ಅಲ್ಲೂರ ಅಗಲಿಕೆಯಿಂದ ಜಾನಪದ ಲೋಕಕ್ಕೆ ತುಂಬಲಾರದ ನಷ್ಟ - ಎ.ಕೆ. ರಾಮೇಶ್ವರ

ಅಲ್ಲೂರ ಅಗಲಿಕೆಯಿಂದ ಜಾನಪದ ಲೋಕಕ್ಕೆ ತುಂಬಲಾರದ ನಷ್ಟ - ಎ.ಕೆ. ರಾಮೇಶ್ವರ

ಅಲ್ಲೂರ ಅಗಲಿಕೆಯಿಂದ ಜಾನಪದ ಲೋಕಕ್ಕೆ ತುಂಬಲಾರದ ನಷ್ಟ - ಎ.ಕೆ. ರಾಮೇಶ್ವರ 

ಕಲಬುರಗಿ, ಶಾಂತಿ ನಗರ:  ಕರ್ನಾಟಕ ಜಾನಪದ ಪರಿಷತ್ತಿನ ಚಿತ್ತಾಪುರ ತಾಲೂಕು ಅಧ್ಯಕ್ಷರಾಗಿದ್ದ ಲಿಂ. ನಾಗಯ್ಯ ಸ್ವಾಮಿ ಅಲ್ಲೂರ ಅವರ ನಿಧನಕ್ಕೆ ಇಂದು ಶಾಂತಿ ನಗರದಲ್ಲಿ ಜಾನಪದ ಪರಿಷತ್ತಿನ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಕ್ಕಳ ಕಿವಿ ಎ.ಕೆ. ರಾಮೇಶ್ವರ ಅವರು, "ನಾಗಯ್ಯ ಸ್ವಾಮಿ ಅಲ್ಲೂರ ಅವರು ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸಿ, ಜನಪದ ಪರಿಷತ್ತಿನಲ್ಲಿ ಕ್ರಿಯಾಶೀಲ ಸೇವೆ ಸಲ್ಲಿಸುತ್ತಿದ್ದರು. ಅವರ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವೆ ಅಮೂಲ್ಯವಾದದ್ದು. ಇವರಂತಹ ವ್ಯಕ್ತಿಯನ್ನು ಕಳೆದುಕೊಂಡಿದ್ದು ನಾಡಿಗೆ ದೊಡ್ಡ ನಷ್ಟವಾಗಿದೆ" ಎಂದು ಹೇಳಿದರು.

ಸಭೆಯಲ್ಲಿ ಕಜಾಪ ಜಿಲ್ಲಾಧ್ಯಕ್ಷ ಸಿ.ಎಸ್. ಮಾಲಿಪಾಟೀಲ್, ಪ್ರಧಾನ ಕಾರ್ಯದರ್ಶಿ ಡಿ.ಪಿ. ಸಜ್ಜನ, ಖಜಾಂಚಿ ಭಾನುಕುಮಾರ ಗೀರಗೋಳ, ಆಳಂದ ತಾಲೂಕು ಅಧ್ಯಕ್ಷ ಅಪ್ಪಸಾಬ ತಿರ್ಥೆ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

ಸಭೆಯ ಅಂತಿಮ ಕ್ಷಣದಲ್ಲಿ ದಿವಂಗತ ನಾಗಯ್ಯ ಸ್ವಾಮಿ ಅಲ್ಲೂರರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.