ಪ್ರತಿಭೆಯ ಪಾಠಶಾಲೆ – ಶ್ಲಾಘನೆಯ ಸವಿ ಕ್ಷಣ"ಬಂತೆ ವರಜ್ಯೋತಿ ಅಭಿಮತ-

ಪ್ರತಿಭೆಯ ಪಾಠಶಾಲೆ – ಶ್ಲಾಘನೆಯ ಸವಿ ಕ್ಷಣ"ಬಂತೆ ವರಜ್ಯೋತಿ ಅಭಿಮತ-

|ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನೆ

-ಬಂತೆ ವರಜ್ಯೋತಿ ಅಭಿಮತ-

ಗುರಿಗಳ ಕಡೆಗೆ ಶ್ರದ್ಧೆಯಿಂದ ಕೆಲಸ ಮಾಡಲು ಪ್ರೋತ್ಸಾಹಿಸಿದಂತಹ ಸಮಾರಂಭ :..

ಶಹಾಬಾದ : - ಭವಿಷ್ಯದ ಯುುವ ನಾಯಕರ ಮತ್ತು ಬದಲಾವಣೆ ತರುವವರಿಗೆ ಪೋಷಣೆಯ ನೆಲವಾಗಿ ಡಾ.ಅಂಬೇಡ್ಕರ ಜಯಂತಿ ಪಾತ್ರವನ್ನು ಅದು ಬಲಪಡಿಸಿದೆ ಎಂದು ಅಣದೂರಿನ ಬೌದ್ದ ವಿಹಾರದ ಬಂತೆ ವರಜ್ಯೋತಿ ಯವರು ಹೇಳಿದರು 

ಅವರು 134ನೇ ಜಯಂತ್ಯೋತ್ಸವ ಸಮಿತಿ ಹಾಗೂ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಅಶೀರ್ವಚನ ನೀಡುತ್ತ ಮಾತನಾಡಿದರು.

ಈ ಸಮಾರಂಭವು ಯುವಕರಲ್ಲಿ ಮಹತ್ವಾಕಾಂಕ್ಷೆ ಮತ್ತು ಪರಿಶ್ರಮದ ಮನೋಭಾವವನ್ನು ಬೆಳೆಸಿದೆ, ಅವರು ಉನ್ನತ ಗುರಿಗಳನ್ನು ಸಾಧಿಸಲು ಮತ್ತು ಅವರ ಗುರಿಗಳ ಕಡೆಗೆ ಶ್ರದ್ಧೆಯಿಂದ ಕೆಲಸ ಮಾಡಲು ಪ್ರೋತ್ಸಾಹಿಸಿದಂತಹ ಈ ಅಭಿನಂಧನಾ ಕಾರ್ಯಕ್ರಮವಾಗಿದೆ,

ಸಾಧನೆಯ ಮೆಟ್ಟಿಲನ್ನು ಏರುವ ತುಡಿತ ನಮ್ಮಲ್ಲಿರಬೇಕು, ನಮ್ಮ ಸಾಧನೆ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬೇಕು. ಎಂದು ಹೇಳಿದರು

ಸಮಾರಂಭವನ್ನು ಉದ್ದೇಶಿಸಿ ಶಿವಾನಂದ ಪಾಟೀಲ, ರಾಜು ಕಪನೂರ, ಸುರೇಶ ಹಾದಿಮನಿ, ಮಲ್ಲಪ್ಪ ಹೊಸಮನಿ, ದಿನೇಶ ದೊಡ್ಡಮನಿ, ಶಿವಾನಂದ ಹೊನಗುಂಟಿ, ಜೊತೆಗೆ ಅಭಿನಂದನೆ ಸ್ವೀಕರಿಸಿ ಶಂಕರ ಅಳೋಳ್ಳಿ ಮಾತನಾಡಿದರು. 

ವೇದಿಕೆ ಮೇಲೆ ಪೂಜ್ಯ ಬಂತೆ ಜ್ಞಾನಸಾಗರ, ಡಾ.ಎಂಎ ರಶೀದ, ನರೇಂದ್ರ ವರ್ಮ, ಸುರೇಶ ಮೆಂಗನ, ಅಣವೀರ ಇಂಗಿನಶೆಟ್ಟಿ ಮತ್ತು ವಿಜಯ ಕುಮಾರ ಹಳ್ಳಿ ಜೊತೆ ಅನೇಕ ಗಣ್ಯರು ಉಪಸ್ಥಿತರಿದ್ದರು. 

ಸಮಾರಂಭದಲ್ಲಿ ಗೆಳಯರ ಬಳಗದ ಹಾಗೂ ಜಯಂತ್ಯೋತ್ಸವ ಸಮಿತಿಯ ಸಾವಿರಾರು ಯುವಕರು ಮತ್ತು ಮಹಿಳೆಯರು ಭಾಗವಹಿಸಿದ್ದರು.

ಪ್ರಾಸ್ತಾವಿಕವಾಗಿ ಪಿಎಸ ಮೇತ್ರಿ ಮಾತನಾಡಿದರು, ಮರಲಿಂಗ ಯಾದಗಿರ ಸ್ವಾಗತಿಸಿದರು, ಪ್ರವೀಣ ರಾಜನ ನಿರೂಪಿಸಿದರು, ಮಹಾದೇವ ತರನಳ್ಳಿ ವಂದಿಸಿದರು.

√ನನಗೆ ಅಭಿನಂದನೆ ಸಲ್ಲಿಸುವ ನೇಪದಲ್ಲಿ ಅಭಿನಂದನೆ ಜೊತೆಗೆ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ, ಬಡ ಮಹಿಳೆಯಿರಿಗೆ, ಕೂಲಿ ಕಾರ್ಮಿಕರಿಗೆ ಸನ್ಮಾನಿಸಿ, ಅನ್ನಸಂತರ್ಪಣೆ ಮಾಡಿದ ಗೆಳಯರ ಕಾರ್ಯ ಶ್ಲಾಘನೀಯವಾಗಿದೆ :..ಶಂಕರ ಅಳೋಳ್ಳಿ ದಲಿತ ಯುವ ನಾಯಕ ಶಹಾಬಾದ. 

[ ಸಮಾರಂಭದಲ್ಲಿ ತಾಲ್ಲೂಕಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವುದರೊಂದಿಗೆ, ಬಡ ಹಾಗೂ ನೀರ್ಗತಿಕ ಮಹಿಳೆಯರಿಗೆ ಸೀರೆ ಹಂಚಿದರು, ಬಡ ಕೂಲಿ ಕಾರ್ಮಿಕರಿಗೆ ಕಿಟ್ ವಿತರಿಸುವ ಮೂಲಕ ಜನರ ಪ್ರಶಂಸೆಗೆ ಪಾತ್ರವಾಯಿತು].