ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಮಹಾಪರಿನಿರ್ವಾಣ ದಿನಾಚರಣೆ
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಮಹಾಪರಿನಿರ್ವಾಣ ದಿನಾಚರಣೆ
ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ 68 ನೇ ಮಹಾಪರಿನಿರ್ವಾಣ ದಿನಾಚರಣೆಯ ಅಂಗವಾಗಿ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಲಕ್ಷ್ಮಿನಾರಾಯಣ ನಾಗವಾರ ಬಣ ವತಿಯಿಂದ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) (ಲಕ್ಷ್ಮಿನಾರಾಯಣ ನಾಗವಾರ ಬಣ ಕಲಬುರಗಿ ಜಿಲ್ಲಾ ಸಮಿತಿ ಜಿಲ್ಲಾ ಸಂಚಾಲಕ ಬಸವರಾಜ ಟಿ. ಬಾಡಿಯಾಲ, ಮುಖಂಡರಾದ ಮಲ್ಲಿಕಾರ್ಜುನ ತಾರಫೈಲ್, ಶರಣು ಬಾಣೇಕರ್, ಅಮರನಾಥ ನಿಪಾಣಿ, ಬಸವರಾಜ ನಾಟೀಕರ್, ಕಬೀರದಾಸ ಹರಸೂರ, ಶಿವಯೋಗಿ ಇನಾಮದಾರ, ಸ್ವಾಮಿ ಸಿಂದೋಳ್ಳಿ, ಹಣಮಂತರಾಯ ದೇವನ್, ಶರಣು ಕಾನಾಪೂರ, ಸೈಬಣ್ಣ ಪಾಳ ಸೇರಿದಂತೆ ಇತರರು ಇದ್ದರು
.