಘಟನೆ!

ಸಿಇಟಿ ಪರೀಕ್ಷೆಯಲ್ಲಿ ತೀವ್ರ ನಿಯಮಾಚರಣೆ – ಪೂರ್ತಿತೋಳಿನ ಅಂಗಿ ಧರಿಸಿದ್ದ ವಿದ್ಯಾರ್ಥಿಗೆ ತೋಳು ಕತ್ತರಿಸುವ ಘಟನೆ!

ಇಂದು ನಡೆದ ಸಿಇಟಿ ಪರೀಕ್ಷೆಯಲ್ಲಿ ಕಲಬುರಗಿಯ ದಾಮೋದರ ರಘೋಜಿ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ ಸಿಡಿಲೆಬ್ಬಿಸುವ ಘಟನೆ ನಡೆದಿದೆ. ಪರೀಕ್ಷೆಗೆ ಪೂರ್ಣತೋಳಿನ ಶರ್ಟ್ ಧರಿಸಿ ಬಂದ ವಿದ್ಯಾರ್ಥಿಯ ಅಂಗಿಯ ತೋಳನ್ನು ಪ್ರಧಾನ ಅಧೀಕ್ಷಕ ಮಲ್ಲಿಕಾರ್ಜುನ ಪಾಲಾಮೂರ್ ಅವರು ಅರ್ಧಕ್ಕೆ ಕತ್ತರಿಸಿ ಪರೀಕ್ಷಾ ಕೇಂದ್ರದೊಳಗೆ ಬಿಡಲು ಅವಕಾಶ ನೀಡಿರುವುದು ಪ್ರತ್ಯಕ್ಷದರ್ಶಿಗಳಿಂದ ತಿಳಿದುಬಂದಿದೆ.

ಸಿಇಟಿ ನಿಯಮಾನುಸಾರ, ಅಭ್ಯರ್ಥಿಗಳು  ಪರಿಶೀಲನೆಗೆ ಅನುಕೂಲವಾಗುವಂತೆ ಅರ್ಧತೋಳಿನ ಶರ್ಟ್ ಅಥವಾ ಟಿ-ಶರ್ಟ್ ಧರಿಸಬೇಕು ಎಂಬ ನಿರ್ದೇಶನವಿತ್ತು. ಆದರೂ ಅನೇಕರು ಈ ನಿಯಮವನ್ನು ಉಲ್ಲಂಘಿಸಿ ಪೂರ್ಣತೋಳಿನ ಅಂಗಿ ಧರಿಸಿಕೊಂಡು ಬಂದಿದ್ದು, ಬಾಗಿಲಲ್ಲೇ ತಮ್ಮ ಅಂಗಿಯನ್ನು ಕತ್ತರಿಸಿಕೊಂಡ ಘಟನೆಗಳು ವರದಿಯಾಗಿವೆ.

ಇನ್ನೂ ಕೆಲವರು ಬನಿಯನ್ ಧರಿಸಿ ಪರೀಕ್ಷೆ ಬರೆಯುವವರೆಗೂ ಹೋಗಿರುವುದು ಈ ಬಾರಿ ಸಿಇಟಿ ಪರೀಕ್ಷೆಯಲ್ಲಿ ನಿಯಮಾಚರಣೆಯ ಗಂಭೀರತೆಯನ್ನು ತೋರಿಸುತ್ತಿದೆ.

—KKP ಪತ್ರಿಕೆ