ಶಹಾಪುರದಲ್ಲಿ ಶ್ರೀ ಯಮನೂರಪ್ಪ ಮುತ್ಯಾ ಜಾತ್ರೆ: ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟನೆ

ಶಹಾಪುರದಲ್ಲಿ ಶ್ರೀ ಯಮನೂರಪ್ಪ ಮುತ್ಯಾ ಜಾತ್ರೆ: ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟನೆ

ಶಹಾಪುರದಲ್ಲಿ ಶ್ರೀ ಯಮನೂರಪ್ಪ ಮುತ್ಯಾ ಜಾತ್ರೆ: ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟನೆ 

ಯಾದಗಿರಿ: ಶಹಾಪುರ ತಾಲೂಕಿನ ಸುಕ್ಷೇತ್ರ ಮಹಲ್ ರೋಜಾದಲ್ಲಿ ಶ್ರೀ ಯಮನೂರಪ್ಪ ಮುತ್ಯಾ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಸಚಿವ ಶರಣಪ್ರಕಾಶ ಪಾಟೀಲ ಅವರು ಉದ್ಘಾಟಿಸಿದರು.  

ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಪುರ, ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಸೇರಿದಂತೆ ಅನೇಕ ಮಠಾಧೀಶರು ಭಾಗವಹಿಸಿ ನವಜೋಡಿಗಳಿಗೆ ಶುಭ ಹಾರೈಸಿದರು.  

ಶ್ರೀ ಮಲ್ಲಿಕಾರ್ಜುನ ಮುತ್ಯಾನವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನವಜೋಡಿಗಳಿಗೆ ಪೂಜ್ಯರುಗಳು ಆಶೀರ್ವಚನ ನೀಡಿದರು.  

ಯಾದಗಿರಿ ಜಿಲ್ಲೆಯ ವಿವಿಧ ಭಾಗಗಳಿಂದ ಹಾಗೂ ಶಹಾಪುರ ತಾಲೂಕಿನ ಅನೇಕ ಭಕ್ತಾದಿಗಳು ಜಾತ್ರೆ ಮತ್ತು ವಿವಾಹ ಕಾರ್ಯಕ್ರಮದಲ್ಲಿ ಉತ್ಸಾಹಭರಿತವಾಗಿ ಭಾಗವಹಿಸಿದರು.